Monday, 27 August 2018

ಹಾಗೇ ಸುಮ್ಮನೇ....

" ಬೆಳಗಿನಿಂದ ಆಡುತ್ತಿದ್ದೀಯಾ...ನಿನಗೆ ದಣಿವಾಗಿದೆ..ಈಗ ಮಲಗುವ ಸಮಯ...ಆಟಿಗೆಗಳನ್ನು ಎತ್ತಿಟ್ಟು ಈಗ ಮಲಗು..ಈ ಆಟಿಗೆಗಳೂ ಹಳೆಯವಾಗಿವೆ..ಎದ್ದ ತಕ್ಷಣ ನಿನಗೆ ಬೇಕಾದಂಥ ಹೊಸಹೊಸ ಆಟಿಗೆಗಳನ್ನು ಮತ್ತೆ ತರೋಣ.."-
ಆಡಿ ಆಡಿ ದಣಿದು ಆಟಿಗೆಗಳ ಮಧ್ಯದಲ್ಲಿಯೇ ತೂಕಡಿಸುವ ಮಗುವನ್ನು ನಿಧಾನವಾಗಿ ಎತ್ತಿ ಅಪ್ಪಿಕೊಂಡು ತಾಯಿ ರಮಿಸುತ್ತಾಳೆ...
          ‌‌‌‌‌‌  ‌‌‌  ಮಗುವಿಗೆ ಆಟಿಗೆಗಳ ಒಲವಿನ್ನೂ ಕಡಿಮೆಯಾಗಿಲ್ಲ..ಇನ್ನೂ ಸ್ವಲ್ಪು ಹೊತ್ತು ಆಡುವ ಮನಸ್ಸು...ಆದರೆ ದೇಹ ದಣಿದಿದೆ...ಬಿಟ್ಟರೆ...? ಈ ಆಟಿಗೆಗಳು ಪುನಃ ದೊರೆಯುವವೋ ಇಲ್ಲವೋ ಅನುಮಾನ...ಹೀಗಾಗಿ ಅಮ್ಮನ ಮಾತುಗಳನ್ನು  ಒಪ್ಪಿಕೊಳ್ಳಲಾಗುತ್ತಿಲ್ಲ...
                ಆದರೆ ಮಗುವಿಗೇನು ಬೇಕು ಅಮ್ಮನಿಗೆ ಚನ್ನಾಗಿ ಗೊತ್ತು..ಅಂತೆಯೇ ಮಗುವನ್ನು ಪುಸಲಾಯಿಸಿ,ರಮಿಸಿ ಅದರ ಕೈ ಹಿಡಿದು ಅರ್ಧ ಒತ್ತಾಯ,ಅರ್ಧ ಅನಿವಾರ್ಯತೆ ಯಿಂದ ಮಲಗುವ ಮನೆಗೆ ಕರೆದೊಯ್ದು ಮಲಗಿಸುತ್ತಾಳೆ...ಮಗು  ಹಿಂದಿರುಗಿ ಆಸೆಯಿಂದ ಆಟಿಗೆಗಳನ್ನು ನೋಡುತ್ತಲೇ ಅರೆಗಣ್ಣಿನಲ್ಲಿ ಅಮ್ಮನನ್ನು ಹಿಂಬಾಲಿಸುತ್ತದೆ..."
                    ಇದು ನಾನು ಶಿಕ್ಷಕಿಯಾಗಿದ್ದಾಗ ಮಕ್ಕಳಿಗೆ ಕಲಿಸಿದ THE MOTHER ಇಂಗ್ಲಿಷ ಕವಿತೆ...ಈ ಕವನದ ಅಡಿಬರಹಗಳಲ್ಲಿ ಈ ಸಂದರ್ಭವನ್ನು ಬದುಕಿಗೆ ಹೋಲಿಸಿ the mother nature ನ concept ಕೊಡಲಾಗಿತ್ತು...ಮೇಲಿನ ವಿವರಣೆ ಬದುಕಿನದೇ replica...
             ಬದುಕೊಂದು ಆಟ...ನಾವು ಮಗು...ಸುತ್ತಲ ಜಗತ್ತೇ ಆಡುಂಬೊಲ...ಪ್ರೀತಿಯ ಹೆಂಡತಿ/ ಗಂಡ, ಹಡೆದ ಮಕ್ಕಳು,ಗಳಿಸಿದ ಹೆಸರು,ಕೂಡಿಟ್ಟ ಆಸ್ತಿ,
ಹೊತ್ತಿಗಾಗುವ/ ಆಗದ ಬಂಧು ಬಳಗ,bank balance ಎಲ್ಲವೂ ನಮ್ಮನ್ನು ಹಿಡಿದು ಕಟ್ಟಿಹಾಕಿದ ಆಟಿಗೆಗಳು.. ಅವುಗಳನ್ನು ಗಳಿಸುವಲ್ಲಿ.ಉಳಿಸಿಕೊಳ್ಳುವಲ್ಲಿ ಸಾಕಷ್ಟು ಶ್ರಮ,ಕಸರತ್ತು ಮಾಡಿಮಾಡಿ ಹಣ್ಣಾಗಿರುತ್ತೇವೆ..
ಬೇಗನೇ ಆಗಲಿ, ಸ್ವಲ್ಪು ತಡವಾಗಿಯಾಗಲೀ ಆಟ ಮುಗಿಯಲೇ ಬೇಕು..ಆಟಿಗೆಗಳನ್ನು ಬಿಟ್ಟೆದ್ದು ನಡೆಯಲೇಬೇಕು..ಅಂಥದೊಂದು ವ್ಯವಸ್ಥೆಯನ್ನು ಪ್ರಕ್ರತಿಯೇ ಮಾಡಿ ಇಟ್ಟಿದೆ...ಅದರ ನಿರ್ಧಾರದ ಮುಂದೆ ನಮ್ಮ ಅಳಲು ಕೇವಲ ಅರಣ್ಯ ರೋದನ....
               ಈಗ ಕೆಲದಿನಗಳಿಂದ ಚರ್ಚೆಯಲ್ಲಿರುವ ಇರಫಾನ್ಖಾನ್,ಸೋನಾಲಿ ಬೇಂದ್ರೆಯವರ ಬದುಕಿನ ಘಟನೆಗಳನ್ನು ಓದಿದಾಗಲೆಲ್ಲ ಈ ಕವಿತೆ ಬಹಳೇ ನೆನಪಾಗುತ್ತಿದೆ..ಲೀಸಾ ರೇ,ಯುವರಾಜ ಸಿಂಗ್,ಮನೀಷಾಕೊಯಿರಾಲಾರಂತೆ ಇವರೂ ಯುದ್ಧ ಗೆದ್ದು ಬರಲಿ..ಬರುತ್ತಾರೆ...ಇದು ಕೇವಲ ಇವರದಷ್ಟೇ ಕಥೆಯಲ್ಲ...ನಾವೆಲ್ಲರೂ ಒಮ್ಮಿಲ್ಲ ಒಮ್ಮೆ ,ಇಂದಿಲ್ಲ.. ನಾಳೆ..ಈ ರೀತಿಯಲ್ಲದಿದ್ದರೆ ಮತ್ತೆ ಬೇರಾವುದೋ ರೀತಿಯಲ್ಲಿ ನಮ್ಮ ಶಸ್ತ್ರಾಸ್ತಗಳನ್ನು ಕೆಳಗಿರಿಸಿ ಆ ದೈವ ನಿರ್ದೇಶಿಸಿದತ್ತ ಹೊರಡಲೇಬೇಕು ತಾನೇ...ಈ ಮಾತು ಮನುಷ್ಯನಿಗೆ ಸದಾ ನೆನಪಿದ್ದು 'ಇದ್ದಾಗ 'ಅವನನ್ನು ಸ್ವಲ್ಪು ನಮ್ರನನ್ನಾಗಿಸಿದರೆ ಎಷ್ಟೊಂದು ಚನ್ನ!!!

No comments:

Post a Comment

*O𝐥𝐝 𝐚𝐧𝐝 𝐘𝐨𝐮𝐧𝐠*: *𝐖𝐡𝐞𝐧 𝐈 𝐰𝐚𝐬 𝐘𝐎𝐔𝐍𝐆, 𝐈 𝐟𝐨𝐮𝐧𝐝 𝐢𝐭 𝐃𝐈𝐅𝐅𝐈𝐂𝐔𝐋𝐓 𝐭𝐨 𝐖𝐀𝐊𝐄 𝐔𝐏. 𝐖𝐡𝐞𝐧 𝐈 𝐚𝐦 𝐎𝐋𝐃...