ಜೀವೇತ್ ಶರದಃ ಶತಮ್...
ಅಮ್ಮ ಅಪ್ಪನಿಗೆ ನಾವು ಏಳು ಜನ ಮಕ್ಕಳು.( ಬದುಕು ಬೆಳಗುವ ಮುನ್ನವೇ ನಂದಿ ಹೋದ ಇಬ್ಬರು ಮೂವರ ಲೆಕ್ಕ ಬಿಟ್ಟು.) ನಮ್ಮೆಲ್ಲರ ಮಕ್ಕಳ ಸಂಖ್ಯೆ ಹತ್ತೊಂಬತ್ತು. ಹತ್ತು ಜನ ಹೆಣ್ಣು ಮಕ್ಕಳು, ಒಂಬತ್ತು ಗಂಡು. ಅವರ ನಂತರದ ಪೀಳಿಗೆಯ ಸಧ್ಯದ ಲೆಕ್ಕ, ಮೂವತ್ತರ ಸಮೀಪ. ಮನೆಯಲ್ಲಾದ ಮದುವೆ/ ಬಸಿರು/ ಬಯಕೆ /ತೊಟ್ಟಿಲು / ಜವಳ/ ಉಪನಯನ/ ಗೃಹ ಪ್ರವೇಶ ಅಂತ ಆದ ಚಿಕ್ಕ- ಪುಟ್ಟ ಕಾರ್ಯಕ್ರಮ ಗಳನ್ನು ಲೆಕ್ಕ ಹಾಕಲು ಚನ್ನಾಗಿ ಗಣಿತ ಬಲ್ಲವರೇ ಆಗಬೇಕು.ಆದರೂ ಅವು ಆಗಾಗ ನೆನಪಿನಂಗಳಕ್ಕೆ ನುಗ್ಗಿ, ನೆನಪಿನಾಳವ ಕೆದಕಿ ಅಲ್ಪಕಾಲವಾದರೂ
ಸರಿಯೇ ಖುಶಿಕೊಟ್ಟು
ಮರೆಯಾಗುವಂಥವು.
ಆದರೆ ಹಿರಿ ಕಿರಿಯರು /ಬಂಧು- ಬಳಗ/ ಶಿಷ್ಯ- ಸ್ನೇಹಿತ ವರ್ಗ ಎಂಬ ಭೇದವೇ ಇಲ್ಲದೇ ಪ್ರತಿಯೊಬ್ಬರೂ ತಮ್ಮದೇ ಎನ್ನುವಂತೆ ಸಂಭ್ರಮಿಸಿದ ಒಂದು ಕಾರ್ಯಕ್ರಮ ಎಂದರೆ ನಮ್ಮ ಎರಡನೇ ಅಣ್ಣನ ೮೦ ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಏನೂ ಮಾಡುವದು ಬೇಡವೇ ಬೇಡ-ಎನ್ನುವ ಅವನಿಂದ ಒತ್ತಾಯದ ಒಪ್ಪಿಗೆ ಪಡೆದು ಮೂರು ದಿನಗಳ ಒಂದು ಕಾರ್ಯಕ್ರಮವನ್ನು ಆಯೋಜಿಸಿ/ ಅಹುದಹುದೆನ್ನುವಂತೆ ನಡೆಸಿಕೊಟ್ಟು ಮಕ್ಕಳು/ ಮೊಮ್ಮಕ್ಕಳು ಗೆದ್ದದ್ದು ಎಲ್ಲರಿಗೂ ಒಂದು ಸಮಾಧಾನ/ ಸಂಭ್ರಮ/ ಸಡಗರ...
ಎಂಬತ್ತರಲ್ಲಿ ಅಖಂಡ ಅರವತ್ತು ವರ್ಷಗಳನ್ನು ಕಲಿಸುವದ ರಲ್ಲೇ ಕಳೆದು/ ಸ್ವಂತಕ್ಕಿಂತ ಇತರರ ಬಗ್ಗೆಯೇ ಹೆಚ್ಚು ಚಿಂತಿಸಿ/ ಸಂಪಾದಿಸಿದ್ದರ ಲ್ಲೂ ಸ್ವತಃ ಅನುಭವಿಸಿದ್ದ ಕ್ಕಿಂತಲೂ ಹೆಚ್ಚು ಭಾಗ ಇತರರಿಗೆಂದೇ ವ್ಯಯಿಸಿ 'ಬದುಕಿನಲ್ಲಿ ಕೊಂಡದ್ದ
ಕ್ಕಿಂತ ಕೊಟ್ಟಿದ್ದೇ ಹೆಚ್ಚಾಗ ಬೇಕೆಂಬುದನ್ನು' ಅಕ್ಷರಶಃ ಪಾಲಿಸಿದ ವ್ಯಕ್ತಿಗೆ ಧನ್ಯವಾದಗಳನ್ನು ಹೇಳಿ ಕಿಂಚಿತ್ತಾದರೂ 'ಋಣ ಸಂದಾಯ' ಮಾಡಲೇ ಬೇಕು ಎಂದು ಮನಸಾ ಕಾಯುತ್ತಿದ್ದವರಿಗೊಂದು ಅಪರೂಪದ ಅವಕಾಶ...
ಮೊದಲ ದಿನ-
*A small family get together at home.
*ಮರುದಿನ Pearl Ocean Resort ನಲ್ಲಿ ಅಭಿನಂದನಾ ಗ್ರಂಥ
" ಜೀವೇತ್ ಶರದಃ ಶತಮ್"- ಪುಸ್ತಕದ ಬಿಡುಗಡೆ ಹಾಗೂ
ಆಹ್ವಾನಿತರಿಗಾಗಿ ವಿಶೇಷ ಕಾರ್ಯಕ್ರಮ.
*ಮೂರನೇ ದಿನ ಕುಲದೇವರಾದ ಆಂಜನೇಯನಿಗೆ / ಸತ್ಯ ನಾರಾಯಣನಿಗೆ ವಿಶೇಷ ಪೂಜೆ...
ಹೀಗೆ ಮೂರು ಹಂತಗಳ ಕಾರ್ಯಕ್ರಮ
ಗಳು ಮನೆಮಂದಿಗೆಲ್ಲ ಮುಂದೆ ಒಂದು ವರ್ಷ ಕಾಲ ನೆನಪಿನ ಬುತ್ತಿಯಂತೆ ಕೆಲಸ ಮಾಡುವದರಲ್ಲಿ ಸಂಶಯವಿಲ್ಲ.
ಇದೇ ವೇಳೆಗೆ ಪಲ್ಲಣ್ಣನ ದೀರ್ಘಕಾಲದ
ಸಾಧನೆಯ ಹಾದಿಯ ಬಗ್ಗೆ ಒಂದು ಕಿರು ಚಿತ್ರ/ ಬಂಧು- ಬಳಗ/ ಸ್ನೇಹಿತ- ಹಿತೈಷಿ ವರ್ಗದವರ ಅನಿಸಿಕೆಗಳನ್ನು ಬರಹಗಳ ರೂಪದಲ್ಲಿ ದಾಖಲಿಸಿದ ಪುಸ್ತಕದ ಬಿಡುಗಡೆ/ ಕೊನೆಗೊಂದು ಭೋಜನ ಕೂಟ - ಇವು ಕಾರ್ಯಕ್ರಮದ high lights ಗಳು...
ಎಂಬಂತ್ತೊಂದರ ವಯಸ್ಸಿನಲ್ಲೂ ಅವನ ಉತ್ಸಾಹ ಕಿಂಚಿತ್ತೂ ಬತ್ತಿಲ್ಲ. ಕನಸುಗಳು ಎಳ್ಳಷ್ಟೂ ಮಸುಕಾಗಿಲ್ಲ. ಒಂದರ ಹಿಂದೆಒಂದರಂತೆ ಬಂದ ಕಷ್ಟಗಳ ಲೆಕ್ಕವನ್ನು ಅವನೆಂದೂ ಇಟ್ಟಿಲ್ಲ, ಇಡುವದೂ ಇಲ್ಲ... ಆದರೂ 'ಮಾಡಬೇಕಾದು ದು ಇನ್ನೂ ತುಂಬಾನೇಯಿ ದೆ 'ಎನ್ನುವಭಾವವೊಂದು ಸದಾಕಾಲ ಕಾಡುತ್ತಲೇ
ಇರುವದು ಮಾತ್ರ ಸತ್ಯ.
ಅವನವು ಎನ್ನುವ ಎಲ್ಲ ಕನಸುಗಳು ನನಸಾಗಬೇಕು -
*ಅವನಿಗಾಗಿ,
*ಅವನನ್ನು ನಂಬಿದ ವಿದ್ಯಾರ್ಥಿಗಳಿಗಾಗಿ,
*ಬದುಕಿಗೆ ಅವನನ್ನೇ ಅವಲಂಬಿಸಿದ ಸಂಸಾರಗಳಿಗಾಗಿ,
ಇದು ನಮ್ಮೆಲ್ಲರ ಮನದ ಹರಕೆ, ಹಾರೈಕೆ. ಇದಕ್ಕಾಗಿ ಅವನು ನೂರು ವರ್ಷಗಳ ಕಾಲ ಬದುಕಿ ಬಾಳಬೇಕು.
"ಜೀವೇತ್ ಶರದಃ ಶತಮ್."
No comments:
Post a Comment