Monday, 27 August 2018

ಹಾಗೇ........


ಈ ಮೂಡುಗಳೇ ಹಾಗೆ..
ಸರೀ ಸಮಯಕ್ಕೇ
ಕೈಕೊಡುತ್ತವೆ...
ಥೇಟ್ ಸುಳ್ಳು
ಗೆಳೆಯರ ಹಾಗೇ....
ಈ ಕನಸುಗಳೇ ಹಾಗೆ...
ಹೊಳೆಹೊಳೆದು
ಕಣ್ತುಂಬಿ ಕೊನೆಗೆ
ಕಣ್ಮರೆಯಾಗುತ್ತವೆ...
ಥೇಟ್ ಮುಂಜಾವಿನ
ಮಂಜುಹನಿಗಳ ಹಾಗೆ....
ಈ ಭಾವಗಳೇ ಹಾಗೆ...
ಎದೆ ಒದ್ದೆಯಾಗಿಸಿ
ಹನಿಗಣ್ಣಾಗಿಸುತ್ತವೆ...
ಥೇಟ್ ತಾಯಿಹೃದಯದ
ಮಗಳ ಹಾಗೆ....
ಈ ಬದುಕೇ ಹಾಗೆ..
ಕರಗಿಸಿ,ಕುದಿಸಿ,
ಹಣ್ಣಾಗಿಸಿ
ರೂಪ ಕೊಡುತ್ತದೆ...
ಥೇಟ್ ಕುಲುಮೆಯ ಹಾಗೆ....
ಈ ದೈವವೇ ಹಾಗೆ...
ಬಯಸಿದಾಗ ಕೈಗೆ ಸಿಗದೇ
ಬೇಡವಾದಾಗ ತೊಡೆಯೇರಿ
ಲಲ್ಲೆಗರೆಯುತ್ತದೆ...
ಥೇಟ್..ಥೇಟ್
ಹಟಮಾರಿ ಮಗುವಿನ ಹಾಗೆ...

No comments:

Post a Comment

ನೀನಿನ್ನೂ ಇರಬೇಕಿತ್ತು ಮನೋಜ...                       ನಿನಗಾಗಿಯೇ/ನಿನ್ನೆಲ್ಲ ಕನಸು ಗಳನ್ನು ಸಾಕಾರಗೊಳಿಸಿಕೊಳ್ಳುವುದ ಕ್ಕಾಗಿಯೇ...ನೀನೇ ಕಟ್ಟಿಸಿದ ಹೊಸಮ ನೆ /ನಿನ...