Thursday, 26 July 2018

ಹಾಗೇ ಸುಮ್ಮನೇ...

ವಿರಾರದಲ್ಲಿ ರೈಲು ಹತ್ತಿ ಚರ್ಚಗೇಟ ಕಡೆ ಹೊರಟಿದ್ದೆ.ತುಂಬಾ ರಶ್ ಇತ್ತು..ಅಸ್ತವ್ಯಸ್ತವಾಗಿ ಬಟ್ಟೆ ತೊಟ್ಟ ಒಬ್ಬ ಬಡಕಲು ಹೆಣ್ಣುಮಗಳು  ಅಷ್ಟೇ ಅಸ್ತವ್ಯಸ್ತ ಬಟ್ಟೆಯ ಗಂಟಿನೊಂದಿಗೆ ಗಾಡಿ ಏರಿದಳು.ತುಂಬ ಕೃಶಳಾಗಿದ್ದ ಅವಳಿಗೆ ಬೇಕಾದ ಜಾಗ ಹಿಡಿಯಷ್ಟು..ಅವಳನ್ನು ಕಂಡಕೂಡಲೇ ತಮ್ಮ ಕಾಲುಗಳನ್ನು ಆದಷ್ಟು ಪಸರಿಸಿ ಜಾಗವಿಲ್ಲ ಎಂಬುದನ್ನು ಎಲ್ಲ ಹೆಣ್ಣುಮಕ್ಕಳು ಪರ್ಯಾಯವಾಗಿ ತೋರಿಸಿದ್ದೂ ಆಯಿತು. ಸ್ವಲ್ಪು ಸಮಯ ಅವಳ ಅವತಾರ,ವೇಷ-  ಭೂಷಣದ ಬಗ್ಗೆ ಇದೂ ಅದೂ ಹರಟುತ್ತ ಅವಳ ಬಗ್ಗೆ ವಿಲಕ್ಷಣವಾಗಿ ನೋಡುತ್ತಿದ್ದರೇ ಹೊರತು ಜಾಗ ಕೊಡುವ ವಿಚಾರ ಮಾಡಲೇಇಲ್ಲ..ಕೊನೆಗೆ ನಾನೇ ಸ್ವಲ್ಪ ಸರಿದು ಇದ್ದುದರಲ್ಲಿಯೇ ಸ್ವಲ್ಪು adjust ಮಾಡಿದೆ.ಅಲ್ಲಿ ಅವಳು ಕುಳಿತಮೇಲೆ ಆದ ಅನನುಕೂಲಕ್ಕೆ sorry ಹೇಳಿದೆ.ಇತರರ ಮಾತಿಗೆ ನೊಂದುಕೊಳ್ಳಬಾರದೆಂದು ಬಿನ್ನವಿಸಿದೆ.          ಆಗ ಅವಳು ನಗುತ್ತ  ಹೇಳಿದಳು," ಅವರಮಾತಿನಿಂದ ನನಗೇನೂ ಅನಿಸುವದಿಲ್ಲ..ಅವಕ್ಕೆ ಕೇವಲ ಒಂದು ತಾಸಿನ ಬೆಲೆ..ಅವರು ಕೆಳಗಿಳಿದು ಹೋದರೆ ಅವರ ಹಿಂದೆಯೇ ಹೋಗಿಬಿಡುತ್ತವೆ.ಅವರ ಅನಿಸಿಕೆ ನನ್ನ ಅರವತ್ತೈದು ವರುಷಗಳ ಬದುಕನ್ನು ಬದಲಾಯಿಸಲಾರದು..ಈಗಿನ ಈ ಕೃಶ ದೇಹದ ಹೆಣ್ಣುಮಗಳು ಹರಯದಲ್ಲಿ ರಾಜ್ಯಮಟ್ಟದ ಹಾಕಿ ಆಟಗಾರಳಾಗಿದ್ದಳೆಂದು ಅವರಿಗೆ ಗೊತ್ತಿಲ್ಲ.ಭಾರತದ ಫ್ರೆಂಚ ರಾಯಭಾರಿ ಕಚೇರಿಯಲ್ಲಿ ದುಭಾಷಿಯಾಗಿ ಕೆಲಸ ಮಾಡಿದಾಕೆ ಎಂದು ನನ್ನ ಮುಖದಿಂದ ಅವರಿಗೆ ಪಾಪ ತಿಳಿಯಲಾರದು.ಯೌವನದ ದಿನಗಳಲ್ಲಿ ನಾನೂ ಅರೆಕಾಲಿಕ model ಆಗಿ ಪ್ರಸಿದ್ಧಳಾಗಿದ್ದೆ ಎಂದು ಅವರಿಗೆ ಹೇಗೆ ತಾನೇ ಗೊತ್ತು ಪಡಿಸಲಿ? ಮೊದಲಸಲ ರೈಲಿನಲ್ಲಿ ಹತ್ತಿದ್ದೀಯಾ ಎಂದು ಕೇಳುವವರಿಗೆ ೧೯೪೦ ರಿಂದ ಮುಂಬೈ ಲೋಕಲ್ ಟ್ರೇನನಲ್ಲಿಯೇ ನನ್ನ ನಿಯಮಿತ ಪ್ರಯಾಣ ಅಂದರೆ ನಂಬಲು ಅವರಿಗೆ ಪುರಾವೆ ಎಲ್ಲಿದೆ ?ಗಂಡ,ಇದ್ದೊಬ್ಬ ಮಗಳನ್ನು ಅಕಾಲಿಕವಾಗಿ ಕಳೆದುಕೊಂಡು ಕಂಗಾಲಾದರೂ ಮನೆಯಲ್ಲಿ ಹತಾಶಳಾಗಿ ಕೂಡಲಾರದೇ ರಶ್ ನ ವೇಳೆಯಲ್ಲಿಯೇ ದಿನನಿತ್ಯ ವಿರಾರದಿಂದ ಬಾಂದ್ರಾಕ್ಕೆ  ದಲಿತ ಮಕ್ಕಳಿಗೆ ಕಲಿಸಲೆಂದೇ ಪಯಣಿಸುತ್ತೇನೆ ಎಂಬುದು  ಮನೆಯಲ್ಲಿರಲು ಇವಳಿಗೆ ಏನು ಧಾಡಿ ಎಂದು ಆಲೋಚಿಸಿಸುತ್ತಿರುವ ಈ ರೋಗಗ್ರಸ್ತ ಮನಸ್ಸುಗಳಿಗೆ ಹೇಗೆ ಅರ್ಥವಾಗಬೇಕು?ಮೇಲಿನ ಹೊದಿಕೆ ನೋಡಿ ಪುಸ್ತಕದ ಬೆಲೆ ಕಟ್ಟುವ ಇಂಥ ಜನಕ್ಕೆ ಅರ್ಥ ಮಾಡಿಸುವ ಅವಶ್ಯಕತೆಯಾದರೂ ಏನು"...       ಸಾಕಲ್ಲಾ ಮುಖಕ್ಕೆ ನೇರದಾದ ಒಂದೇ ಒಂದು ಪೆಟ್ಟು....            ‌ನಾನು ಇಳಿಯುವ station ಬಂದ ಕಾರಣ ಅವಳಿಗೆ bye ಹೇಳಿ ಕೆಳಗಿಳಿದೆ..    "‌‌ಅಂದಹಾಗೆ ನನ್ನ ಹೆಸರು IVY.. ನೀವು ಅದನ್ನು ಪುಸ್ತಕದಲ್ಲಿ ಓದಿರಲಿಕ್ಕಿಲ್ಲ..ಅದು ಒಂದು ಸಸ್ಯದ ಹೆಸರು.."         ಕೆಲವೊಂದು ಕಲಿಸುವ ಉದ್ದೇಶವಿಟ್ಟುಕೊಂಡೇ ಆದೇವರು ಕೆಲವರನ್ನು ನಮ್ಮ ಬದುಕಿನಲ್ಲಿ ತರುತ್ತಾನೇನೋ..!!!!!!!!     ‌‌         ಇದನ್ನೋದಿ ಧಾರವಾಡಿಗರಿಗೆ ' ಮಾಳಮಡ್ಡಿಯ ಹೇಮಾಮಾಲಿನಿ ನೆನಪಾದರದು ಕೇವಲ ಕಾಕತಾಳೀಯ ...ಅಷ್ಟೇ..  (WhatsAppನಲ್ಲಿ ಬಂದ ಇಂಗ್ಲಿಷ ಸಂದೇಶದ Transcreation...)

No comments:

Post a Comment

*O𝐥𝐝 𝐚𝐧𝐝 𝐘𝐨𝐮𝐧𝐠*: *𝐖𝐡𝐞𝐧 𝐈 𝐰𝐚𝐬 𝐘𝐎𝐔𝐍𝐆, 𝐈 𝐟𝐨𝐮𝐧𝐝 𝐢𝐭 𝐃𝐈𝐅𝐅𝐈𝐂𝐔𝐋𝐓 𝐭𝐨 𝐖𝐀𝐊𝐄 𝐔𝐏. 𝐖𝐡𝐞𝐧 𝐈 𝐚𝐦 𝐎𝐋𝐃...