Thursday, 22 October 2026

   ಅಜ್ಜ+ಅಜ್ಜಿ-ಅಪ್ಪ+ಅಮ್ಮ- ಅತ್ತೆ+ ಮಾವ-ಅಕ್ಕ+ಭಾವ-ಚಿಕ್ಕಮ್ಮ+ ಚಿಕ್ಕಪ್ಪ-
ಅತ್ತಿಗೆ+ ನಾದಿನಿ- ಭಾವ+ ಮೈದುನ ಹೀಗೆ ಸಂಬಂಧ ಸೂಚಕಗಳು ಕ್ರಮೇಣ ಮರೆಯಾಗಿ,' ಆರತಿಗೊಂದು+ ಕೀರುತಿ ಗೊಂದು ಎಂದಾಗಿ, ನಮಗೊಂದೇ ಮಗು ಸಾಕು - ದಲ್ಲಿ ಮುಕ್ತಾಯಗೊಂಡು, ಈಗ ಮಕ್ಕಳು ಬಿಡಿ- ಮದುವೆಯೇ ಬೇಡ ಎಂಬಲ್ಲಿಗೆ ಬಂದು ನಿಂತಿದೆ trend...
ಇದೂ ಒಂದು ಸಾಮಾಜಿಕ ಸ್ಥಿತ್ಯಂತರ...
ಪಕ್ಕದ ಮನೆಯಲ್ಲಿ ಯಾರಿದ್ದಾರೆ ಎಂಬುದು ತಿಳಿಯುವುದಿಲ್ಲ ಎಂಬುದೊಂದು ಮಾತಿತ್ತು...ಈಗ ಮನೆಯ ನಾಲ್ಕುಜನ ನಾಲ್ಕು ದಿಕ್ಕಿಗೆ
ಕಾರ್ಯ ನಿಮಿತ್ಯ ಹಂಚಿ ಹೋಗಿ ಅವರನ್ನೇ ಪರಿಚಯಿಸುವ ಮಟ್ಟಕ್ಕೆ  ಸ್ಥಿತಿ
ತಲುಪಿದೆ...ಮೊದಲು ಅವನ್ನೆಲ್ಲ ಬರೆದು
ದಾಖಲಿಸುತ್ತಿದ್ದೆ.ಈಗ mobile ಹಾವಳಿ ಬಂದಮೇಲೆ ಅದೂ ಅಪರೂಪವಾಗಿದೆ.
            ಆ ಕಾರಣಕ್ಕೆ ಕನಿಷ್ಠ ನಮ್ಮ ಕುಟುಂಬದ ಪರಿಚಯವಾದರೂ ನಮ್ಮ ಮಕ್ಕಳಿಗಾಗಲೀ ಎಂದು ಸಾಧ್ಯವಿದ್ದ ಎಲ್ಲ ಫೋಟೋಗಳ ಸಂಪುಟವೊಂದನ್ನು ಮಾಡಬೇಕೆಂದು ಪ್ರಯತ್ನಿಸುತ್ತಿದ್ದೇನೆ. photography /AIಯಲ್ಲಾದ  ಪ್ರಗತಿ ಯಿಂದ ಅಷ್ಟೇನೂ ಕಷ್ಟವಾಗಲಿಕ್ಕಿಲ್ಲ
ಎಂಬ ಅನಿಸಿಕೆ ನನ್ನದು...ಅದಕ್ಕಾಗಿ
ಸಂಗ್ರಹಿಸಿದ ನಮ್ಮ/ನಾವಿದ್ದ ಮನೆಗಳಿವು...
 

No comments:

Post a Comment

   ಅಜ್ಜ+ಅಜ್ಜಿ-ಅಪ್ಪ+ಅಮ್ಮ- ಅತ್ತೆ+ ಮಾವ-ಅಕ್ಕ+ಭಾವ-ಚಿಕ್ಕಮ್ಮ+ ಚಿಕ್ಕಪ್ಪ- ಅತ್ತಿಗೆ+ ನಾದಿನಿ- ಭಾವ+ ಮೈದುನ ಹೀಗೆ ಸಂಬಂಧ ಸೂಚಕಗಳು ಕ್ರಮೇಣ ಮರೆಯಾಗಿ,' ಆರತಿಗೊಂ...