Monday, 27 August 2018

ಹಾಗೇ ಸುಮ್ಮನೇ....


ಒಂದು ದಿನ ಮನೆಯಲ್ಲಿ ಯಾರೂ ಇರಲಿಲ್ಲ...ಒಬ್ಬಳೇ ಕುಳಿತಿದ್ದೆ..ಮನೆಯ ಬೆಳಕಿಂಡಿಯ ಕೆಳಗೆ ಗುಬ್ಬಿಯೊಂದು ಗೂಡು ಕಟ್ಟುತ್ತಿತ್ತು..ಚುಂಚಿನಲ್ಲಿ ಕಡ್ಡಿಗಳನ್ನು ಕಚ್ಚಿಕೊಂಡು ಕ್ಷಣಾರ್ಧದಲ್ಲಿ ಪ್ರತ್ಯಕ್ಷವಾಗುತ್ತಿತ್ತು..ನಿಮಿಷಾರ್ಧದಲ್ಲಿ ಮತ್ತೆ ಮಾಯ...ಅದರದೇ ಒಂದು ಪುಟ್ಟ ಗೂಡು ಸದ್ದಿಲ್ಲದೇ ರೂಪುಗೊಳ್ಳುತ್ತಿತ್ತು..
        ದಿನಗಳುರುಳಿದವು...
ಹವೆ ಬದಲಾಯಿತು..ಮರಿಗುಬ್ಬಿಗಳೆರಡು ಚಡಪಡಿಸಹತ್ತಿದವು..ತಾಯಿಗುಬ್ಬಿ ಅವುಗಳನ್ನು ಕಾಳಜಿಯಿಂದ ಸಾಕುತ್ತಿತ್ತು..ಮರಿಗಳಿಗೆಪುಟ್ಟ ಪುಟ್ಟ ರೆಕ್ಕೆಗಳು ಮೂಡಿದಾಗ ಅದರ ಕೌತುಕವೇ ಕೌತುಕ...
         ಅವುಗಳನ್ನು ನೋಡನೋಡುತ್ತಲೇ ನಮ್ಮಗಳ ನಡುವೆ ಒಂದು ಅರಿಯದ ಸಂಬಂಧ ಬೆಳೆಯುತ್ತಲೇ ಹೋಯಿತು..
      ‌     ‌ಕೆಲವೇ ದಿನಗಳಲ್ಲಿ ರೆಕ್ಕೆಗಳು ಬಲಿತಮೇಲೆ ಆ ಎರಡೂ ಮರಿಗುಬ್ಬಿಗಳು ತಾಯಿಗುಬ್ಬಿಯನ್ನು ಏಕಾಕಿಯಾಗಿ ಬಿಟ್ಟು ಸಂಬಂಧ ಲೆಕ್ಕಿಸದೇ ಹಾರಿಹೋದವು...
    ನಾನು ವ್ಯಥಿತಳಾಗಿ ನೋಡುತ್ತಲೇ ಇದ್ದೆ...
        " ಮನುಷ್ಯರ ಮಕ್ಕಳು ಹುಟ್ಟುತ್ತಲೇ ತಮ್ಮ ಹಕ್ಕಿಗಾಗಿ ಬಡಿದಾಡುತ್ತಾರೆ..ಸಿಗದಿದ್ದರೆ ತಂದೆ- ತಾಯಿಗಳನ್ನು ಕೋರ್ಟ ಕಚೇರಿಗೂ ಎಡತಾಕಿಸುತ್ತಾರೆ...ಜನ್ಮಕೊಟ್ಟ ಮಾತ್ರಕ್ಕೆ ಅವರಿಗೆ ಕೊಡಲು ಏನೂ ಇಲ್ಲದ ನನ್ನ ಬಳಿ ಅವರೇಕಿರಬೇಕು"_
ತಾಯಿಗುಬ್ಬಿ ಪ್ರಶ್ನಿಸಿದಂತೆ ಭಾಸವಾಯಿತು..
( ಹಿಂದಿಯಿಂದ)
   ‌‌‌

No comments:

Post a Comment

🌸 Wedding Invitation 🌸 With hearts full of joy and gratitude, We, the Kulkarni Family, invite you to celebrate a bond. As our beloved son ...