Monday, 16 July 2018

ಹಾಗೆ ಸುಮ್ಮನೆ...

              ಈ ಬದುಕೂ ತುಂಬ ವಿಚಿತ್ರ..ಎಷ್ಟೋ ಸಲ ಕಾರಣವಿಲ್ಲದೆ ಎಲ್ಲವೂ ಮುಗಿದು ಹೋದ ಭಾವ ಕಾಡುತ್ತದೆ.. ಯಾವುದರಲ್ಲಿಯೂ ಉತ್ಸಾಹ ಉಳಿಯುವದಿಲ್ಲ..ಸಂಪೂರ್ಣ ಕುಗ್ಗಿಹೋಗುತ್ತೇವೆ..ಇದು ಎಂಥವರನ್ನೂ ಬಿಟ್ಟಿಲ್ಲ.
               ಒಮ್ಮೊಮ್ಮೆ ನಾವು ಕಾರಣವಿಲ್ಲದೇ ಸೋತು ಕೈಯತ್ತಿ ಬಿಡುತ್ತೇವೆ...ಶರಣಾಗುತ್ತೇವೆ.ಶಸ್ರಾಸ್ತ್ರ ಚಲ್ಲಿಬಿಡುತ್ತೇವೆ..ಏನು ಮಾಡಲೂ ಉತ್ಸಾಹ ಬರುವದೇ ಇಲ್ಲ...ಕೆಲಸಗಳನ್ನು ತಪ್ಪಿಸಿಕೊಳ್ಳುವದು,ಕಾರಣವಿಲ್ಲದೇ ಮುಂದೂಡುವದು ಅನಿವಾರ್ಯ ವಾಗುತ್ತದೆ..
          ಆದರೆ ನೆನಪಿರಲಿ...ಇದೇ ಕೊನೆಯಲ್ಲ.. ಕಾರ್ಯಮಧ್ಯದ ಚಿಕ್ಕಚಿಕ್ಕ ವಿಶ್ರಾಂತಿಗಳು
ಗುರಿಗಳನ್ನು ಹೆಚ್ಚು ಗಟ್ಟಿಗೊಳಿಸುತ್ತವೆ..ಮುಂದಿನ ಹಾದಿಯನ್ನು ಸುಗಮಗೊಳಿಸುತ್ತವೆ..
ಕಾರಣ ಯಾವುದಾದರೂ ಕಾರಣಕ್ಕೆ ಜೀವನದಲ್ಲಿ '  ಖಾಲಿತನ ಕಾಡಿದರೆ ಖೇದಗೊಳ್ಳಬೇಕಿಲ್ಲ...ಹತಾಶರಾಗಬೇಕಿಲ್ಲ..ಖಾಲಿತನಕ್ಕೂ ತನ್ನದೇ ಆದ ತೂಕವಿದೆ...ಅದು ಅರ್ಥಪೂರ್ಣವೂ ಆಗಿದೆ..
      ಅಂತೆಯೇ ಬದುಕಿಗೊಂದು ಬಿನ್ನಹವಿರಲಿ...ಅದು ತನ್ನ ಕಷ್ಟ ನಷ್ಟ,ಅವಶ್ಯಕತೆಗಳನ್ನು ತಾನೇ ಸರಿದೂಗಿಸುತ್ತ ನಿರಂತರ ಚಲನೆಯಲ್ಲಿರಲಿ..ಅದು ಬತ್ತಲಾಗದಂತೆ ಚಂದಗೊಳಿಸುತ್ತಲೇ ಇರೋಣ..ಖಾಲಿ ಅನಿಸಿದರೆ ತುಂಬೋಣ..
                ಇದರಲ್ಲಿ ಏನೂ ತಪ್ಪಿಲ್ಲ ..ಹಿಮ್ಮೆಟ್ಟುವದು ಹೇಡಿತನವೇನೂ ಅಲ್ಲ.
ದಣಿವಿನ ಅರ್ಥಸಂಪೂರ್ಣ ಬಿಟ್ಟುಕೊಡುವದಲ್ಲ..ಅದು ಮನಸ್ಸು ಸ್ಥಿರವಾಗಿಲ್ಲದ್ದರ ನಿಮಿತ್ತವಾಗಿರಲೂ ಬಹುದು.ಒಂದು ದೊಡ್ಡ ಜಿಗಿತಕ್ಕೆ ಮೊದಲಿಗೆ ಹಾಕುವ ಒಂದೆರಡು ಅವಶ್ಯಕ ಹೆಜ್ಜೆಗಳಿರಬಹುದು.
                ‌ಅಂತೆಯೇ ಬದುಕಿನ ಚಿಕ್ಕ ಪುಟ್ಟ ಅಡ್ಡಿಗಳು ನಮಗೆ ಮುಂದಿನ ಜಿಗಿತಕ್ಕೆ ' ಚಿಮ್ಮು ಹಲಿಗೆ'ಗಳಾಗಲಿ...
(ಮನೋಹರ ನಾಯಕರ ಲೇಖನದ ಆಧಾರಿತ)

No comments:

Post a Comment

*O𝐥𝐝 𝐚𝐧𝐝 𝐘𝐨𝐮𝐧𝐠*: *𝐖𝐡𝐞𝐧 𝐈 𝐰𝐚𝐬 𝐘𝐎𝐔𝐍𝐆, 𝐈 𝐟𝐨𝐮𝐧𝐝 𝐢𝐭 𝐃𝐈𝐅𝐅𝐈𝐂𝐔𝐋𝐓 𝐭𝐨 𝐖𝐀𝐊𝐄 𝐔𝐏. 𝐖𝐡𝐞𝐧 𝐈 𝐚𝐦 𝐎𝐋𝐃...