Monday, 27 August 2018

News please...

ಹಾಗೇ ಸುಮ್ಮನೇ.....
        ‌‌‌          ‌  ನಾನುವಿದ್ಯಾರ್ಥಿಯಾಗಿದ್ದಾಗ,ನಂತರ ಶಿಕ್ಷಕಿಯಾಗಿದ್ದಾಗ ಶಾಲೆಗಳಲ್ಲಿ ಒಂದು ಪರಿಪಾಠವಿತ್ತು...ಪ್ರಾರ್ಥನಾ ಸಭೆಗಳಲ್ಲಿ ಪ್ರಾರ್ಥನೆಯ ನಂತರ ದಿನಕೊಬ್ಬ ಹುಡುಗ/ಗಿ ಅಂದಿನ ಪಂಚಾಂಗ ಹೇಳಿದರೆ ಇನ್ನೊಬ್ಬ/ಳು ಅಂದಿನ ಸಮಾಚಾರ ಪತ್ರಿಕೆಗಳ ಮುಖ್ಯಾಂಶಗಳನ್ನು ಸಭೆಯಲ್ಲಿ ಓದಿ ಹೇಳಬೇಕು..ಸರದಿಯಂತೆ ವಿದ್ಯಾರ್ಥಿಗಳ ಆಯ್ಕೆ...
  ‌‌            ಈ ಚಟುವಟಿಕೆಗೆ ಬಹೂಪಯೋಗಿ ಕಾರಣಗಳಿದ್ದವು...
      ‌‌        ೧) ಮಕ್ಕಳಿಗೆ ಪ್ರಚಲಿತ ವಿದ್ಯಮಾನಗಳ ತಿಳುವಳಿಕೆ...
                ೨) ಮಕ್ಕಳ ಸಭಾಕಂಪನ ಇಲ್ಲವಾಗಿಸಿ ಸಭಿಕರನ್ನು ಎದುರಿಸಲು ಬೇಕಾದ ಧೈರ್ಯ ತುಂಬುವದು...
‌‌‌‌‌‌‌‌     ‌‌‌‌‌‌          ೩) ಮುಂದಾಳುತನದ ಗುಣಗಳ ಉದ್ದೀಪ‌ನ....(.leadership qualities)
                4) ಗಟ್ಟಿ,ಓದು-( loud reading)-ನಿಂದ ಸಿಗುವ ಶಬ್ದಗಳ ಸ್ಪಷ್ಟತೆ,ವೇಗ,ಶುದ್ಧ ಶಬ್ದ ಉಚ್ಚಾರಣೆಗಳು ಇನ್ನಿತರ ತರಬೇತಿ...
                  ೫) ವಿದ್ಯಾರ್ಥಿಗಳಿಗಿರಬಹುದಾದ ನ್ಯೂನ್ಯತೆಗಳನ್ನು ಗುರುತಿಸಿ  ತಿದ್ದಿ ತನ್ಮೂಲಕ  ಸುಧಾರಿಸಿ ಆತ್ಮವಿಶ್ವಾಸ ಹೆಚ್ಚಿಸುವದು...
                  
ಇಂದೇಕೋ ಈ ವಿಚಾರ ನೆನಪಿಗೆ ಬಂದು ಇಂದಿನ ಪೇಪರಿನಲ್ಲಿ  ಕೆಲವು ಮುಖ್ಯಾಂಶ ಆರಿಸೋಣ ಅನಿಸಿದಾಗ ಸಿಕ್ಕ ಅಂಶಗಳು..
  ‌        _ ಬಸ್ ಕಣಿವೆಗೆ ಉರುಳಿ ೨೭ ಮಕ್ಕಳ ಸಾವು..
           _ಶಾಸಕನ ಮೇಲೆ ಅತ್ಯಾಚಾರದ ಆರೋಪ....
             _ದಾಳಿಗೆ ಸಂಚು ರೂಪಿಸಿದ ರಾಜತಾಂತ್ರಿಕ ಅಧಿಕಾರಿ....
              _ಅಭ್ಯರ್ಥಿಗಳ ಆಯ್ಕೆಯ ಪಟ್ಟಿಗೆ ಭುಗಿಲೆದ್ದ ಆಕ್ರೋಶ....
               _ಕಾವೇರಿ ವಿವಾದ...ಸುಪ್ರೀಮ್ ಕೋರ್ಟ ತರಾಟೆ...
                  _ನಿಯಮಗಳು ಮೂಲೆಗೆ....ವಾಹನ ಬೀದಿಗೆ...
                  _canteen ಬಳಿಯೇ ಕಸ ವಿಂಗಡನೆ...
                   _ನೂತನ ವಧುವಿನ ಶಂಕಾಸ್ಪದ ಸಾವು....
       
        
‌‌‌‌

No comments:

Post a Comment

*O𝐥𝐝 𝐚𝐧𝐝 𝐘𝐨𝐮𝐧𝐠*: *𝐖𝐡𝐞𝐧 𝐈 𝐰𝐚𝐬 𝐘𝐎𝐔𝐍𝐆, 𝐈 𝐟𝐨𝐮𝐧𝐝 𝐢𝐭 𝐃𝐈𝐅𝐅𝐈𝐂𝐔𝐋𝐓 𝐭𝐨 𝐖𝐀𝐊𝐄 𝐔𝐏. 𝐖𝐡𝐞𝐧 𝐈 𝐚𝐦 𝐎𝐋𝐃...