Thursday, 10 September 2026

ನಮ್ಮ ಸುತ್ತಲೂ ಸದಾ ಜನ ಇದ್ದೇ ಇರುತ್ತದೆ.ಮನೆಯಲ್ಲಿ ಮನೆ ಸದಸ್ಯರು/ ಹೊರಗೆ ಬಸ್ಸು/ ಗಾಡಿಗಳಲ್ಲಿ ಪ್ರಯಾಣಿಕರು/ ಆಫೀಸುಗಳಲ್ಲಿ ಸಹೋದ್ಯೋಗಿಗಳು/ಪೇಟೆ- ಬಜಾರು ಗಳಲ್ಲಿ ಗ್ರಾಹಕರು/ ಫೋನುಗಳಲ್ಲಿ/ ಸಾಮಾಜಿಕ ಮಾಧ್ಯಮಗಳಲ್ಲಿ
ನೂರಾರು ಸ್ನೇಹಿತರು ಹೀಗೇ...ಆದರೂ ನಮಗೆ ನಾವೇ ಏಕಾಕಿಗಳು ಎಂಬ ಭಾವ ಬರುತ್ತದೆ/ನಿಜವಾದ ನಮ್ಮವರಾರೆಂದು
ದಿಗಿಲಾಗುತ್ತದೆ.ಗುಂಪಿನಲ್ಲೂ ಒಬ್ಬಂಟಿಗರು ಎನಿಸುವದು-ಇದೆಯಲ್ಲ,
ಅದೇ  ಮೊದಲ ಹಂತ...ಗುಂಪು ,ಗುಂಪು ಮಾತ್ರ.ಅದರಲ್ಲಿ ನಾವೂ ಒಬ್ಬರು.ಅದೇ ನಮ್ಮದಲ್ಲ.ಆದರೆ ನಮ್ಮದೇ ಜನರ ಮಧ್ಯದಲ್ಲೂ ನಾವು ಒಬ್ಬಂಟಿಗರು ಎಂಬ ಭಾವವೇ ಅದರ ಎರಡನೇ ಹಂತ... ಸುತ್ತಲೂ ಎಲ್ಲವೂ ಇದೆ,ಅದು ನನ್ನದಲ್ಲ/ಎಲ್ಲರೂ ಇದ್ದಾರೆ, ನಮ್ಮ ಒಂಟಿತನ ಅವರದಲ್ಲ-ಉಂಡೆಯಾ?ಎಲ್ಲಿದ್ದೀಯಾ- ಇಂಥ ಮಾತುಗಳು ಬರಿ ಮಾತುಗಳು...
ಅವುಗಳಿಗೆ ಉತ್ತರ ಮಾತ್ರ ಉಂಟು- ಸಂಬಂಧದ ನಂಟು ಬೇಕಿಲ್ಲ. ಯಾರೆದುರು ನಾನು ಆರಾಮಿದ್ದೇನೆ ಎಂಬುದರ ನಾಟಕ ಬೇಕಿಲ್ಲವೋ/ಮಾತನಾಡಬೇಕೆಂದಾಗ  ಶಬ್ದಗಳಿಗೆ
ತಡಕಾಡುವ ಜರೂರತ್ ಬೀಳುವದಿಲ್ಲ ವೋ ಅದು ನಿಜವಾದ ನಂಟು.
ಅಂಥವರು ಒಬ್ಬರಿರುವುದು ಬದುಕಿನ‌ ಸೌಭಾಗ್ಯ...ಇಲ್ಲವೇ ನಾವೇ ಅವರಾಗಬಹುದು...ಯಾರೊಬ್ಬರ ಮೌನವನ್ನು ತಿಳಿಯುವುದು/ ಅವರ ಹೆಗಲ ಮೇಲೆ ಕೈಯಿಟ್ಟು  ಬಲ ಕೊಡು ವುದು,ಎರಡು ನಿಮಿಷ ಪಕ್ಕಕ್ಕೆ ಕುಳಿತು ನಾಲ್ಕು ಮಾತನಾಡುವುದು - ಇದೂ ಕೂಡ ಅವರದಲ್ಲದೇ ನಿಮ್ಮ ಏಕಾಕಿ ತನದ  ಮೇಲೆ ನೆಮ್ಮದಿಯ ಸಹಿ ಹಾಕೀತು..

No comments:

Post a Comment

ನಮ್ಮ ಸುತ್ತಲೂ ಸದಾ ಜನ ಇದ್ದೇ ಇರುತ್ತದೆ.ಮನೆಯಲ್ಲಿ ಮನೆ ಸದಸ್ಯರು/ ಹೊರಗೆ ಬಸ್ಸು/ ಗಾಡಿಗಳಲ್ಲಿ ಪ್ರಯಾಣಿಕರು/ ಆಫೀಸುಗಳಲ್ಲಿ ಸಹೋದ್ಯೋಗಿಗಳು/ಪೇಟೆ- ಬಜಾರು ಗಳಲ್ಲಿ ಗ್ರ...