Monday, 27 August 2018

ಪತಿ

ಹಾಗೇ ಸುಮ್ಮನೇ......
ಗಂಡ( ಪತಿ)
ಪತಿಯು ಒಂದು ಪಾರಿವಾರಿಕ ಪ್ರಾಣಿ..ಪ್ರತಿಯೊಂದು ಮನೆಯಲ್ಲಿ ಇದು ಅನಿವಾರ್ಯವಾಗಿ ಬೇಕು.ಇದನ್ನು ನೋಡಿಕೊಳ್ಳುವ ಅಧಿಕಾರ ' ಪತ್ನಿ' ಎಂಬ ಒಬ್ಬ ಸನ್ಮಾನಿತ ಮಹಿಳೆಗೆ ಮಾತ್ರ ಇರುತ್ತದೆ.ವರದಕ್ಷಿಣೆ ಎಂಬ ಶುಲ್ಕವನ್ನು ತೆತ್ತು ಇದನ್ನು ಪಡೆಯಲಾಗುತ್ತದೆ.ಅರ್ಥಾತ್ ಇದರ ಪೇಟೆಯ ಬೆಲೆ ಉಳಿದ ಪ್ರಾಣಿಗಿಂತ ಸ್ವಲ್ಪು ಹೆಚ್ಚೇ ಅನ್ನಬಹುದು..
ಇದಕ್ಕೆ ಎರಡು ಕಣ್ಣುಗಳಿದ್ದು ಬಾಯಿಮುಚ್ಚಿಕೊಂಡು ನಡೆದದ್ದನ್ನು ನೋಡಲು ಮಾತ್ರ ಉಪಯೋಗಿಸಬಹುದು.ಹೆಂಡತಿಯ ಬಯ್ಗಳು ಕೇಳಲು ಎರಡು ಕಿವಿಗಳೂ,ತೆರೆದು ಮಾತಾಡಲು ಸಂಪೂರ್ಣ ನಿರ್ಬಂಧವಿರುವ ಒಂದು ಬಾಯಿ,ಮದುವೆಗೆ ಮೊದಲು ಇತರ ಮನುಷ್ಯರಂತೆ ಕಾಣುವವರ ಜೊತೆ ಬೆರೆಯುವ ವಿಶೇಷ ಸೌಲಭ್ಯಗಳು ಉಂಟು.
ಹೆಂಡತಿಯ ಗುಲಾಮರಂತೆ ಕಾಣುವ ಈ ಪ್ರಕಾರವು ಬಹುರೂಪಗಳಲ್ಲಿ ಕಾಣಸಿಗುತ್ತವೆ.ಇವರು ತುಂಬಾ ಸಾದಾ,ವಿಶ್ವಸನೀಯ,ಬಹುಕಾಲ ಬಾಳಿಕೆ ಬರುವಂಥವು ಆಗಿರುತ್ತವೆ.ಯಾವುದೇ ಟೀಕೆ,ನಿಂದೆ, ಬಯ್ಗಳು ಇವಕ್ಕೆ ನಾಟುವದಿಲ್ಲ.ಪತ್ನಿಯನ್ನು ಆಳುವ ಪತಿಯ ತಳಿಗಳು ಕ್ರಮೇಣ ನಶಿಸುತ್ತಿದ್ದು ಅವುಗಳ ಸಂರಕ್ಷಣೆಗಾಗಿ,ಸರಕಾರ ಧೀರಪತಿ ಸರಂಕ್ಷಣಾ ಕೇಂದ್ರ ತೆರೆಯುವ ನಿಟ್ಟನಲ್ಲಿ ಯೋಚಿಸುತ್ತಿದೆ..
ಶ್ರೀಮತಿ ,ದಿವ್ಯಾ ಮಿಶ್ರಾ...(ಹಿಂದಿಯಿಂದ..)

( ಮನೆಯಲ್ಲಿ ಪತಿಯೊಡನೆ ಜಗಳವಾಡಿ ತಲೆಕೆಟ್ಟು ಹಿಂದಿ class ಗೆ  ಬಂದಿದ್ದ ಶಿಕ್ಷಕಿಯೊಬ್ಬಳು ಮಕ್ಕಳಿಗೆ," ಹೋದಸಲ ಆಕಳಮೇಲೆ ನಿಬಂಧ ಬರೆದಂತೆ ಈ ದಿನ ' ಪತಿ' ಯ ಮೇಲೆ ನಿಬಂಧ ಬರೆಯಿರಿ ಅಂದಾಗ ಒಬ್ಬ ವಿದ್ಯಾರ್ಥಿ ಬರೆದ ಪ್ರಬಂಧ)

No comments:

Post a Comment

*O𝐥𝐝 𝐚𝐧𝐝 𝐘𝐨𝐮𝐧𝐠*: *𝐖𝐡𝐞𝐧 𝐈 𝐰𝐚𝐬 𝐘𝐎𝐔𝐍𝐆, 𝐈 𝐟𝐨𝐮𝐧𝐝 𝐢𝐭 𝐃𝐈𝐅𝐅𝐈𝐂𝐔𝐋𝐓 𝐭𝐨 𝐖𝐀𝐊𝐄 𝐔𝐏. 𝐖𝐡𝐞𝐧 𝐈 𝐚𝐦 𝐎𝐋𝐃...