Thursday, 23 August 2018

ಹಾಗೇ ಸುಮ್ಮನೇ....

ರಸಗ( ಗು)ಳಿಗೆಗಳು....

* ಇದು ೧೯೭೮-೭೯ ರ ಸುದ್ದಿ.ನಾನಾಗ ಕುಮಟಾದಲ್ಲಿ BEd ಓದುತ್ತಿದ್ದೆ.certificates ಎಲ್ಲ maiden name ನಲ್ಲೇ ಇದ್ದುದರಿಂದ ನಾನು ಅದೇ ಹೆಸರಿನಿಂದ ಗುರುತಿಸಲ್ಪಡುತ್ತಿದ್ದೆ..ಪ್ರತಿ ತಿಂಗಳೂ ಧಾರವಾಡದಿಂದ ಖರ್ಚಿಗೆ ಮನಿಯಾರ್ಡರ್ ಬರುತ್ತಿತ್ತು..ಸರಿ, postman ಬಂದು ಕೂಗುತ್ತಿ
ದ್ದ,' ಹಂಚಿನಮನಿ' ಯಾರ್ರೀ?...ಅವನನ್ನೇ ಕಾಯುತ್ತಿದ್ದ ನಾನು ಹಾಜರ್.." ನಿಮ್ಮ ಹೆಸರು ಹೇಳ್ರಿ.."...
"_ಶ್ರೀಮತಿ"..
"ಪೂರ್ತಿ ಹೆಸರು...?"
" ಶ್ರೀಮತಿ,  ಹಂಚಿನಮನಿ"
" ಹುಡುಗಾಟ ಆಡ್ತೀರೇನು?ಹೇಳ್ರಿ,ಶ್ರೀಮತಿ ಮುಂದೇನು"..
ನನಗಾಗ ಹೊಳೆಯುತ್ತಿತ್ತು,- ಆಸಾಮಿ 'ಶ್ರೀಮತಿ' prefix ಅಂದ್ಕೊಂಡಾನ  ಅಂತ..
ನಾನು ನಕ್ಕು ಹೇಳತಿದ್ದೆ," ನನ್ನ ಹೆಸರು ಶ್ರೀಮತಿ,ಶ್ರೀಮತಿ ಹಂಚಿನಮನಿ "ಅಂತ
ಒಂದು ವಿಚಿತ್ರ ಅನುಮಾನದ ನೋಟದೊಂದಿಗೆ ಹಣ ಕೊಡುತ್ತಿದ್ದವ ಎರಡು ತಿಂಗಳಾದರೂ complaint ಬರದ ಹಿನ್ನೆಲೆಯಲ್ಲಿ ನಂತರದಲ್ಲಿ ಧೈರ್ಯದಿಂದ ಕೊಡತೊಡಗಿದ...
         ***      ***  ‌ ***   ***   ***
ಒಮ್ಮೆ ನಮ್ಮ ಮನೆಗೆ ಪರಿಚಿತ ಯುವ ಜೋಡಿಯೊಂದು ಬಂದಿತ್ತು...ರಾತ್ರಿ ಊಟ ಮಾಡಿ ಹೋಗಲು ಒಪ್ಪಿಸಿದೆ..ಅಡಿಗೆ ತಯಾರಿ ಮಾಡುತ್ತಿದ್ದಾಗ ಆ ಹುಡುಗ( ಗಂಡ) ಹೇಳಿದ," ಆಂಟಿ, ನೀವೇಕೆ ಅಡಿಗೆಯವರನ್ನು ಇಟ್ಟುಕೊಂಡಿಲ್ಲ..ವಯಸ್ಸಾಗಿದೆ..ಆರಾಮಯಿರೋದಲ್ವಾ? ಒಬ್ಬರನ್ನು ಗೊತ್ತು ಮಾಡಿ ಅಂದ ..ನಾನು ಅದುವರೆಗಿನ ಅಡುಗೆಯವರ ಬಗ್ಗೆ ಹೇಳಿ,ಅವರ ಅನಿಯಮಿತತನ, ಉದ್ಧಟತನ,ತೀರಲಾರದ ಬೇಡಿಕೆಗಳು, ಪೂರ್ವ ಮಾಹಿತಿ ಕೊಡದೇ ತೆಗೆದುಕೊಳ್ಳುವ ರಜೆಗಳ ಬಗ್ಗೆ ಬೇಸತ್ತು ಸ್ವಾವಲಂಬಿಯಾದದ್ದು ಹೇಳಿದೆ..
ಬೇರೆಯವರನ್ನು ನೋಡಬಹುದಲ್ಲ ಎಂಬ ಮಾತಿಗೆ " ಆಯ್ತಪ್ಪಾ,ಎಲ್ಲರೂ ಮುಗಿದರು..' ಭೀಮ'ಹಾಗೂ ' ನಳ: ಇಬ್ಬರನ್ನು ಬಿಟ್ಟು ಅಂದೆ...
ಪಾಪ ನನ್ನ ತಮಾಷೆ ಅರ್ಥವಾಗದ ಅವನು ಗಂಭೀರವಾಗಿ " ಆಂಟಿ ಅವರಿಬ್ಬರಲ್ಲಿ ಒಬ್ಬರನ್ನ try ಮಾಡಿಬಿಡಿ" ಅನ್ನೋದೆ?
      ‌     ‌ಅವನಿಗೆ ಆ ವಿರಾಟನಗರದಲ್ಲಿ ಭೀಮ ' ವಲಲ' ನಾದದ್ದು,ನಳ ಋತುಪರ್ಣ ರಾಜನ ಅಡುಗೆ ಯವನಾದದ್ದು ವಿವರಿಸಲಾರದ ಬೇಸರದಲ್ಲಿ " ಆಯ್ತಪ್ಪಾ,ನೋಡೋಣ" ಅನ್ನಬೇಕಾಯ್ತು...
         ಮನಸ್ಸಿನಲ್ಲೇ ಅಂದುಕೊಂಡೆ...ಇಲ್ಲಪ್ಪಾ,ಅವರು ನಮ್ಮ ಮನೆಗೆ ಬಂದು ಅಡಿಗೆ ಮಾಡುವದಿಲ್ಲ...ನಾನೇ ಅವರಿದ್ದಲ್ಲಿಗೆ ಹೋದರೆ ಮಾಡಿಹಾಕಬಹುದೇನೋ...ಅಂತ..
             ***   ‌***  ‌‌  ***    ***   ***
ನನ್ನ ತಂಗಿಯ ಮೊಮ್ಮಗಳು ಅದಿತಿ..ಮೂರು ವರ್ಷ...ತುಂಬಾ ಮುದ್ದು ..ದೊಡ್ಡ ಕಣ್ಣುಗಳು....ಅತಿ ಪುಟ್ಟ ಬಾಯಿ...ಕಥೆ ಹೇಳುತ್ತಾ ಇವಳೇ  ನಿಧಾನವಾಗಿ ಸ್ವಲ್ಪ ಸ್ವಲ್ಪ ಉಣಿಸಬೇಕು...ಒಂದು ದಿನ ಏನೆನಿಸಿತೋ," ಅಜ್ಜಿ, ಇವತ್ತೊಂದು ದಿನ ನಾನು ನಿನಗೆ ಉಣಿಸುತ್ತೇನೆ" ಎಂಬ ಬೇಡಿಕೆಯಿಟ್ಟಳು..ಬೇಡವೆನ್ನಲು ಕಾರಣವಿರಲಿಲ್ಲ..ಸುರುವಾಯ್ತು  feeding...ಚಮಚದಿಂದ ಎರಡು ತುತ್ತು ಹಾಕಿದವಳಿಗೆ ಖುಶಿಯೋ ಖುಶಿ.... " Ajji, it is
very easy to feed you, Your mouth is sooooooooo BIG"ಅನ್ನೋದೇ...?

No comments:

Post a Comment

*O𝐥𝐝 𝐚𝐧𝐝 𝐘𝐨𝐮𝐧𝐠*: *𝐖𝐡𝐞𝐧 𝐈 𝐰𝐚𝐬 𝐘𝐎𝐔𝐍𝐆, 𝐈 𝐟𝐨𝐮𝐧𝐝 𝐢𝐭 𝐃𝐈𝐅𝐅𝐈𝐂𝐔𝐋𝐓 𝐭𝐨 𝐖𝐀𝐊𝐄 𝐔𝐏. 𝐖𝐡𝐞𝐧 𝐈 𝐚𝐦 𝐎𝐋𝐃...