Monday, 27 August 2018

ವಚನ

ನೀನಿಲ್ಲ ಎಂದು
ನಾ ಮರುಗಲೇಕೆ
ನೀನಿದ್ದ ಠಾವ ಬಲ್ಲೆ...
ನಿನ್ನೊಲುಮೆ ಬಳ್ಳಿ
ಕುಡಿಮೂರ ಬಿಟ್ಟು
ತಡದssದ ನನ್ನನಿಲ್ಲೆ....
ನಿನ್ಹಿಂದ ನನ್ನ
ಕಿರುಹೆಜ್ಜೆ ಮೂಡಿ
ಆದೀತು ನಮ್ಮ ಮಿಲನ...
ಅಲ್ಲೀಯತನಕ
ನಾನಿಲ್ಲೆ ಎಂಬುದನ
ನಾ ನಿನಗ ಹೇಳಲೇನ?
ನೀನಿಲ್ಲ ಗೆಳೆಯ
ನಿನ ಪ್ರಾಣ ಇಲ್ಲೆ
ಎಂಬುದನ ಮರೆಯಲ್ಹ್ಯಾಂಗ?
ನಿನ್ನ ಕಿರುರೂಪ ಮೂರು
ನನ ಕೈಗೆ ಇತ್ತು
ಹೊರಟಾರ ತಡೆಯಲ್ಹೆಂಗ?
ಮರಿಹಕ್ಕಿ ಮೂರು
ಹಾರೂದ ಕಲಿಸಿ
ನಾ ನಿನ್ನ ಸೇರತೀನಿ..
ಎಂಬುದಕ ನನ್ನೀ
ನುಡಿಗವನ ಸಾಕ್ಷಿ
ಮನಮುಟ್ಟಿ ಹೇಳತೇನಿ...
         **************

No comments:

Post a Comment

ನೀನಿನ್ನೂ ಇರಬೇಕಿತ್ತು ಮನೋಜ...                       ನಿನಗಾಗಿಯೇ/ನಿನ್ನೆಲ್ಲ ಕನಸು ಗಳನ್ನು ಸಾಕಾರಗೊಳಿಸಿಕೊಳ್ಳುವುದ ಕ್ಕಾಗಿಯೇ...ನೀನೇ ಕಟ್ಟಿಸಿದ ಹೊಸಮ ನೆ /ನಿನ...