" ನನ್ನ ಮೇಲೆ ಮೂರು ಜನ ಹಿರಿಯರಿದ್ದಾರೆ...ನಾನಿನ್ನೂ ಸಣ್ಣವನು...
ಇನ್ನು ಕೆಲ ದಿನಗಳಲ್ಲಿ ಕಾಲೇಜಿನ ಕೆಲಸದಲ್ಲಿದ್ದು,ಎಪ್ಪತ್ತಕ್ಕೆ retire ಆಗಿ ಸಣ್ಣವರಿಗೆ ಜವಾಬ್ದಾರಿ ವಹಿಸಿಕೊಟ್ಟು
ಬೇಕೆಂದಷ್ಟಕ್ಕೇ ಆಯ್ಕೆ ಮಾಡಿಕೊಂಡು
ಇರುತ್ತೇನೆ...ಇನ್ನು ನಿನ್ನ ಮೊಮ್ಮಗನ
ಮದುವೆಯವರೆಗೂ ಅಂಥ ಕಾರ್ಯಕ್ರಮಗಳೂ ಇಲ್ಲ-" ಸದಾ ಇವೇ ಮಾತನಾಡುತ್ತಿದ್ದೆ.ಅಂದೂ ಅದನ್ನೇ
ಮಾತನಾಡಿ ಮುಗಿಸಿ ಪೇಟೆಯ ಕಡೆ
ಹೋಗಿ ಬರುತ್ತೇನೆ- ಎಂದು ಹೋದವನು
ನೀನು...ಬರಲೇ ಇಲ್ಲ...
ಇನ್ನೂ ಕಾಯುತ್ತಿದ್ದೇವೆ...' ಚಿಟ್ಟೀ ನ ಕೋಯಿ ಸಂದೇಶ...ಓ ಕೌನ್ ಸಾ ದೇಶ...ತುಮ್ ಚಲೇಗಯೇ'-
ಈ ಹಾಡು ಎಲ್ಲೇ/ ಯಾವಾಗಲೇ ಕೇಳಲಿ
ನೆನಪಾಗುತ್ತೀಯಾ ಸುಧಿ ನೀನು ನನಗೆ...
ನನ್ನ ನಂತರದ ಒಬ್ಬನೇ ತಮ್ಮ ನೀನು...
ಕೂಡಿಯೇ ಧಾರವಾಡಕ್ಕೆ ಬಂದೆವು. ಅಲ್ಲಿಯೇ ಬಹಳ ವರ್ಷ ಇಬ್ಬರೂ ಇದ್ದುದರಿಂದ ಹತ್ತಿರವಾದೆವು...ನನ್ನ ಕಷ್ಟದ ದಿನಗಳಲ್ಲಿ ಕೇವಲ ಒಂದು ಫೋನ್ call ಅಂತರದಲ್ಲಿದ್ದು ನನ್ನನ್ನು
ಕಾಪಿಟ್ಟವನು.ನೀನು ಇರುವವರೆಗೂ ಧಾರವಾಡಕ್ಕೆ ಬಂದಾಗ ಎಷ್ಟು ನಿಶ್ಚಿಂತಳಾಗಿ ಇರುತ್ತಿದ್ದೆ ನನಗೆ ಮಾತ್ರ
ಗೊತ್ತು...
ಇಂದಿಗೂ ಒಂದೊಂದು ದಿನ
ತುಂಬ ನೆನಪಾಗಿ ನನ್ನನ್ನು ಕಾಡುತ್ತೀಯಾ-
ಫೋನಿನಲ್ಲಿ ಮಾತನಾಡಬೇಕು/ ಏನನ್ನೋ ಹಂಚಿ ಕೊಳ್ಳಬೇಕು ಎಂಬ
ಒತ್ತಡವಾಗುತ್ತದೆ...ಆ ದಿನವೆಲ್ಲ ನಿನ್ನದೇ
ಹೆಸರಲ್ಲಿ...
ಖಾಲಿ ಇದ್ದೆ- ನೀನಿದ್ದಿದ್ದರೆ ಎಂದೆನಿಸಿ ಇಷ್ಟೆಲ್ಲ ನೆನಪಾಯ್ತು ಸುಧಿ..
No comments:
Post a Comment