Monday, 27 August 2018

ಹಾಗೇ ಸುಮ್ಮನೇ...


          ' ಗಂಭೀರ ವಿಚಾರಗಳನ್ನು ಹಂಚಿಕೊಂಡರೆ ಓದುಗರು ಕಡಿಮೆ'_
             ‌‌‌‌   ಈ ದಿನ ಫೇಸ್ಬುಕ್ಕಿನಲ್ಲಿ ಈ ವಾಕ್ಯ ನೋಡಿದೆ...ನನಗೂ ಈ ವಿಚಾರ ಹತ್ತು ಹಲವು ಬಾರಿ ಬಂದಿದೆ...ಪ್ರಮಾಣಿಸಿಯೂ ನೋಡಿದ್ದೇನೆ...ಅದರ ಹಿಂದೆ ಇರಬಹುದಾದ ಕಾರಣಗಳನ್ನೂ ನನಗೆ ನಾನೇ ಕೊಟ್ಟುಕೊಂಡಿದ್ದೇನೆ...ಸರಿಯೋ ,ತಪ್ಪೋ ಆ ಮಾತು ಬೇರೆ...
          ನನಗನಿಸುವ ಮಟ್ಟಿಗೆ ಲಘು ವಿಷಯಗಳು ,ಓದಿದರೆ ಸಾಕು..ಅರ್ಥವಾಗಿಬಿಡುತ್ತವೆ...ಅವುಗಳನ್ನು ಅರ್ಥೈಸಿಕೊಳ್ಳಲು ಹೆಚ್ಚು ಸಮಯ ಬೇಕಿಲ್ಲ...ವಿಚಾರಮಾಡಿ ತಲೆಕೆಡಿಸಿಕೊಂಡು  comments ಮಾಡಬೇಕಾಗಿಲ್ಲ...ಒಂದು like, awesome,nice,ದಂಥ quick,short,response ಸಾಕಾಗಿಬಿಡುತ್ತದೆ..ಮೇಲಾಗಿ ಇಂದಿನ busy schedule ನಲ್ಲಿ ಸಮಯ ಹೊಂದಿಸಲಾಗದ,mobile ಚಟವನ್ನೂ ಬಿಡಲಾಗದ,ಬಸ್ಸು,train ಗಳಲ್ಲಿ ಚಲಿಸುವಾಗಲೂ ನಿರ್ವಹಿಸಬಲ್ಲಬಹುದಾದದ್ದೆಂದರೆ ಇಂಥ ಚಿಕ್ಕ,ಪುಟ್ಟ ಓದುಗಳು...ಎಲ್ಲಿಯೂ ಪ್ರಾರಂಭಿಸಿ,ಬೇಕೆಂದಾಗ ಹೆಚ್ಚು ಯೋಚಿಸದೇ
ಬಿಟ್ಟುಬಿಡಬುದಾದ ಆಯ್ಕೆ ಇಂಥ post ಗಳಿಗೆ ಜಾಸ್ತಿ...
             ಇನ್ನೊಂದು ವಿಷಯವೆಂದರೆ ಗಂಭೀರ ವಿಷಯಗಳ ರುಚಿ ಕ್ರಮೇಣ ಪಕ್ವತೆ ಬಂದಂತೆ, ಓದುವಿಕೆ ಹೆಚ್ಚಾದಂತೆ,ಹೆಚ್ಚು ವಿಚಾರಮಾಡಲು ಸಮಯ,ಸಾಮರ್ಥ್ಯಬೆಳೆದಂತೆ ಬರುವದೇನೋ
ಎಂಬುದು ನನ್ನ ವೈಯಕ್ತಿಕ ಅನಿಸಿಕೆ..
        ‌ಮೂರನೇದಾಗಿ ಇತ್ತೀಚಿನ ಬದುಕಿನಲ್ಲಿ ಐಚ್ಛಿಕ ಹಾಗೂ ಅನೈಚ್ಛಿಕವಾಗಿ ಸವಾಲುಗಳು ಜಾಸ್ತಿ..ಅವನ್ನೇ ಸಂಭಾಳಿಸಲು ಒದ್ದಾಡಬೇಕಾಗಿ ಬಂದಾಗ ಇಲ್ಲದ ವಿಷಯವಾಗಿ ಇಲ್ಲಸಲ್ಲದ್ದು ತಲೆಗೇರಿಸಿಕೊಂಡು ವಿಚಾರಿಸುತ್ತ ಕೂಡುವದು ಯಾರಿಗೂ ಇಷ್ಟವಾಗುವದಿಲ್ಲ...ಒಂದು ನೋಟ,ಒಂದೆರಡು ಸಾಲುಗಳು,ಪ್ರೀತಿ,ಪ್ರೇಮ,ಹೆಣ್ಣು,ಸೌಂದರ್ಯದಂಥ ಫಕ್ಕನೇ ಮುದಗೊಳಿಸುವ ವಿಷಯಗಳಿಗೆ ಮನಸೋಲುವದು  ಸಹಜ ಹಾಗೂ ಸ್ವಾಭಾವಿಕ...
                  ‌ ‌ಕೊನೆಯದಾಗಿ ಕೆಲವರಿಗೆ ಹೆಚ್ಚು ಫೇಸಬುಕ್ friends ಇರುತ್ತಾರೆ..ಅದರ ಬಗ್ಗೆ ಹೆಮ್ಮೆಯೂ ಇರುತ್ತದೆ..ಅಳೆದು,ತೂಗಿ, ಬೇಕೋ ಬೇಡವೋ ಎಂದು ಅನುಮಾನಿಸಿ request ಮಾನ್ಯ ಮಾಡುವ ಸ್ವಭಾವ ವಿದ್ದವರಿಗೆ ಸ್ವಾಭಾವಿಕವಾಗಿ friends ಕಡಿಮೆ...ಅದೇ ಅನುಪಾತದಲ್ಲಿ likes, comments ಬರುತ್ತಿರುತ್ತವೆ...
                      ಇನ್ನೊಂದು ಕೊನೆಯ ಸಾಧ್ಯತೆ ಅಂದರೆ ನನ್ನನ್ನು ಹಿಡಿದು ಕೆಲವರಿಗೆ ಓದುವ ಚಟವಿರುತ್ತದೆ...ಓದುತ್ತಾರೆ...
ಪ್ರತಿಯೊಂದಕ್ಕೂ  like ಒತ್ತಲು, comments ಹಾಕಲು ಸೇರುತ್ತಿರುವದಿಲ್ಲ...ಹೀಗಾಗಿ ಓದುಗರ ಖಚಿತ ಸಂಖ್ಯೆ ಸಿಗಲಿಕ್ಕೂ ಇಲ್ಲ...
      ‌           ಹೀಗೆ 'ಒಂದು  ಪೋಸ್ಟಿನ ಕಥೆ' ಯ ಹಿಂದೆ ಹಲವು ಸಾಧ್ಯತೆ,ಸಂಭವನೀಯತೆ ಇರಬಹುದೆಂಬುದನ್ನು ಅಲ್ಲಗಳೆಯಲಾಗದು..
ಬೇಕೆನಿಸಿದ್ದನ್ನು ಬೇಕೆನಿಸಿದಾಗ ಹಾಕುವದಷ್ಟೇ ನಮ್ಮ ಕೆಲಸ...ಬಾಕಿಯದು ಓದುಗರ ಆಯ್ಕೆ..
                  ‌

No comments:

Post a Comment

*O𝐥𝐝 𝐚𝐧𝐝 𝐘𝐨𝐮𝐧𝐠*: *𝐖𝐡𝐞𝐧 𝐈 𝐰𝐚𝐬 𝐘𝐎𝐔𝐍𝐆, 𝐈 𝐟𝐨𝐮𝐧𝐝 𝐢𝐭 𝐃𝐈𝐅𝐅𝐈𝐂𝐔𝐋𝐓 𝐭𝐨 𝐖𝐀𝐊𝐄 𝐔𝐏. 𝐖𝐡𝐞𝐧 𝐈 𝐚𝐦 𝐎𝐋𝐃...