Monday, 27 August 2018

ಹಾಗೇ ಸುಮ್ಮನೇ.....

ನನ್ನನ್ನು ಯಾರಾದರೂ ನಿಮಗೆಷ್ಟು ವರ್ಷ ಅಂದರೆ ನಾನು ಉತ್ತರಿಸಬಯಸುವದಿಲ್ಲ..ನನ್ನ ವಯಸ್ಸು ಮುಚ್ಚಿಡಬೇಕೆಂದು ಖಂಡಿತ ಅಲ್ಲ....ಕಳೆದ ವರ್ಷಗಳು ಕಳೆದೇ ಹೋಗಿಬಿಟ್ಟವು ಎಂದು ನಾನೆಂದೂ ಭಾವಿಸುವದಿಲ್ಲ..ಬೇಕೆಂದಾಗ ಬೇಕಾದಷ್ಟು ಆ ದಿನಗಳಲ್ಲೂ ಪುನರ್ಜೀವಿಸಬೇಕೆಂಬ ಒಂದೇ ಒಂದು ಹಂಬಲದಿಂದಾಗಿ ಅವನ್ನು ಕಾಪಿಟ್ಟುಕೊಳ್ಳ ಬಯಸುತ್ತೇನೆ.ನನ್ನ ಮಟ್ಟಿಗೆ ದೇಹಕ್ಕಾದ ವಯಸ್ಸು ಒಂದು ಸಂಖ್ಯೆ ಅಷ್ಟೇ....ಹುಡುಗರೊಂದಿಗಿದ್ದಾಗ  cartoons ನೋಡುನೋಡುತ್ತಾ ಆ ವಯಸ್ಸಿಗೇ ಜಾರುತ್ತೇನೆ....TV ಯಲ್ಲಿ music ಹಾಕಿದರೆ ನನ್ನ ಕಾಲುಗಳು ಈಗಲೂ ತಮಗೆ ತಾವೇ ಕುಣಿಯುತ್ತವೆ..ದೊಡ್ಡವರೊಂದಿಗೆ ಕುಳಿತು ಮಾತುಕತೆ,ಸುಖ ದುಃಖಗಳ ವಿನಿಮಯವಾದಾಗ ಅವರ ಧಾಟಿಯಲ್ಲೇ ಮನಸ್ಸು ಯೋಚಿಸತೊಡಗುತ್ತದೆ..ವಸ್ತುತಃ ನಾನು
ಏಕ ಕಾಲಕ್ಕೆ ಆಯುಷ್ಯದ ವಿವಿಧ ಮಗ್ಗಲುಗಳನ್ನು ಜೀವಿಸಬಯಸುತ್ತೇನೆ..
         ಇದರಲ್ಲಾವ ತಪ್ಪಿಲ್ಲವೆಂದೇ ನನ್ನ ಅನಿಸಿಕೆ..ಯಾರಾದರೂ ಎಂದಾದರೂ ಸೂರ್ಯನ ಬೆಳಕಿನಕಿರಣಗಳ, ಚಂದ್ರನ ಬೆಳದಿಂಗಳ ದಿನಗಳ,ಹರಿಯುವ ನದಿಯ ಜಲಧಾರೆಯ ಆಯುಷ್ಯ ಕೇಳಿದ ದಾಖಲೆ ಉಂಟೇ..? ಅವು ಅವುಗಳ ಬದುಕಾದರೆ ನನ್ನ ಬದುಕಿನ ದಿನಗಳು ನನ್ನ ಸ್ವಂತದ್ದೇ ತಾನೇ?
         ಪರಿವರ್ತನೆ ಜಗದ ನಿಯಮ..ನಾನೂ ಗತಿಸುವ ಕಾಲದೊಂದಿಗೆ ಬದಲಾಗಲು ಕಲಿತಿದ್ದೇನೆ..ಪ್ರಸ್ತುತ ಜಗತ್ತಿನೊಡನೆ ರಾಜಿ ಮಾಡಿಕೊಂಡು ಬದುಕುತ್ತೇನೆ..
          ಅಂದಮೇಲೆ ನನಗೆ ಎಷ್ಟು ವರ್ಷಗಳು? ಇನ್ನೆಷ್ಟು ವರ್ಷ ಬದುಕಬಹುದು? ಇಂಥ ಅರ್ಥರಹಿತ ಪ್ರಶ್ನೆಗಳೇಕೆ? ಅದರಿಂದಾಗುವ ಪ್ರಯೋಜನವಾದರೂ ಏನು? ಬದುಕು ಮಹತ್ತರವಾಗಿರಬೇಕು ಅದು ಮುಖ್ಯ..ದೀರ್ಘವಾಗಿರಲೇ ಬೇಕೆಂದಿಲ್ಲ..ಇದ್ದಷ್ಟು ದಿನಗಳ ಬದುಕು ಸಂಖ್ಯೆಯಿಂದಲ್ಲ ..ಮೌಲ್ಯದಿಂದ ಗಣಿಸಲ್ಪಡಬೇಕು...ಮಹದಾದೇಶ ಬಂದಾಗ ಎದ್ದು ಹಿಂದಿರುಗಿ ನೋಡದೇ ಹೊರಟು ಬಿಡಬೇಕು..ಅಲ್ಲಿಯವರೆಗೆ ಪ್ರತಿನಿಮಿಷ ಪ್ರತಿಗಂಟೆ ನಮಗೂ ನಮ್ಮವರೆಲ್ಲರಿಗೂ ಹಿತವಾಗುವಂತೆ ಸಾಧ್ಯವಾದಷ್ಟೂ ಬದುಕು ಮರಣೋತ್ತರವಾಗಿಯೂ ಸ್ಮರಣೀಯವಾಗುವಂತೆ ಬದುಕಬೇಕು...
( ಆಧಾರ: ಹಿಂದಿ ಮೂಲ)

No comments:

Post a Comment

*O𝐥𝐝 𝐚𝐧𝐝 𝐘𝐨𝐮𝐧𝐠*: *𝐖𝐡𝐞𝐧 𝐈 𝐰𝐚𝐬 𝐘𝐎𝐔𝐍𝐆, 𝐈 𝐟𝐨𝐮𝐧𝐝 𝐢𝐭 𝐃𝐈𝐅𝐅𝐈𝐂𝐔𝐋𝐓 𝐭𝐨 𝐖𝐀𝐊𝐄 𝐔𝐏. 𝐖𝐡𝐞𝐧 𝐈 𝐚𝐦 𝐎𝐋𝐃...