Monday, 27 August 2018

ಬುದ್ಧನಾಗುವದು ಸುಲಭ....

ಒಂದುದಿನ ರಾತ್ರಿ
ಸದ್ದಿಲ್ಲದೇ ಮನೆ,ಮಠ,
ಹೆಂಡತಿ,ಮಗುವನ್ನು ಬಿಟ್ಟು ಸತ್ಯಾನ್ವೇಷಣೆಗೆ
ಹೊರಡುವದು
ತುಂಬ ಸುಲಭ...

ಯಾಕೆಂದರೆ
ಪುರುಷನಿಗೆ
ಯಾರೂ ಬೆರಳು ತೋರಿಸುವದಿಲ್ಲ...
ಹೆಚ್ಚು ಪ್ರಶ್ನಿಸುವದಿಲ್ಲ...
ಯಾರೂ ದೂಷಿಸುವದಿಲ್ಲ..
ಶಬ್ದಗಳ ಕೂರಂಬುಗಳಿಂದ
ತನು_ ಮನಗಳನ್ನು
ಗಾಯಗೊಳಿಸುವದಿಲ್ಲ..

ಆದರೆ
ಅವನಂತೆ
ಹೆಣ್ಣೊಂದು
ಸದ್ದಿಲ್ಲದೇ
ಒಂದು ರಾತ್ರಿ
ಎಂದಾದರೂ
ಗಂಡ,ಚಿಕ್ಕ ಮಗು,
ಬಿಟ್ಟು ಸದ್ದಿಲ್ಲದೇ
ಸತ್ಯವನ್ನರಸಿ
ಹೋಗಿದ್ದರೆ.....
ಅವಳ ಮಾತಿನಲ್ಲಿ
ಯಾರಾದರೂ
ವಿಶ್ವಾಸವಿಡುತ್ತಿದ್ದರೆ?..
ಅವಳ ಯಾತನೆಯ
ಅಂದಾಜು ಯಾರಿಗಾದರೂ
ಸಿಗುತ್ತಿತ್ತೇ?...
ಅವಳ ಸ್ತ್ರೀತ್ವದ
ಮರ್ಯಾದೆ
ಉಳಿಸುತ್ತಿದ್ದರೇ???.
ಇಡೀ  ಸಮಾಜಕ್ಕೆ
ಸಮಾಜವೇ
ಅವಳ ವಿರುದ್ಧ
ನಿಲ್ಲುತ್ತಿರಲಿಲ್ಲವೇ??

ಬಹುಶಃ
ಅವಳು ಕಂಡ
ಸತ್ಯದ ಅರಿವು
ಇದೇ ಆಗಿರುತ್ತಿತ್ತೇನೋ!!!!!

"ಬುದ್ಧನಾಗುವದು
ಬಹು ಸುಲಭ..
ಆದರೆ ಹೆಣ್ಣಾಗಿ
ಹುಟ್ಟುವದೊಂದು
ಬಹು
ದೊಡ್ಡ
ಸವಾಲು..."

(ಹಿಂದಿ ಮೂಲ)

No comments:

Post a Comment

ಹತ್ತರಿಂದ ಐವತ್ತು- ಹೀಗಿತ್ತು...     ‌               ಆಗಿನ ನಮ್ಮ ಮನೆ Typical ಮಧ್ಯಮ ವರ್ಗದ ಮಾಧ್ವ ಮನೆ...'' ನಿಯಮಗಳು/ಕಟ್ಟಳೆಗಳು ಹೆಚ್ಚು..ಒಬ್ಬ ಮಡಿ...