Monday, 27 August 2018

ಹಾಗೇ ಸುಮ್ಮನೆ...


ನಿನ್ನೆ fb ಯಲ್ಲಿ ಹಳೆಯ ಸಂಪ್ರದಾಯಗಳ ಔಚಿತ್ಯತೆ ಪ್ರಶ್ನಿಸಿ ಒಂದು post ಬಂದಿತ್ತು.ಅರ್ಧ ಗಂಟೆಯಲ್ಲಿ ಪರ ಹಾಗೂ ವಿರೋಧದ ನಿಲುವುಗಳು ಪ್ರಕಟವಾಗತೊಡಗಿದವು..ಇದು ಅತ್ಯಂತ ಸಹಜ...ಪ್ರಶ್ನೆ ಅದಲ್ಲ...ಭಾವನೆಗಳ ಓಘದಲ್ಲಿ ಪ್ರತಿಕ್ರಿಯೆ ಬರೆದಷ್ಟು ಸುಲಭವಲ್ಲ ಪರಿಹಾರ ಎಂಬುದು ಇಷ್ಟವಿಲ್ಲದಿದ್ದರೂ ಒಪ್ಪಬೇಕಾದ  ಸತ್ಯ..
          ಯಾವುದೇ ಒಂದು ಸಂಪ್ರದಾಯ ಸಮಾಜದಲ್ಲಿ ಬಹುಕಾಲ ಉಳಿದು ಬಂದಿದೆ ಅಂದರೆ ಅದರ ಆಳ, ಅಗಲ ವಿಸ್ತಾರವಾಗಿದೆ ಎಂದೇ ಅರ್ಥ...ಅದು ಅಭ್ಯಾಸ ಬಲವೋ,ಅನಿವಾರ್ಯವೋ,ಅಸಹಾಯಕತೆಯೋ ಏನೇ ಆಗಿರಲಿ ಬದಲಾವಣೆ ಕಷ್ಟಸಾಧ್ಯ ಎಂಬುದಂತೂ ನಿರ್ವಿವಾದ...
           ‌‌‌ ಒಂದು ಸಮಾಜ ಆಯಾಕಾಲದ ತನ್ನ ಸಾಮಾಜಿಕ,ಸಾಂಸ್ಕೃತಿಕ, ಧಾರ್ಮಿಕ ಹಿನ್ನೆಲೆಯನ್ನಾಧರಿಸಿ ಕಟ್ಟುಪಾಡುಗಳನ್ನು ಹಾಕಿಕೊಂಡಿರುತ್ತದೆ...ಆ ಸಮಾಜದಲ್ಲಿ ಕಾಲಾಂತರದಲ್ಲಿ ತಾನೇತಾನಾಗಿ ಬದಲಾವಣೆಯಾಗುವವರೆಗೂ ಇನ್ನಿತರ ಬದಲಾವಣೆಗಳ ಅನಿವಾರ್ಯತೆ ಯಾರನ್ನೂ ಕಾಡುವದಿಲ್ಲ....
         ‌  ‌‌‌ ಶೀಘ್ರ ಬದಲಾವಣೆಯಾಗುತ್ತಿರುವ ಅತ್ಯಾಧುನಿಕ computer ಯುಗದಲ್ಲಿ ಆರ್ಥಿಕ ವಲಯದಲ್ಲಿಯ ಸುಧಾರಣೆಯನ್ನು ನಾವೆಲ್ಲ ಒಪ್ಪಿ ಅಪ್ಪಿಕೊಂಡಿದ್ದರೂ  ವೈಯಕ್ತಿಕ ನೆಲೆಯಲ್ಲಿ, ಭಾವನೆಗಳಿಗೆ ಸಂಬಂಧಿತ ವಿಷಯಗಳಲ್ಲಿ ಆದ ಅತಂತ್ರ  ಸ್ಥಿತಿಗೆ ತತ್ತರಿಸಿರುವದೂ ಸುಳ್ಳಲ್ಲ...ಮಕ್ಕಳಿಗೆ ಭವಿಷ್ಯ ಬೇಕು ಅನ್ನುವವರು ಅದರಿಂದಾಗುವ ಅನನುಕೂಲತೆಗಳನ್ನು ಒಪ್ಪಿಕೊಳ್ಳುವದು ಅನಿವಾರ್ಯ ವಾಗುತ್ತದೆ‍..'ಅಕ್ಕಿ ಉಳಿಯ ಬೇಕೆನ್ನುವವರು ನಂಟರನ್ನು ದೂರವಿಡಬೇಕಾಗುತ್ತದೆ...
             ಹೀಗೆ ಸಾಂಪ್ರದಾಯಿಕ ನಿಲುವುಗಳು, ಆಧುನಿಕತೆಯ ಆಮಿಷಗಳ ನಡುವೆ ನಿರಂತರ ಘರ್ಷಣೆ.ನಮಗೇನು ಬೇಕು?,ಎಷ್ಟು ಬೇಕು,? ಎಷ್ಟುದಿನಗಳ ಕಾಲಬೇಕು?ಎಂಬ ನಿಲುವನ್ನು ನಾವೇ ಗಟ್ಟಿಗೊಳಿಸಿಕೊಂಡು ಅಸ್ತಿತ್ವ ಉಳಿಸಿಕೊಳ್ಳಬೇಕೇ ವಿನಃ ವ್ಯವಸ್ಥೆಯನ್ನು ದೂರುವದರಿಂದ ಏನೂ ಪ್ರಯೋಜನವಿಲ್ಲ...'ಕಾಲ'ಕ್ಕೆ ಎಲ್ಲವನ್ನೂ ,ಎಲ್ಲರನ್ನೂ,ಕ್ಷಣಾರ್ಧದಲ್ಲಿ ನುಂಗಿ ನೀರು ಕುಡಿಯಬಲ್ಲ ಅಗಾಧ ಶಕ್ತಿಯಿದೆ..

No comments:

Post a Comment

*O𝐥𝐝 𝐚𝐧𝐝 𝐘𝐨𝐮𝐧𝐠*: *𝐖𝐡𝐞𝐧 𝐈 𝐰𝐚𝐬 𝐘𝐎𝐔𝐍𝐆, 𝐈 𝐟𝐨𝐮𝐧𝐝 𝐢𝐭 𝐃𝐈𝐅𝐅𝐈𝐂𝐔𝐋𝐓 𝐭𝐨 𝐖𝐀𝐊𝐄 𝐔𝐏. 𝐖𝐡𝐞𝐧 𝐈 𝐚𝐦 𝐎𝐋𝐃...