Monday, 23 July 2018

ಹಾಗೇ ಸುಮ್ಮನೇ....

ನಾವು ಜೀವನದಲ್ಲಿ ಇಷ್ಟಪಟ್ಟು ಅತೀವ ಆಸಕ್ತಿಯಿಂದ ಅನೇಕ ಕೆಲಸಗಳನ್ನು ಪ್ರಾರಂಭಿಸುತ್ತೇವೆ...ಅದರ ಯಶಸ್ಸಿಗಾಗಿ ತನು,ಮನ,ಧನ ಎಲ್ಲವನ್ನೂ ವ್ಯಯಿಸಿ ಒಂದು ಘಟ್ಟಕ್ಕೆಮುಟ್ಟಿಸಿರುತ್ತೇವೆ.ಅಂದುಕೊಂಡ ಉದ್ದೇಶ ನೂರಕ್ಕೆ ನೂರು ಗೆಲುವೂ ಸಾಧಿಸಿರುತ್ತದೆ...           ಹೇಗೋ ಒಂದುದಿನ ' ಸಾಕು' ಅನಿಸಿ ಬಿಡುತ್ತದೆ.ಬೇರೇನಾದರೂ ಮಾಡುವಾ ಎಂಬ ಉದ್ದೇಶವಿರಬಹುದು..ಆ ಕೆಲಸದ ಬಗ್ಗೆ ತಾತ್ಕಾಲಿಕ ಏಕತಾನತೆ ಕಾರಣವಿರಬಹುದು.ಸಹಜ break ನಹಂಬಲವಿದ್ದು ' ಮತ್ತೆ ನೋಡೋಣ' ಏನಾದರೂ ಹೊಸದನ್ನು ಪ್ರಯತ್ನಿಸುವಾ ಎಂಬ ಮಾನವ ಸಹಜ ಸ್ವಭಾವವೂ ಕಾರಣಗಳಲ್ಲಿ ಒಂದಾಗಿರಬಹುದು..ಕಾರಣವೇನೇ ಇರಲಿ ಪರಿಣಾಮ ಒಂದೇ..     ‌‌‌  ಕೆಲಸ ಕೆಲಕಾಲ ನಿಲ್ಲಿಸುವದೇ ಆದರೆ.... ಖಂಡಿತ ಚಿಂತಿಸಬೇಕಿಲ್ಲ...ಬದುಕು ನಮಗೆ  ಬೇಕಾದ್ದುಕೊಡುತ್ತದೆ...ಸ್ವೀಕರಿಸಲು ನಾವು ಸಾಮರ್ಥ್ಯ ಬೆಳೆಸಿಕೊಳ್ಳಬೇಕು...ತೆಗೆದುಕೊಳ್ಳಲು ತೆರೆದುಕೊಳ್ಳಬೇಕು..ಯಾವುದೋ ಒಂದನ್ನು ಬಿಟ್ಟುಕೊಡಲು ಧೈರ್ಯಮಾಡಿದಾಗ ಮಾತ್ರ ಇನ್ನೊಂದಕ್ಕೆ 'Hello' ಹೇಳಬಲ್ಲೆವು ನಾವು...      ಶುರುವಾದುದು ಒಂದಿಲ್ಲ ಒಂದು ದಿನ ಮುಗಿಯಲೇ ಬೇಕು..ಇಲ್ಲದಿದ್ದರೆ ಹೊಸದು ಹುಟ್ಟೀತು ಹೇಗೆ? ಎಲ್ಲ ಒಳ್ಳೆಯದಕ್ಕೆ ಅಂದಾಗ ಕೆಲವೊಮ್ಮೆ ಕೆಲವನ್ನು ಹಿಂದಿಕ್ಕಲೇ ಬೇಕಾಗುವದು ಅನಿವಾರ್ಯವಷ್ಟೇ ಅಲ್ಲ...ಅತ್ಯವಶ್ಯಕವೂ ಹೌದು..ಅಂಥದೊಂದು ತಿರುವು ಸಮರ್ಥನೀಯ.ಅಲ್ಲದೇಒಂದು ಒಳ್ಳೆಯ,ಒಲವಿನ,ಸಂಗತಿ ' ಮುಕ್ತಾಯ'ವಾ ದಾಗಲೇ ಅದು ' ನೆನಪಿನ ಅಮೂಲ್ಯ ಖಜಾನೆ' ಯಲ್ಲಿ ಸದಾಕಾಲ ಬಂದಿಯಾಗಲು ಸಾಧ್ಯ..ನಂತರವೂ ಅದನ್ನು ನೆನೆನೆನೆದು ಸುಖಿಸಲು ಸಾಧ್ಯ ....ಅಷ್ಟಕ್ಕೂ ನಾವು ಪುಸ್ತಕವನ್ನೆಲ್ಲಿ ಮುಚ್ಚಿಡುತ್ತಿದ್ದೇವೆ...ಕೇವಲ ಪುಟ ತಿರುವಿ ಹಾಕುತ್ತೇವೆ ಅಷ್ಟೇ...ಅದಕ್ಕೆಂದೇ ಹೇಳುತ್ತಿರುವದು...ಯಾವಾಗಲೂ ಏನೋ ಒಂದು 'ಮುಗಿದುಹೋಯಿತೆಂಬ' ಭಾವ ಬೇಡ..ಅದು ನಮ್ಮ ಬದುಕಿನಲ್ಲಿ ಘಟಿಸಿತಲ್ಲ ಎಂದೇ ಆನಂದ ಪಡೋಣ..ಆಶಾವಾದಹೇಳುವದೂ ಇದನ್ನೇ..ಉತ್ತಮವಾದುದು ಕೊನೆಗೊಂಡರೆ ಅತ್ಯುತ್ತಮ ವಾದದ್ದೇನೋ ನಮಗಾಗಿ ಕಾಯುತ್ತಿದೆ ಎಂದೇ ಅರ್ಥ..ಆದ್ದರಿಂದ ಯಾವುದಕ್ಕೂ ಹಳಹಳಿಸುವ ಕಾರಣವಿಲ್ಲ..( ಆಧಾರ-ಮನೋಹರ ನಾಯಕರ ಲೇಖನ)

No comments:

Post a Comment

*O𝐥𝐝 𝐚𝐧𝐝 𝐘𝐨𝐮𝐧𝐠*: *𝐖𝐡𝐞𝐧 𝐈 𝐰𝐚𝐬 𝐘𝐎𝐔𝐍𝐆, 𝐈 𝐟𝐨𝐮𝐧𝐝 𝐢𝐭 𝐃𝐈𝐅𝐅𝐈𝐂𝐔𝐋𝐓 𝐭𝐨 𝐖𝐀𝐊𝐄 𝐔𝐏. 𝐖𝐡𝐞𝐧 𝐈 𝐚𝐦 𝐎𝐋𝐃...