Monday, 27 August 2018

ಹಾಗೇ ಸುಮ್ಮನೇ....

    ‌‌‌          ‌ ಶ್ರೀರಾಮಚಂದ್ರ( ದೇವರು) ಸೀತಾಮಾತೆಗೆ ಹೇಳುತ್ತಾರೆ...
          ‌‌‌        ಮುಂದೊಂದು ದಿನ ಘೋರ ಕಲಿಯುಗವೊಂದು ಬರುವದಿದೆ..ಆಗ ಯಾರು ಯಾರನ್ನೂ ಕೇಳುವದಿಲ್ಲ..ಕಂಡು ಕೇಳರಿಯದ ವಿಚಿತ್ರ ಸಂಗತಿಗಳು ಸಂಭವಿಸುತ್ತವೆ..ಹಂಸಗಳು  ಗರಿಕೆ ಹುಲ್ಲು ತಿನ್ನಲಾರಂಭಿಸುತ್ತವೆ..ಕಾಗೆಗಳು ಮುತ್ತುಗಳನ್ನು ತಿನ್ನುತ್ತವೆ...
                      ಧರ್ಮ- ಕರ್ಮಗಳು ಇರುತ್ತವೆ...ಆದರೆ( ಶರ್ಮ್) ನಾಚಿಕೆ ಯಂಬುದು ಇರುವದಿಲ್ಲ..ಮಾತು ಮಾತಿಗೂ ಮಕ್ಕಳು ತಂದೆ- ತಾಯಿಗಳನ್ನು ಕಣ್ಣು ಕೆಕ್ಕರಿಸಿ ಹೆದರಿಸಿ ಸತಾಯಿಸುತ್ತಾರೆ...‌‌
             ‌‌        ಆಳುವವರಿಗೂ ,ಆರಿಸಿ ಕೊಳ್ಳುವವರಿಗೂ ನಿತ್ಯ ಮಾರಾಮಾರಿ...ಯಾರು ಯಾರ ಮಾತನ್ನೂ ಕೇಳದೇ ಪರಸ್ಪರ ಕಾಲೆಳೆತದಲ್ಲಿ ನಿರತರಾಗುತ್ತಾರೆ..( ಅಂಧೇರ್ ನಗರಿ...ಚೌಪಟ್ ರಾಜಾ) ಯಾರ ಬಡಿಗೆಯೋ ಅವರದೇ ಎಮ್ಮೆ...ಇನ್ನೂ ಹೇಳಬೇಕೆಂದರೆ ' (survival of  d fittest) 'ಯಾರು ಬಲವಾನರೋ ಅವರು ಮಾತ್ರ ಬದುಕುತ್ತಾರೆ)...
                     ಆ ಕಲಿಯುಗದಲ್ಲಿ ಕಳ್ಳ ಹಣ ಹಾಗೂ ಕಪ್ಪು ಮನಸ್ಸಿನ ಮನುಷ್ಯರೇ ಹೆಚ್ಚಾಗಿ ಕಾಣಸಿಗುತ್ತಾರೆ.ಕಳ್ಳರು,ಸುಳ್ಳರು,ಲೂಟಿಕೋರರೇ ಹೆಚ್ಚಾಗಿ ,ಸಜ್ಜನರು ಅಲ್ಪ ಸಂಖ್ಯಾತರಾಗುತ್ತಾರೆ..ಲೋಭಿಗಳಿಗೆ,ಭೋಗಿಗಳಲ್ಲಿ ತಲ್ಲೀನರಾದವರಿಗೆ ಸನ್ಯಾಸಪಟ್ಟ ದೊರಕುವ ಸಂಭವಗಳೇ ಹೆಚ್ಚು..."

                ಮೇಲೆ ಹೇಳಿದ್ದರಲ್ಲಿ ಒಂದಂಶವೂ ನನ್ನದಲ್ಲ..೧೯೭೦ ರಲ್ಲಿ ಬಿಡುಗಡೆಯಾದ " ಗೋಪಿ" ಚಲನಚಿತ್ರದಲ್ಲಿ ಗೋಪಿ ಪಾತ್ರಧಾರಿ
ದಿಲೀಪಕುಮಾರರಿಂದ ಹಾಡಿಸಲ್ಪಟ್ಟ,(ರಾಜೇಂದ್ರ ಕಿಶನ್ ಅವರಿಂದ ಬರೆಯಲ್ಪಟ್ಟು  ಮಹೇಂದ್ರ ಕಪೂರರ ಧ್ವನಿಯಲ್ಲಿ ಆನಂದಜಿ- ಕಲ್ಯಾಣಜಿ ಅವರಿಂದ ಸ್ವರ ಸಂಯೋಜನೆಗೊಂಡ) ಹಾಡು fb ಯಲ್ಲಿ share
ಆಗಿತ್ತು.ಎರಡೆರಡು ಸಲ ಕೇಳಿದಾಗ( ನನ್ನ fb ಯಲ್ಲೂ share ಮಾಡಿದ್ದೇನೆ) ಇಂದಿನ ದಿನಮಾನಕ್ಕೂ, ದಿನವೊಂದಕ್ಕೂ ಪ್ರಸಾರವಾಗುವ ಸ್ಫೋಟಕ ಸುದ್ದಿಗಳಲ್ಲೂ,ವಿಧಾನಸಭಾ ಕಲಾಪಗಳಲ್ಲೂ,
ಪ್ರಕಟಿತ ಪತ್ರಿಕೆಗಳಲ್ಲೂ ಇರುವ ಸಾಮ್ಯ ನನ್ನನ್ನು ಬೆಚ್ಚಿ ಬೀಳಿಸಿತಷ್ಟೇ ಅಲ್ಲ... ಅನುವಾದಿಸಿ post ಮಾಡಲೇಬೇಕೆಂಬ ಒತ್ತಾಯ ಶುರುವಾಯಿತು..
ಇದರಲ್ಲಿರುವ ರಾಮನ ಹೆಸರೆಳೆದೆಳೆದು ವಾದ ಮಾಡುವದು ಬೇಡ...ಯಾರು ಯಾರಿಗೆ ಹೇಳಿದರು ಎಂಬುದು ಮುಖ್ಯವಲ್ಲ..ಹೇಳಿದ್ದು ಏನು ? ಅದು ಮುಖ್ಯ..
ಆ ಮಾತುಗಳ ಸತ್ಯಾಸತ್ಯತೆ ಈ post ನ ತಿರುಳು...
( ಬೇಕೆಂದವರಿಗೆ ಮೂಲ ಕವನ comments section ನಲ್ಲಿ)
   ‌‌‌
   ‌  ‌‌‌    ‌ ‌    ‌

No comments:

Post a Comment

*O𝐥𝐝 𝐚𝐧𝐝 𝐘𝐨𝐮𝐧𝐠*: *𝐖𝐡𝐞𝐧 𝐈 𝐰𝐚𝐬 𝐘𝐎𝐔𝐍𝐆, 𝐈 𝐟𝐨𝐮𝐧𝐝 𝐢𝐭 𝐃𝐈𝐅𝐅𝐈𝐂𝐔𝐋𝐓 𝐭𝐨 𝐖𝐀𝐊𝐄 𝐔𝐏. 𝐖𝐡𝐞𝐧 𝐈 𝐚𝐦 𝐎𝐋𝐃...