Monday, 27 August 2018

ಹಾಗೇ ಸುಮ್ಮನೇ....


ನಾನು ಫೇಸ್ ಬುಕ್ಕಿಗೆ ಬಂದದ್ದು ೨೦೧೪ರಲ್ಲಿ .ಅದಕ್ಕೂ ಮೊದಲು phone call ಮಾಡುವ,ಸ್ವೀಕರಿಸುವ ಎರಡೇ button ಗಳಿದ್ದ ,ಅಂಗೈ ಮುಚ್ಚಿದರೆ ಆರಾಮಾಗಿ ಬೆಚ್ಚಗೆ ಮಲಗಿಬಿಡುವ  ಪುಟ್ಟದೊಂದು Phone ಇತ್ತು ನನ್ನ ಬಳಿ .....ದಿನಗಳೆದಂತೆ  ವಾಮನ ತ್ರಿವಿಕ್ರಮನಾಗಿ ಬೆಳೆಯುತ್ತ,ಹೆಚ್ಚುಹೆಚ್ಚು ಜಾಗ ಬೇಡುವದು ಸುರುವಿಟ್ಟುಕೊಂಡಾಯಿತು .ಮೊದ ಮೊದಲು ಉಳ್ಳವರ ಕೈಯಲ್ಲಷ್ಟೇ ಕಾಣಿಸಿಕೊಂಡು ಕ್ರಮೇಣ " ಮೊಬೈಲ್ ಇಲ್ಲದ ಮನೆಯ ಸಾಸಿವೆ ತೆಗೆದುಕೊಂಡು ಬಾ" ಎಂದು ಬುದ್ಧ - ಅಕಸ್ಮಾತ್ ಈ ದಿನಗಳಲ್ಲಿ ಇದ್ದರೆ  - ಕಿಸಾ ಗೌತಮಿಗೆ ಹೇಳುತ್ತಿದ್ದನೇನೋ ಎಂಬ joke ಗೆ ಬಂದು ನಿಂತಿದೆ...
Button ಗಳು App ಗಳು ಹೆಚ್ಚಿದಂತೆ ಅನುಕೂಲಗಳೂ ಹೆಚ್ಚಿ,ಬಳಕೆಯೂ ಹೆಚ್ಚಿ ಅದಿಲ್ಲದೇ ಬದುಕಿಲ್ಲ ಎಂಬ ಹಂತಕ್ಕೆ ಸಧ್ಯ ನಿಂತಿರುವದು ಇಂದಿನ ವಾಸ್ತವ...
              ನಗರ ಪ್ರದೇಶಗಳಲ್ಲಿ ಎಲ್ಲರೂ ಬಹುಕಾಲ ಮನೆಯಿಂದ ದೂರವಿರುವ ಕಾರಣಕ್ಕೆ ಒಬ್ಬರಿಗೊಬ್ಬರು ಅಗತ್ಯಗಳಿಗೆ ಅವಲಂಬಿಸಬೇಕಾಗಿ ಬಂದಿರುವದರಿಂದ ಅದು ಒಂದು necessary evil ಎಂಬಂತೆ
ಆಗಿಹೋಗಿದೆ..ಈ ಪರಿಸ್ಥಿತಿಯನ್ನು ಎಲ್ಲರೂ ದೂಷಿಸುತ್ತೇವೆ...ಆದರೆ ನನ್ನನ್ನೂ ಹಿಡಿದು ಅದರ ದಾಸರಾಗಿದ್ದೇವೆ.ಪರಸ್ಪರ ಮಾತುಕತೆಗಳು ನಿಂತಿವೆ..ಹುಡುಗರ ಆಟ,ಅಭ್ಯಾಸಗಳ ಮೇಲೆ ಗಂಭೀರ ಪರಿಣಾಮಗಳಾಗಿವೆ...ವಾಸ್ತವ ಮರೆತು ಕನಸುಗಳ ಖರೀದಿಗೆ ನಿಂತಿದ್ದೇವೆ..."ಎಲ್ಲ ಸರಿಯಿದೆ" ಎಂದು ನಮಗೆ ನಾವೇ ಪೊಳ್ಳು ಆಶ್ವಾಸನ ಕೊಟ್ಟುಕೊಳ್ಳುತ್ತಿದ್ದೇವೆ.
           ಅಂದಮಾತ್ರಕ್ಕೆ ಅದನ್ನು ಆರೋಪಿಸಿ ಪ್ರಯೋಜನವಿಲ್ಲ.ವಿಜ್ಞಾನದಂತೆ ಅದನ್ನುವರವೋ ಶಾಪವೋ ಮಾಡುವದು ನಮ್ಮ ಕೈಯಲ್ಲಿದೆ...ಅದೊಂದು ಮಾನವನ ಅತ್ಯದ್ಭುತ ಆವಿಷ್ಕಾರ..ಇಡೀ ಬದುಕಿನ ಮಗ್ಗಲನ್ನೇ ತಿರುವಿ ಹಾಕಿದೆ..ಇಡೀ ಪ್ರಪಂಚವನ್ನೇ ಅಂಗೈಯಲ್ಲಿ ತೆರೆದಿಟ್ಟಿದೆ..ಸೂಕ್ತ ಬಳಕೆ  ಖಂಡಿತಕ್ಕೂ ಬದುಕು ಬದಲಿಸಬಲ್ಲದು...
                 ಆದರೆ ಅದೇ ಆಗುತ್ತಿಲ್ಲ.ಎಲ್ಲರ ಅಂಗೈ ನೆಲ್ಲಿಯಾಗಿ ಬಹುತೇಕ ಜನರನ್ನು,ಅಷ್ಟೇಯೇಕೆ ಮಕ್ಕಳನ್ನೂ ತನ್ನ ಕಬಂಧ ಬಾಹುಗಳಲ್ಲಿ ಕವಚಿ ಹಿಡಿದಿದೆ..ಯುಕ್ತಾಯುಕ್ತತೆಯ ಅರಿವಿಲ್ಲದೇ ಬಳಕೆಯಾಗುತ್ತಿದೆ..ಯೋಗ್ಯ ಬಳಕೆ ಮಾಡಿದ ಪವಾಡಗಳು ಅದ್ಭುತವಿದ್ದಷ್ಟೇ ಅನುಚಿತ ಬಳಕೆಯಿಂದಾದ ಪರಿಣಾಮಗಳು ಭಯಾನಕವಾಗಿವೆ...
              " ಅತಿ ಸರ್ವತ್ರ ವರ್ಜಯೇತ್" - ಅತಿಯಾದರೆ ಅಮೃತವೂ ವಿಷವಾದಂತೆ...ಎಂಬುದೊಂದು ಮಾತಿದೆ....ಈಗ ಆಗುತ್ತಿರುವದೂ ಅದೇ....ಪರಿಹಾರ....?
                ಆ ದೇವರಿಗೇ ಗೊತ್ತು....ಬರೆಯುತ್ತ ಹೋದರೆ ಮಹಾಭಾರತದಂತೆ ಹದಿನೆಂಟು ಅಧ್ಯಾಯ ಮೀರಿ ಹೋಗಬಹುದು..ಆ ಕಾರಣಕ್ಕಾಗಿ ಆ ಕೆಲಸ ಬೇಡ...ಇನ್ನೇನಿದ್ದರೂ  mobile ನೊಂದಿಗೇನೇ ನೇರ ಹಣಾಹಣಿ....
              ನಿನ್ನೆ ಗ್ರಹಣವಿದ್ದಾಗ ದಿನದ ದಿನಚರಿ ಸ್ಥಗಿತಗೊಂಡು  ಸ್ವಲ್ಪು ಸಮಯ ಖಾಲಿ ಕುಳಿತಾಗ ನನ್ನ ಬುದ್ಧಿಗೆ ಹಿಡಿದ ' ಗ್ರಹಣ ಮೋಕ್ಷ 'ವಾದದ್ದು ಹೀಗೆ...

No comments:

Post a Comment

ನೀನಿನ್ನೂ ಇರಬೇಕಿತ್ತು ಮನೋಜ...                       ನಿನಗಾಗಿಯೇ/ನಿನ್ನೆಲ್ಲ ಕನಸು ಗಳನ್ನು ಸಾಕಾರಗೊಳಿಸಿಕೊಳ್ಳುವುದ ಕ್ಕಾಗಿಯೇ...ನೀನೇ ಕಟ್ಟಿಸಿದ ಹೊಸಮ ನೆ /ನಿನ...