ಒಮ್ಮೆ ಹೃದಯಾಘಾತವಾದಾಗ
ನೀವು ನನಗೆ ಹೇಳಿದ್ದಿರಿ.ನಾನು ಅದಕ್ಕೆ ಎದುರಾಡಲಿಲ್ಲ.ಮೂರು ಚಿಕ್ಕ ಮಕ್ಕಳನ್ನು
ನಿಮ್ಮ ಮೇಲೆ/ವಯಸ್ಸಾದ ಅವ್ವ- ಅಪ್ಪನ ಮೇಲೆ ಬಿಟ್ಟು ಒಂದು ವರ್ಷ ಕುಮಠಾ ದಲ್ಲಿ BEd ಮುಗಿಸಿಕೊಂಡು ಬಂದೆ.
ದೇವರು ನಮ್ಮಜೊತೆ ಇದ್ದ.ನೌಕರಿ ಸಿಕ್ಕಿತು.ಎರಡು ವರ್ಷಗಳ ಕಾಲ ನಮ್ಮೊಂದಿಗಿದ್ದು ನಿರ್ಗಮಿಸಿದಿರಿ...
ಸ್ವಭಾವದಲ್ಲಿ ನಾನು ನಿಮ್ಮಂತೆ ಗಟ್ಟಿಯಲ್ಲ.ಭಾವುಕಳು.ಆಮೂಲಾಗ್ರ
ಅಲುಗಾಡಿದೆ..ಆದರೆ ನನ್ನೊಳಗಿದ್ದ ನೀವು
ಬಲದುಂಬುತ್ತಲೇ ಇದ್ದಿರಿ.ಅವಶ್ಯವಿದ್ದಾಗ ಅಣ್ಣ- ತಮ್ಮ/ಅಕ್ಕ ತಂಗಿಯರು/ಸ್ನೇಹಿತರ ಬೆಂಬಲದಿಂದ ಮಕ್ಕಳನ್ನು ದಡಸೇರಿಸಿದ
ಹೆಮ್ಮೆ ಇದೆ.ಎಲ್ಲರೂ ತಮ್ಮ ಬದುಕಿನಲ್ಲಿ
ತಾವೇ ಆರಿಸಿದ ಮಾರ್ಗದಲ್ಲಿ ನಡೆದು ಗುರಿ ಸಾಧಿಸಿದ್ದಾರೆ...ಅದು ನಿಮ್ಮ ಒಲುಮೆಯ/ಬಲುಮೆಯ ಫಲ...
ನಲವತ್ಮೂರು(43)ವರ್ಷಗಳು ಕಡಿಮೆ ಅವಧಿಯಲ್ಲ...ಆದರೂ ಕಳೆದಿದ್ದೇವೆ...
No comments:
Post a Comment