ಹಲೋ; ಹಲೋ, ಯಾರು ಮಾತಾಡೋವ್ರು?''ನೀನss ಹೇಳು ನೋಡೋಣ..ಎಷ್ಟು ನೆನಪಿಟ್ಟಿ ಅಂತ ಗೊತ್ತಾಗ್ತದ.. ಅತ್ಯಾ, ಏನ್ ಮಾಡ್ಲಿಕ್ಹತ್ತೀರಿ? ಇಲ್ನೋಡ್ರಿ...ಯಾರೋ ಮಾತಾಡ್ಬೇಕಂತಾರ ನಿಮ್ ಜೊತೆ....ಯಾರವಾ?ನೀವss ಹೇಳ್ರಿ...ಅವರ್ಗೆ ಫೋನ್ ಕೊಡ್ತೇನಿ ಮಾತಾಡ್ರಿ; ಹಲೋ,ನನ್ನ ನೆನಪದನೋ...ಏನ್ ಮರ್ತss ಬಿಟ್ಯೋ...ನಿನ್ನ ನಂಬರ್ ಹುಡುಕಲಿಕ್ಕೆ ನಾ ಮಾಡದ ಸರ್ಕಸ್ ಇಲ್ಲ..ಅಂತೂ ಇವತ್ತ ಸಿಕ್ತು..ಎಲ್ಲಿದ್ದೀ? ಏನ್ ತಾನ..? ಒಮ್ಮೆನೂ ನನ್ನ ನೆನಪು ಬರ್ಲ್ಲೇ ಇಲ್ಲೇನು ನಿನಗ? ಎಷ್ಟು ದಿನಾ ಆತು ನಮ್ಮ ಭೆಟ್ಟಿ ಆಗಿ...ನೆನಪು ಮಾಡ್ಕೋ...May 12 ಕ್ಕ vote ಹಾಕೋವಾಗಆದ ಭೆಟ್ಟಿ...ಆಮ್ಯಾಲ ಗಪ್ ಆಗಿ..ಇವತ್ತ ಇವರ ಮುಂದ ಬಯ್ದೆ...; ಅವರss ಯಾಕ ಮಾಡಬೇಕು? ಏನೋ ಕಾರಣ ಇದ್ದೀತು...ನೀನss ಮಾಡಿದ್ರಾತು..ಗೆಳತನದಾಗ ಎಂಥಾ; ನಾ... ನೀ... ಹಗ್ಗ ಜಗ್ಗಾಟ ಅಂದ್ರು... ಅದ್ಕ ಮಾಡ್ದೆ... ನನ್ನ ಹೆಸರು ನಾನss ಮರೆಯೋ ದಿವಸ ಇವು...ಇನ್ನ 50- 60 ವರ್ಷದ ಹಿಂದಿನ ಒಂದನೇತ್ತಾ, ಬಿನ್ನೇತ್ತಾ ಗೆಳತೇರು ಫೋನ್ ಮಾಡಿ ನಾ ಯಾರು ಹೇಳು ಅಂದ್ರ ಪರಿಸ್ಥಿತಿ ಏನಾಗಬೇಡ... ಇನ್ನೊಂದು chance ಕೊಡತೇನಿ... ಅಂದುಕೋತ ಕನಿಷ್ಟ ಎರಡು ,ಮೂರು ' ಊಹು...ಅಲ್ಲ, wrong, ಅಂತ ಆದಮ್ಯಾಲೂ ಹೊಳಿದೇದ್ರ. ? ನನಗ ಅನುಮಾನ.. ಎದುರು ಬಂದ ನಿಂತ್ರೂ ಆಗಲಿಕ್ಕಿಲ್ಲ ಅಂತ...ರಟ್ಟೀಹಳ್ಳಿ ಪ್ರೈಮರಿ ಸ್ಕೂಲ್,ಹೈಸ್ಕೂಲ್... ಧಾರವಾಡದ K.E board, J.SS college,Kumata Kamala Baliga college of edn... ಈ ಎಲ್ಲ ಕಡೆಯ ಗೆಳತಿಯರ ಫೋನ್ಗಳು ಈ ಒಂದೇ ವಾರದಲ್ಲಿ ಬಂದದ್ದು,ಬರುತ್ತಿರುವದು ಸ್ವಾಭಾವಿಕವೋ,ಕಾಕತಾಳೀಯವೋ ಪವಾಡವೋ ತಿಳಿಯುತ್ತಿಲ್ಲ...ಇಂದು FRIENDSHIP DAY ಅಂತೆ..ನನಗೆ ಸುರುವಾಗಿವಾರವಾಯಿತು... ಹಳೆಯ ದಿನಗಳು,ಮಧ್ಯದ ಆಗುಹೋಗುಗಳು,ಸಧ್ಯದ ಪರಿಸ್ಥಿತಿ ಎಲ್ಲದರ ರೀಲುಗಳನ್ನು ಬಿಚ್ಚಿ,ನೆನೆದು,ಹಿಗ್ಗಿ,ಅಷ್ಟಿಟ್ಟು ಕೆಲವೊಮ್ಮೆ ಕುಗ್ಗಿ,ಮುಂದೆ regular contact ಮಾಡುವ ಭರವಸೆಯೊಂದಿಗೆ ಮಾತು ಮುಗಿಸಿದ್ದಾಯ್ತು... ಕಷ್ಟದ ದಿನಗಳನ್ನು ಉದ್ವಿಗ್ನತೆಯಿಲ್ಲದೆ,ಇಂದಿನದನ್ನು ಒಂದುರೀತಿಯ ನಿರ್ಲಿಪ್ತತೆಯಿಂದ,ಮುಂದಿನದನ್ನು ಅನಿಶ್ಚಿತತೆ ,ಹಾಗೂ ಸ್ವಲ್ಪು ಆತಂಕ ಮಿಶ್ರಿತ ಧ್ವನಿಯಲ್ಲಿ ಮಾತನಾಡಿ ಮುಗಿಸಿದರೂ ಏನೋ ಆನಂದ,ನಿರಾಳ ಭಾವನೆ... ಗೆಳೆತನವೊಂದು ವಿಶಾಲ ಆಲದ ಮರದ ನೆರಳು ಅನ್ನುತ್ತಾರೆ ಒಬ್ಬ ಕವಿ ಅದರಲ್ಲಿ ಹರಹು ಇದೆ...ಹಿತವಿದೆ..ಹಾಯಾಗಿಕೆಲ ದಿನ ಕಳೆಯಬಲ್ಲೆವೆಂಬ ಹುಮ್ಮಸು ದೊರೆಯುತ್ತದೆ..ನಾನು ಹಿಂದೊಮ್ಮೆ ನನ್ನ ಕಷ್ಟದ ದಿನಗಳಲ್ಲಿ ಮಾನಸಿಕವಾಗಿ ಕುಗ್ಗಿಹೋಗಿ ಡಾಕ್ಟರರ ಬಳಿ ಹೋದಾಗ ಅವರು ಕೊಟ್ಟ ಸಲಹೆ," ಸಾಕಷ್ಟು ನಿಮ್ಮ ಸ್ನೇಹಿತೆಯರೊಂದಿಗೆ ಕಲೆತು ಇರಿ..ಸುಖ - ದುಃಖ ಹಂಚಿಕೊಳ್ಳಿ..ಯಾವ ವಿಷಯವನ್ನೂ ಮನದಲ್ಲಿಟ್ಟುಕೊಳ್ಳದೇ ವಿನಿಮಯಮಾಡಿಕೊಳ್ಳಿ' ನನಗದು ಇಂದಿಗೂ ರಾಮಬಾಣ...ನನ್ನ ಸ್ನೇಹ ಮಂಡಲ ದೊಡ್ಡದು,ಗಾತ್ರದಿಂದ,...ಹೃದಯದಿಂದ...ಯೋಗ್ಯತೆಯಿಂದ...LOVE YOU FRIENDS....THANK YOU ALLLLLL
Sunday, 5 August 2018
Subscribe to:
Post Comments (Atom)
*O𝐥𝐝 𝐚𝐧𝐝 𝐘𝐨𝐮𝐧𝐠*: *𝐖𝐡𝐞𝐧 𝐈 𝐰𝐚𝐬 𝐘𝐎𝐔𝐍𝐆, 𝐈 𝐟𝐨𝐮𝐧𝐝 𝐢𝐭 𝐃𝐈𝐅𝐅𝐈𝐂𝐔𝐋𝐓 𝐭𝐨 𝐖𝐀𝐊𝐄 𝐔𝐏. 𝐖𝐡𝐞𝐧 𝐈 𝐚𝐦 𝐎𝐋𝐃...
-
ಬಿಂಬ-೧ ಗೆಲುವು... ನನ್ನ ಮನಶ್ಯಾಸ್ತ್ರದ ಸಂಶೋಧನೆಯ ಭಾಗವಾಗಿ ನನ್ನ ಅಜ್ಜಿಯ ಸಂದರ್ಶನ ತೆಗೆದುಕೊಳ್ಳುತ್ತಿದ್ದೆ."ಯಶಸ್ಸು ಅಂದ್ರೆ ನಿನ್ನ ದೃಷ್ಟಿಯಲ್ಲಿ ಯಾವುದು...
-
ಮಗುವಿನ ಸ್ವಗತ ಏನು ಹೇಳಲಿ ನಿಮಗೆ ನನ್ನ ಮನಸಿನ ಪೇಚು..? ದೊಡ್ಡವರು ಎಂಬುವರು ಒಗಟು ನನಗೆ... ಮಾಡಬಾರದುದೆಲ್ಲ ಮರೆಯದೆ ಹೇಳುವರು.. ಮಾಡಬಾರದ್ದನ್ನೇ ಮಾಡುವರು ...
-
ಒಮ್ಮೆ ಒಬ್ಬ ಹಿರಿಯ ಸಾಧಕರನ್ನು ,ಅವರ ' ಶತಾಯುಷ್ಯದ' ಗುಟ್ಬಿನ ಬಗ್ಗೆ ಸಂದರ್ಶಕನೊಬ್ಬ ಪ್ರಶ್ನಿಸಿದಾಗ ಅವರು ಹೇಳಿದ್ದು," ಗುಟ್ಟೂ ಇಲ್ಲ, ಮಣ್ಣೂ ಇಲ್ಲ,...
No comments:
Post a Comment