K.E.Board ನಿಂದ key- board ಗೆ....
ನಾನು ಹುಟ್ಟಿದ್ದು, ಬೆಳೆದದ್ದು ತಾಲೂಕೂ ಅಲ್ಲದ ಒಂದು ಪುಟ್ಟ ಹಳ್ಳಿ...ಶಾಲೆಯ ಪರಿಕಲ್ಪನೆಯೂ ಇಲ್ಲದ ಊರಲ್ಲಿ,ಬಯಲಿನಲ್ಲಿ ಹುಡುಗರೊಂದಿಗೆ ಹುಡುಗರಾಗಿ ಕಬಡ್ಡಿ,ಗಿಡಮಂಗನಾಟವಾಡೋ ವಯಸ್ಸಿನಲ್ಲಿ ಹಿಡಿದು, ಎಳೆದುಕೊಂಡು ಹೋಗಿ ಮಾಲಿಕರಿಲ್ಲದ ಮನೆಯಲ್ಲಿ ಶಾಲೆ ಪ್ರಾರಂಭಿಸಿ ನಾಕಕ್ಷರ ಕಲಿಸುತ್ತಿದ್ದ ದಿನಗಳು..ಆದರೆ ಗುರುಗಳು ಮಾತ್ರವಿದ್ವಾಂಸರು,ಶ್ರದ್ಧೆಯಿಂದ ಕಲಿಸುವವರು..ಹೀಗಾಗಿ ಆಸಕ್ತಿ ಬೆಳೆದರೂ ಅನುಕೂಲ ಅಷ್ಟಾಗಿ ಇರಲಿಲ್ಲ..ನಾವು A.B.C.D ಕಲಿತದ್ದು 8 ನೇ ವರ್ಗದಲ್ಲಿ...ಅದೂ ಒಂದೂ ತಪ್ಪದೇ ಕ್ರಮಬದ್ಧವಾಗಿ ಬರೆಯುವ ಒಂದೋ ,ಎರಡೋ ಹುಡುಗರು ಸಿಕ್ಕರೆ ಮಾಸ್ತರರ ಪುಣ್ಯ..skool,buk,pepar,ಮುಂತಾಗಿ ನಾವು ಅಂದಂತೆ spelling ಸೃಷ್ಟಿಸುವ ವಿಶೇಷ ಪರಿಜ್ಞಾನ...ಈಗ ಅದೇ ವಿದ್ಯೆ ಸರ್ವ ಸಮ್ಮತವಾಗಿದೆ.ಆ ಮಾತು ಬೇರೆ... ಇಷ್ಟೆಲ್ಲ ಹೇಳಲು ಕಾರಣವಿದೆ..ಕಲಿಕೆಒಂದು ಆಜನ್ಮ ಪ್ರಕ್ರಿಯೆ.ಸಾವಿನೊಂದಿಗೇನೇ ಮುಗಿಯುವಂಥದು...ಇತರರಿಗೆ ಹೆಚ್ಚು ತೊಂದರೆ ಕೊಡದೇ ಸಾಯೂವದೂ ಒಂದು ಕಲೆ.. ಸರ್ವಜ್ಞನೇ ಒಪ್ಪಿಕೊಂಡಿದ್ದಾನೆ; ತಾನು ಗರ್ವದಿಂದಾದವನಲ್ಲ..ಎಲ್ಲರಿಂದೊಂದು ನುಡಿಗಲಿತು ವಿದ್ಯೆಯ ಪರ್ವತವಾದವನು ಎಂದು... "ಕೆಲವಂ ಬಲ್ಲವರಿಂದ ಕಲಿತು...ಕೆಲವಂ ಶಾಸ್ತ್ರಂಗಳಿದೋದುತ...ಕೆಲವಂ ಮಾಳ್ಪವರಿಂದ ಕಂಡು...ಕೆಲವಂ ಸುಜ್ಞಾನದಿಂ ನೋಡುತ".. ಇವು ಸೋಮೇಶ್ವರ ಶತಕದಿಂದ ಹೆಕ್ಕಿ ತೆಗೆದ ಸಾಲುಗಳು...ವಿವಿಧ ಮೂಲಗಳಾಯ್ದು ಕಲಿತರೆ ಮಾತ್ರ ಜ್ಞಾನಸಂಪಾದನೆ ಸಾಧ್ಯ ಎಂಬುದು ತಾತ್ಪರ್ಯ..ಅದು ಹನಿ,ಹನಿ ಕೂಡಿ ಹಳ್ಳವಾಗುವ ಪ್ರಕ್ರಿಯೆ... ನಿಮಗೊಂದು ಗುಟ್ಟು ಹೇಳಬೇಕು. ಕಲಿಕೆಯ ಬಗ್ಗೆ 'ಹಾಗೇ ಸುಮ್ಮನೇ' ಬರೆಯಬೇಕಾಗಿತ್ತು..ಆದರೆ ' ಜ್ಞ' type ಮಾಡುವದೇ ಗೊತ್ತಿರಲಿಲ್ಲ. auto typing ನಲ್ಲಿ screen ಮೇಲೆ ಬಂದದ್ದನ್ನು press ಮಾಡಿ ಕೆಲಸ ಸಾಗಿಸುತ್ತಿದ್ದೆ..ನನ್ನ ಶಿಷ್ಯ ಸಂಮೋದ ವಾಡಪ್ಪಿ messenger ನಲ್ಲಿ ನನಗೆ class ನಡೆಸಿ practice ಮಾಡಿಸಿ ನನ್ನನ್ನು ಸರ್ವಜ್ಞಳನ್ನಾಗಿ ಮಾಡಿದ... ನನ್ನ ಮೊದಲ ಪುಸ್ತಕ _'ಚೌ _ ಚೌಪದಿ' ಗೆ ಶ್ರೀ ರಘು ಅಪಾರ ಅವರು , ಎರಡನೇ ಪುಸ್ತಕ ' ಆಣೆಕಲ್ಲುಗಳು' ಸಂಕಲನಕ್ಕೆ ವಿವಿಧ ಮೂಲಗಳ, ಭಾಷೆಗಳ ಲೇಖಕರು ಹಾಗೂ ಈಗ ಬರೆಯುತ್ತಿರುವ ,ಹಾಗೇ ಸುಮ್ಮನೇ' ಕಾಲಂಗೆ ಮನೋಹರ ನಾಯಕ ಅವರು,ಬೇರೆ ಬೇರೆ ಭಾಷೆಯ ಬರಹಗಾರರ ಕೃತಿಗಳೂ, fb ಯಲ್ಲಿ ಇತರ ಭಾಷೆಗಳ post ಗಳೂ ,ಮುಂತಾದ ಹತ್ತು ಹಲವಾರು ಆಕರಗಳ ಛಾಪು ಇದೆ..ಮುಕ್ಕಾಲು ಭಾಗ ಮಿಕ್ಕಿ ಸ್ವಂತವೂ ಇವೆ...ಮೊದಲೇ ಈ ಮಾತನ್ನು ಬಿಚ್ಚಿಟ್ಟು, ಲೇಖಕರು ಪರಿಚಯದವರಿದ್ದರೆ ಅವರ ಸಂಪೂರ್ಣ ಒಪ್ಪಿಗೆ ಪಡೆದೇ ಬರೆಯುತ್ತೇನೆ..ಮೂಲ ಗೊತ್ತಿಲ್ಲದಿದ್ದರೆ, farword ಆದ ಮೆಸೇಜ ಆಗಿದ್ದರೆ ಅದರ ಅನುವಾದ ಮಾಡಿ ' ಆಧಾರ' ಎಂದು ಸ್ಪಷ್ಟಪಡಿಸುತ್ತೇನೆ..ಮುಂಬೈಯ 'ಶಂಖ' studio ದ ಮಾಲಿಕರಾದ ಲೇಖಕ,ಕವಿ,Good morning Sunday ಅಂಕಣವನ್ನು ಹತ್ತು ವರ್ಷಗಳಿಂದ ಸಮರ್ಥವಾಗಿ ಮುನ್ನಡೆಸಿಕೊಂಡು ಹೋಗುತ್ತಿರುವ ಶ್ರೀ ಮನೋಹರ ನಾಯಕ ಅವರು translation ಅನ್ನುವ ಬದಲಾಗಿ Transcreation ಎಂಬ ಚಂದದ ಹೆಸರಿನಲ್ಲಿ ಜಾಲತಾಣವನ್ನೇ ಸೃಷ್ಟಿಸಿ ನಮ್ಮಂಥ ಅಪಕ್ವ ಬರಹಗಾರರಿಗೂ ವೇದಿಕೆ ಒದಗಿಸಿದ್ದಾರೆ.... ಹೀಗಾಗಿ ಯಾವುದೇ post ನಮಗೆ like ಆದರೂ ಸಂಬಂಧಿಸಿದವರನ್ನು ಸಂಪರ್ಕಿಸಿ repost ಮಾಡುವದು ಅಪರಾಧವಲ್ಲ.ಎಲ್ಲರಿಗೂ ಎಲ್ಲ ಭಾಷೆ ಗೊತ್ತಿರುವದಿಲ್ಲ.ಅದೊಂದೇ ಕಾರಣಕ್ಕೆ ಉತ್ತಮವಾದದ್ದರಿಂದ ಯಾರೂ ವಂಚಿತರಾಗಬಾರದು. ಓದಲು ಉಚಿತವಾದದ್ದೆಲ್ಲ ಎಲ್ಲರಿಗೂ ತಲುಪಬೇಕೆಂಬುದಷ್ಟೇ ಉದ್ದೇಶ...ಒಂದುವೇಳೆ ಲೇಖಕರು ಪರಿಚಯವಿಲ್ಲದಿದ್ದರೆ _' ನನ್ನದಲ್ಲ'ನಾಮೆಚ್ಚಿದ್ದು' ಆಧಾರ ಅಂತ ಕಾಣಿಸಿದರೂ ಸಾಕು...ಎಷ್ಟೋ ಸಮಸ್ಯೆಗಳು ಪರಿಹಾರವಾಗುತ್ತವೆ.. ಶುದ್ಧ ಗಾಳಿ ಯಾವ ಕಡೆಯಿಂದಲೂ ಬೀಸಲಿ..ಉಸಿರಾಟ ಮುಖ್ಯ..ಜ್ಞಾನ ಯಾವುದೇ ಮೂಲೆಯಿಂದ ಬರಲಿ ಸ್ವಾಗತಾರ್ಹ.. ಹನಿಹನಿಗಳು ಕೂಡಿ ಹಳ್ಳವಾಗಲಿ...ತೆನೆ ತೆನೆ ಸೇರಿ ರಾಶಿಯಾಗಲಿ...

No comments:
Post a Comment