Wednesday, 1 August 2018

ತಥ್ಯ...

ಹಿಂದೆ...
ಮೈಯಲ್ಲಿ ಬಲವಿತ್ತು...
ನಡೆಯಲ್ಲಿ ಛಲವಿತ್ತು...
ಸಾಧಿಸುವ ಒಲವಿತ್ತು...

ಗೆದ್ದರೆ ಫಲವಿತ್ತು...
ಛಲ, ಬಲಗಳು ಫಲ
ನೀಡಿ ಗೆಲ್ಲಿಸಿದ್ದು ಸುಳ್ಳಲ್ಲ...

ಇಂದು...
ದೇಹಕ್ಕೆ ವಯಸ್ಸಾಗಿದೆ...
ಸಾಕೆಂಬ ಮನಸಾಗಿದೆ...
ಅಂದದ್ದೆಲ್ಲ ನನಸಾಗಿದೆ...

ಆರಾಮ ಏಕಮೇವ ಕನಸಾಗಿದೆ...
ಕನಸು ನನಸಿನ ಹಂಗಿಲ್ಲದೇ ಇರಬೇಕೆನಿಸಿದ್ದು ಸುಳ್ಳಲ್ಲ...
ಮುಂದೆ....ದಿನಗಳು ಹೀಗೇ ಸಾಗಬಹುದು...

ಮನಸಿನ್ನೂ ಮಾಗಬಹುದು...
ಮನಕೆ ನಿಜದರಿವು ಆಗಬಹುದು...
ಶಿರವು ತಥ್ಯಕೆ ಬಾಗಬಹುದು...
ಬಂದದ್ದು ಬರಲಿ ಎದುರಿಸುವೆ ಅನಿಸಿದ್ದು ಸುಳ್ಳಲ್ಲ...

No comments:

Post a Comment

🌸 Wedding Invitation 🌸 With hearts full of joy and gratitude, We, the Kulkarni Family, invite you to celebrate a bond. As our beloved son ...