Monday, 27 August 2018

ಹಾಗೇ ಸುಮ್ಮನೇ...

"ದೇವರಿಗೆ ಈ ಜಗತ್ ಸೃಷ್ಟಿ ಮಾಡಿದಾಗ ಅಲ್ಲಿ ವಾಸಿಸುವ ಮನುಷ್ಯನ ಬಗ್ಗೆ ಒಂದು ಅದ್ಭುತ ಕಲ್ಪನೆ ಯಿತ್ತು.ಅವನನ್ನು ಪರಿಪೂರ್ಣ ,ಸ್ವತಂತ್ರ, ಅಪರೂಪದ ಜೀವಿಯಾಗಿಸುವ ಕನಸಿತ್ತು..ಅಂತೆಯೇ ಗುಣ,ಸೌಂದರ್ಯ,ಬಲ, ಬುದ್ಧಿ,ತಾಳ್ಮೆ ,ಸಾಹಸ  ಎಲ್ಲವನ್ನೂ ಒಳಗೊಂಡ ಮೂಸೆಗಳ ಮಹಾ ಸಂಗ್ರಹ ಇಟ್ಟುಕೊಂಡೇ ಕುಳಿತ..ಎಲ್ಲವೂ ಬಯಸಿದಂತಾದ ಮೇಲೆ ಮನುಷ್ಯನ ಅಪ್ರತಿಮ ಸೃಷ್ಟಿ ಮುಗಿಯಿತು..ದೇವ ತನ್ನ ಕೌಶಲ್ಯಕ್ಕೆ ತಾನೇ ಬೆರಗಾದ...ಬೆನ್ನು ಚಪ್ಪರಿಸಿಕೊಂಡ...ಕೊನೆಯದಾಗಿ ತನ್ನ ಸೃಷ್ಟಿಯನ್ನು ಕಣ್ತುಂಬಿಕೊಂಡು ಅದರಲ್ಲಿ ಪ್ರಾಣವನ್ನೂದಿ ಭೂಮಿಗೆ ಬಿಟ್ಟ...ಕೆಲಸವಾದ ಮೇಲೆ ತನ್ನೆಲ್ಲ ಮೂಸೆಗಳನ್ನು ಸ್ವಸ್ಥಾನ ಸೇರಿಸುವಾಗ ಒಂದು ಮೂಸೆಯ ಮುಚ್ಚಳ ಮುಚ್ಚಿದ್ದು ಹಾಗೇ ಇತ್ತು..."ಏನು ಮರೆತೆ ?"ಎಂದು ಹೌಹಾರಿದ ದೇವರಿಗೆ ಅದರಲ್ಲಿ ಕಂಡದ್ದು ' ತೃಪ್ತಿ'. ಅದು ಅವನ ಕಣ್ತಪ್ಪಿ ಉಳಿದು ಹೋಗಿತ್ತು...ಕ್ಷಣಹೊತ್ತು ದೇವರು ತುಂಬಾನೇ ವಿವ್ಹಲನಾದ...ತನ್ನ ಸೃಷ್ಟಿ ಅಪೂರ್ಣವಾಯಿತೆಂದು ತಹತಹಿಸಿದ..
                  ಕೊನೆಗೆ ಅನಿಸಿದ್ದು," ಆದದ್ದೆಲ್ಲ ಒಳಿತೇ ಆಯಿತು..ಅದೂ ಒಂದು ಹಾಕಿ ಬಿಟ್ಟಿದ್ದರೆ ಮನುಷ್ಯ ನನ್ನ ಸಮಬಲನಾಗಿ ನನಗೇ ಸೆಡ್ಡು ಹೊಡೆಯುತ್ತಿದ್ದ...ಈಗ ವನೆಷ್ಟೇ ದೊಡ್ಡವನಾದರೂ ಸದಾ ಅತೃಪ್ತನಾದ ಕಾರಣ ಒಂದಿಲ್ಲೊಂದು ಕಾರಣಕ್ಕೆ ನನ್ನ ಕಾಲು ಹಿಡಿಯಲೇಬೇಕು...ನನ್ನ ಸರಿಸಮನೆಂದಿಗೂ ಆಗಲಾರ" ಎಂದು ನೆಮ್ಮದಿಯ ನಿಟ್ಟುಸಿರು ಬಿಟ್ಟ...
              ಇದು ನಮಗೆ ಶಾಲೆಯ ಪಠ್ಯದಲ್ಲಿದ್ದ ಒಂದು ಕವನವಾಗಿತ್ತು..( the pully) ಎಂದು ಮಸುಕು ಮಸುಕು ನೆನಪು...ಶೀರ್ಷಿಕೆ ತಪ್ಪಿದ್ದರೂ ಇರಬಹುದು....
                 ಅಂತೆಯೇ ಯಾವ ಕಾಲದಲ್ಲೂ ಮನುಷ್ಯ ತೃಪ್ತನಾಗಿದ್ದ ಉದಾಹರಣೆ ಸಿಗುವದಿಲ್ಲ...ಸಿಕ್ಕರೂ ಅತ್ಯಲ್ಪ ಸಮಯದ ಮಟ್ಟಿಗೆ..ಉಳಿದಂತೆ 'ಇರುವದೆಲ್ಲವ ಬಿಟ್ಟು ಇರದೇ ಇರುವದರತ್ತಲೇ ಧ್ಯಾನ...'
     ‌‌‌‌‌‌‌          ‌‌ ‌ ‌  ಶ್ರೀಮಂತರಿಗೆ ಸಂತಾನವಿಲ್ಲ...ಬಡವರಿಗೆ  ಹೊಟ್ಟೆಗಿಲ್ಲ..ಶ್ರಮಜೀವಿಗಳಿಗೆ ಮರ್ಯಾದೆ ಇಲ್ಲ...ದುಷ್ಟರಿಗೆ ಸಮಾಧಾನವಿಲ್ಲ..ಜಾಣರಿಗೆ ಓದಲು ಅವಕಾಶ ಕಡಿಮೆ...ರೂಪವಂತರಿಗೆ ವಿನಯವಿಲ್ಲ...ಮಕ್ಕಳಿದ್ದರೆ ವಿವೇಕವಿರುವದಿಲ್ಲ... ಹಣವಿದ್ದರೆ ಆರೋಗ್ಯ ಭಾಗ್ಯ ಅಪರೂಪ.... ಎಲ್ಲ ಇದ್ದವರಿಗೆ ಜನಪ್ರಿಯತೆಯ ಅಗಾಧ ಹಸಿವು....ಅಪವಾದಗಳನ್ನು ಹೊರತುಪಡಿಸಿ ನೋಡಿದರೆ ಇವೇ ಹೆಚ್ಚು...ಅಂತೆಯೇ ದಿನದಿನಕ್ಕೆ ಹತಾಶೆ,ನಿರಾಶೆ,ಅಸಹಾಯಕತೆ,ಆಕ್ರೋಶ ಹೆಚ್ಚಾಗುತ್ತ ಹೋಗುವದನ್ನು ಕಾಣುತ್ತಿದ್ದೇವೆ...ಎಲ್ಲರಿಗೂ ಎಲ್ಲವೂ ಬೇಕೆಂಬ ಹಪಾಪಿತನ ಕಾಣುತ್ತಿದ್ದೇವೆ..ಕೊನೆ ಎಲ್ಲೋ? ಎಂದೋ? ಹೇಗೋ?.....

No comments:

Post a Comment

🌸 Wedding Invitation 🌸 With hearts full of joy and gratitude, We, the Kulkarni Family, invite you to celebrate a bond. As our beloved son ...