Sunday, 12 August 2018

ಹಾಗೇ ಸುಮ್ಮನೇ...

ಮತ್ತೆ ಬಂತು ಶ್ರಾವಣ....ಎಲ್ಲೆಲ್ಲಿಯೂ ಸಂಭ್ರಮ...ಕಂಡಲ್ಲೆಲ್ಲ  ಹಸಿರ ಹಬ್ಬ...ಸಿಹಿ ಭೋಜನ..ಜೋಕಾಲಿ...ತವರ ಸಡಗರ...ಉಡಿಯಕ್ಕಿ,ಸೀರೆ, ಬಳೆಗಳ ಭರಾಟೆ...ಬಂಧು ಬಾಂಧವರ ಮಿಲನ...ಸಾಲು ಸಾಲು ಸಂಭ್ರಮಗಳು...ಬೇರೆಬೇರೆ ರೂಪದಲ್ಲಿ...... ಬೇರೆ ಬೇರೆ ಬಣ್ಣಗಳಲ್ಲಿ....                  ಆದರೆ ಮನುಷ್ಯನ ಜೀವನದಲ್ಲಿ ನಿತ್ಯ ಸಂಭ್ರಮದ ಕಾಲವೊಂದು ಇರುತ್ತದೆ.ಅದಕ್ಕೆ ಬಾಲ್ಯವೆಂದು ಹೆಸರು...ಬದುಕಿನ ಎಲ್ಲ ಜಂಜಾಟಗಳಿಂದ ದೂರವಾದ, ಕಪ್ಪು - ಬಿಳುಪಿನ ಕಲ್ಪನೆಯಿಂದ ಹೊರತಾದ ,ಬಣ್ಣಬಣ್ಣದ ಬಾಲ್ಯ...            ‌ ‌ ‌‌‌‌        ‌‌‌' ಬಾಲ್ಯ' ಎಂದೂ ಮುಗಿಯದ ಬಾಯಸಿಹಿ...ಎಂದೆಂದಿಗೂ ಮಧುರ..ಹಾಗೆಂದಕೂಡಲೇ ನೆನಪಿಗೆ ಬರುವದು...ಜಗಜಿತ ಸಿಂಗ್ ಹಾಗೂ ಚಿತ್ರಾಸಿಂಗ್ ಅವರು ಹಾಡಿದ evergreen ಗಜಲ್..." ಯೆ ದೌಲತ ಭೀ ಲೇ ಲೋ...ಯೇ ಶೊಹರತ್ ಭೀ ಲೇ ಲೋ..ಭಲೇ ಛೀನ ಲೋ ಮುಝ ಸೆ ಮೇರೀ ಜವಾನೀ...ಮಗರ್ ಮುಝಕೋ ಲೌಟಾದೋ ಬಚಪನ ಕಾ ಸಾವನ್...ವೋ ಕಾಗಜ ಕಿ ಕಸ್ತೀ...ಓ ಬಾರಿಶ್ ಕಾ ಪಾನೀ....         ' ಬದುಕೆ,ನನ್ನ ಈ ವರೆಗೆ ಗಳಿಸಿದ ಹೆಸರು,ಕೀರ್ತಿ, ಸಂಪತ್ತು,ದೌಲತ್ತು, ವೈಭವ,ಆಡಂಬರ ಎಲ್ಲವನ್ನೂ ವಾಪಸ್ ತೆಗೆದುಕೊಂಡು ಬಿಡು..      ‌   ‌        ಬದಲಾಗಿ ನನ್ನ ಬಾಲ್ಯ ಮರಳಿಸು...ಆ ಶ್ರಾವಣದ ಮಳೆ,ಕಾಗದದ ದೋಣಿ,ನನ್ನ ಪುಟ್ಟ ಮೊಹಲ್ಲಾದ ಆ ಅಜ್ಜಿ, ಅವಳು ಹೇಳುತ್ತಿದ್ದ ಚಂದದ ಕಥೆಗಳು,ಆ ಕಥೆಗಳೊಳಗಿನ ಅಪ್ಸರೆಯರು, ಆ ಮರೆಯದ ಸುಂದರ ರಾತ್ರಿಗಳನ್ನು ಮರಳಿಸು...       ‌             ಬಿರುಬಿಸಿಲಿನಲ್ಲೂ ಮನೆಬಿಟ್ಟು ಹೋಗುವ ಸ್ವಾತಂತ್ರ್ಯ ವನ್ನು ,ಮುದ್ದಾದ ಪುಟ್ಟ ಪುಟ್ಟ ಪಕ್ಷಿಗಳನ್ನು,ಚಿಟ್ಟೆಗಳನ್ನು ಬೆಂಬತ್ತುವ ಹುಮ್ಮಸನ್ನು ,ಬೊಂಬೆಗಳ ಮದುವೆಯಲ್ಲಿಯ ಸುಳ್ಳು ಜಗಳಗಳನ್ನು ಮರಳಿಸು....                  ಮನಸಾರೆ ಜೋಕಾಲಿ ಜೀಕುವದು, ಬೀಳುವದು,ಏನೂ ನಡದೇಯಿಲ್ಲಯಂಬಂತೆ ಪುನಃ ಜೀಕುವದು ...ಒಹ್ !!!ಆ ಸುವರ್ಣ ಯುಗವನ್ನೊಮ್ಮೆ  ದಯಮಾಡಿ ಮರಳಿಕೊಡು...                      ಆಟದ ಭರದಲ್ಲಿ ಒಡೆದ ಬಳೆಗಳ ಚೂರುಗಳನ್ನು,ಅವುಗಳು ಮಾಡಿದ ಗಾಯದ ಗುರುತುಗಳನ್ನು,ಮರಳಿಸು...ವೇಳೆ ಸಿಕ್ಕಾಗಲೆಲ್ಲ ಏರಿ ಕುಳಿತುಕೊಳ್ಳುತ್ತಿದ್ದ ಮರಳರಾಶಿ,ಅದರಲ್ಲಿ ಗೂಡುಗಳನ್ನು ಕಟ್ಟಿ,ಕೆಡವಿ,ಮತ್ತೆ ಕಟ್ಟಿ ಆಡುತ್ತಿದ್ದ ಆ ಮನಮೋಹಕ ದಿನಗಳನ್ನುವಾಪಸ್ ಕೊಡು...              ‌ಆದಿನಗಳ ಮುಗ್ಧ ಮನಸ್ಸುಗಳನ್ನು, ಜೀವಕ್ಕೆ ಜೀವವಾದ ಆಟಿಗೆಗಳನ್ನು,ಅಮಾಯಕ ಬಾಲ್ಯದ  ಹೊಂಗನಸುಗಳನ್ನು ,ಜಗತ್ತಿನ ಗೊಡವೆಯಿಲ್ಲದ,ಸುಳ್ಳುಸಂಬಂಧಗಳ ಬಂಧವಿಲ್ಲದ ಆ ಸುಂದರ ಬಾಲ್ಯದ ದಿನಗಳನೊಮ್ಮೆ ಮರಳಿಕೊಟ್ಟುಬಿಡು ಬದುಕೆ..                    ಬದಲಿಗೆ ಈಗಿನ ನನ್ನ ಇಡೀ ಬದುಕನ್ನೇ ನಿನಗೆ ಧಾರೆಯರೆಯುತ್ತೇನೆ"        ‌          ಹೇಳಲು ಏನಾದರೂ ಉಳಿದಿದೆ ಅನಿಸುತ್ತಿದೆಯೇ?????

No comments:

Post a Comment

*O𝐥𝐝 𝐚𝐧𝐝 𝐘𝐨𝐮𝐧𝐠*: *𝐖𝐡𝐞𝐧 𝐈 𝐰𝐚𝐬 𝐘𝐎𝐔𝐍𝐆, 𝐈 𝐟𝐨𝐮𝐧𝐝 𝐢𝐭 𝐃𝐈𝐅𝐅𝐈𝐂𝐔𝐋𝐓 𝐭𝐨 𝐖𝐀𝐊𝐄 𝐔𝐏. 𝐖𝐡𝐞𝐧 𝐈 𝐚𝐦 𝐎𝐋𝐃...