Thursday, 12 July 2018

ಹಾಗೇ ಸುಮ್ಮನೇ....

    ಇತ್ತೀಚೆಗೆ ಮನೆಯಲ್ಲಿ ಅಡುಗೆ ಮಾಡುವದು ತುಂಬಾಕಡಿಮೆಯಾಗಿದೆ...ಹೆಣ್ಣುಮಕ್ಕಳೂ ಸಹ ದುಡಿಯುತ್ತಿರುವದರಿಂದ ಹೊರಗಿನ ಊಟವೇ ಪ್ರಧಾನವೆನಿಸುತ್ತಿದೆ...ನಮ್ಮ ಹಿರಿಯರಿಗೆ ಹೊರ ಊಟದ concept ಇರಲೇಇಲ್ಲ..ಅಡುಗೆ ಮಾಡುವದೂ ಒಂದು ಕಲೆ..ಅದೊಂದು ಪೂಜೆ, ಧ್ಯಾನ..ಅದಕ್ಕೇ ಅದಕ್ಕೆ ' ಪ್ರಸಾದವೆಂಬ ಹೆಸರೂ ಇದೆ...ಅದನ್ನರಿತು ಮಾಡುವ ಅಡುಗೆ ಉಣ್ಣುವವರಿಗೆ ಸಾತ್ವಿಕ ಗುಣ ಬೆಳೆಸಿಕೊಳ್ಳಲು ಸಹಕಾರಿಯಾಗುತ್ತದೆ."  ಶಿವಾನಿಯವರ ಮಾತು ಹಾಗೆಯೇ ಸಾಗಿತ್ತು..ಅವರ ಮಾತುಗಳು ಮುಗಿದರೂ ಅವರೆತ್ತಿದ ವಿಷಯದ ಗುಂಗು ನನ್ನನ್ನು ಬಿಡಲೇಯಿಲ್ಲ...ಅದೇ ಧಾಟಿಯಲ್ಲಿ ಸಾಗಿದಾಗ ನನಗೆ ಅನಿಸಿದ್ದಿಷ್ಟು...ಈಗ ಎಲ್ಲರ ಮನೆಯಲ್ಲೂ ಅಡುಗೆ ಮಾಡುವವರೇ ಇರುವದು ಜಾಸ್ತಿ...ಹಣಕ್ಕೆ ಬೇಯಿಸಿಟ್ಟು ಹೋದದ್ದರಲ್ಲಿ ಮನೆಯಡಿಗೆಯ ಆರೋಗ್ಯ,ಪ್ರೀತಿ,ಉಳಿತಾಯ,ರುಚಿ,ಸ್ವಚ್ಛತೆಯಾವುದೂ ಇರುವದಿಲ್ಲ...ವಿಶೇಷ ಸಂದರ್ಭಗಳಲ್ಲಿ ಅಡಿಗೆ ಮಾಡಿಸುವದು ಅಡ್ಡಿಯಿಲ್ಲ.ಸಮಯಾಭಾವದ ನೆವವೊಡ್ಡಿ ದಿನಾಲೂ ಹೊರಗೆ ಊಟಮಾಡುವದು ಅಥವಾ ಯಾರೋ, ಯಾವಾಗಲೋ ಬೇಯಿಸಿಟ್ಟದ್ದು ದಿನಾಲೂ ತಿನ್ನುವದೆಂದರೆ ಅಪಾಯ ಆಹ್ವಾನಿಸಿ ದಂತೆ... ಈಗಿರುವ ಪರಿಸ್ಥಿತಿ ನೋಡಿದರೆ _ kitchenless homes ಬರಬಹುದು...ಮಕ್ಕಳಿಗೆ ಅಡಿಗೆ ಏನೋ ನಮ್ಮದಲ್ಲದ ಪರಕೀಯ ವ್ಯವಸ್ಥೆ ಯನಿಸುವ ದಿನಗಳು ದೂರವಿಲ್ಲ...ನಾನು ಅಮೆರಿಕೆಗೆ ಹೋದಾಗ ಊಟಕ್ಕೆ ಹೋದ ಹೋಟೆಲ್ ಹೆಸರು clay oven...( ಮಣ್ಣಿನ ಒಲೆ) ನೈಜವಾಗಿ ಕಳೆದುಕೊಂಡದ್ದನ್ನು ಹೆಸರಿನಲ್ಲಿ ಹುಡುಕುವ ಹವಣಿಕೆ..' ಮನಪಸಂದ್'' ರಸೋಯಿ' 'ರಂಗೋಲಿ' ,ಹಳ್ಳಿಮನೆ'ಇಂಥ ಭಾವನಾತ್ಮಕ ಹೆಸರಿನಡಿಯಲ್ಲಿ ' ನಮ್ಮತನ' ದ ಹುಡುಕಾಟ... ಬಾಲವಿಹಾರಕ್ಕೆ ' ಅಜ್ಜಿಮನೆ' ಅಂದು ಖುಶಿಪಟ್ಟಂತೆ...               ಯಾವುದೂ ತಪ್ಪಲ್ಲ...ಅನಿವಾರ್ಯವೆಂದಾದಲ್ಲಿ ಕೆಲಮಟ್ಟಿಗೆ ಅಪೇಕ್ಷಣೀಯವೂ ಹೌದು.ಅಷ್ಟೇ ಏಕೆ? ಕೆಲವೊಂದು  ಪರ್ಯಾಯ ವ್ಯವಸ್ಥೆಗಳು ಅಸಲನ್ನು ಮೀರಿಸಿ ಉತ್ತಮವಾಗಿರಲೂ ಬಹುದು...ಹಾಗೆಂದು ಮೂಲ ವ್ಯವಸ್ಥೆ ಮರೆತು ಅದಕ್ಕೇಅಂಟಿಕೊಳ್ಳುವದು ಅವಶ್ಯಕವೂ ಇರುವದಿಲ್ಲ..ಅನಿವಾರ್ಯವೂ ಇರುವದಿಲ್ಲ ...ಅತಿಯಾದರೆ ಅಮೃತವೂ ವಿಷವಂತೆ ..ಹಾಗಾಗದೆ ನಡುವಿನ golden mid point ನ ಆಯ್ಕೆ ಮಾಡುವದು ಪರ್ಯಾಯವೆನಿಸಬಹುದು..      ‌‌     ಹಾಗೇ fb ತಿರುವಿಹಾಕುವಾಗ ಸಾಧ್ವಿ  ಶಿವಾನಿಯವರ ಭಾಷಣ ಕೇಳಿದಾಗ ತಲೆಯಲ್ಲಿ ಹಾದುಹೋದ ವಿಚಾರಗಳಿವು..ನನ್ನವು..ಕೇವಲ ನನ್ನ ದೃಷ್ಟಿಯಿಂದ...

No comments:

Post a Comment

        Excited to share DPS East won the CBSE National Championship in Football U19 team...They had won Cluster level in July and Nationals...