ಮೊಮ್ಮಕ್ಕಳು ಕಾಲೇಜಿಗೆ ಬರುವ
ಮೊದಲು ಎಲ್ಲರೂ ಒಬ್ಬರಿಗೊಬ್ಬರು ಸಮೀಪದಲ್ಲಿದ್ದು ಬೇಕೆಂದಾಗ ಬೇಕಾದವರನ್ನು ಭೇಟಿಯಾಗುವದು/ ಮನೆಗೆ ಹೋಗುವದು ಸಾಧ್ಯತೆ ಇತ್ತು. ಈಗ ಕಲಿಕೆ/ನೌಕರಿ ಎಂದು ಮೂರು-ಜನ
ಹೊರದೇಶಗಳಿಗೆ ಹೋಗಿ/ಇದ್ದ ಮೂವರು ಕಾಲೇಜುಗಳಲ್ಲಿ,ಸ್ಪರ್ಧಾತ್ಮಕ
ಪರೀಕ್ಷೆಗಳಲ್ಲಿ/foot ball tournament match ಗಳಲ್ಲಿ busy ಇದ್ದು ಕಳೆದು ಹೋಗಿದ್ದರು.ನಾವೂ ಅಸಹಾಯಕರಾಗಿ
ಅವರಷ್ಟಕ್ಕೆ ಅವರನ್ನು ಇರಗೊಟ್ಟು ಆಗಾಗ ಗೊಣಗುತ್ತ ಕೆಲ ವರ್ಷಗಳನ್ನು
ಕಳೆದಾಯಿತು...
ಇದೀಗ ಸ್ವಲ್ಪಮಟ್ಟಿಗೆ ಬದಲಾವಣೆಯ ಗಾಳಿ ಬೀಸಿದೆ.ಒಬ್ಬ IIT Madras ನಲ್ಲಿ MTech ಮುಗಿಸಿ BCG
ಗೆ join ಆಗಲಿದ್ದಾನೆ.ಇನ್ನೊಬ್ಬ IISC ಯಲ್ಲಿ Internship ಗೆ ಸೇರಿದ್ದಾನೆ... ಕೊನೆಯ ಮೊಮ್ಮಗ IIT ಗೆ ಈ ವರ್ಷ select ಆಗಿದ್ದು ವಿಷಯ/ಕಾಲೇಜು
ಮುಂತಾಗಿ ತಲೆಕೆಡಿಸಿಕೊಳ್ಳುತ್ತಿದ್ದಾನೆ.
ಇನ್ನೆರಡು ತಿಂಗಳಿಗೆ ಎಲ್ಲ decide ಆಗುವ ಲಕ್ಷಣಗಳಿದ್ದು ಅವನೂ ತನ್ನ suitcase ರೆಡಿ ಮಾಡಿಕೊಳ್ಳುತ್ತಿದ್ದಾನೆ.
ಹೀಗಾಗಿ ಸಧ್ಯ ಎರಡು ತಿಂಗಳ ಮಟ್ಟಿಗೆ
ಮನೆ ತುಂಬಿದೆ.ಎಲ್ಲಿಗೇ ಹೋದರೂ ಮನೆಗೆ ಹಿಂದಿರುಗುವುದನ್ನು ತಪ್ಪದೇ ಕಾಯುತ್ತೇವೆ.ಮಾತುಗಳಾಗುತ್ತವೆ/ ಆಯ್ಕೆಯ ಅಡುಗೆಯ ಪ್ರಯೋಗಗ ಳಾಗುತ್ತವೆ...ಪಡಸಾಲೆಯಲ್ಲಿ ಎಲ್ಲರೂ
ನೆರೆದು ಅರ್ಧ ಗಂಟೆಯಾದರೂ ತಲೆ- ಬುಡವಿಲ್ಲದ ಸುಂದರ,ಚಟಪಟಿ ಹರಟೆಗಳಾಗುತ್ತವೆ...ಸಂಯೋಗದಿಂದ
ಅಮೇರಿಕಾದಿಂದ ಬಂದ ಮಗನದೂ
ಅಷ್ಟಿಷ್ಟು ಸಾಥ್ ಸಿಗುತ್ತದೆ...
ಇದು ಬಹಳವೆಂದರೆ ಎರಡು ತಿಂಗಳು ಅಷ್ಟೇ...ನಂತರ ಮತ್ತೆ Race/ ಭಾಗದೌಡ್/traffic ರಗಳೆ/ತೀರದ
ಪರೀಕ್ಷೆಗಳು/ಫಲಿತಾಂಶಗಳು/ನೌಕರಿ ಬೇಟೆ/ಭೇಟಿಯಾದವರಿಗೆ ಕೊಡಲು
ವೇಳೆಯ ಕೊರತೆ/ಬಾರದವರನ್ನು ನೆನೆಯುತ್ತ ನಾವು ಇಲ್ಲಿ...ಅವರೆಲ್ಲ ಇದ್ದಲ್ಲಿ...ಮತ್ತದೇ ಹಳೆಯ ಹಾಡಲಾರದ/ಹಾಡಲಾಗದ ಟೇಪ್ ಗಳು...
No comments:
Post a Comment