ಒಂದು ಕೋಣೆಯ ಪುಟ್ಟ ಮನೆಯ ಹಿಂದೆ ಇದ್ದ ಒಂದಂಕಣದ ಹಿತ್ತಲಲ್ಲಿಯೇ
ಅವಳ ಬಿಡುವಿನ ಸಮಯದಲ್ಲಿ ಇರುತ್ತಿದ್ದಳು...ತನ್ನ ಕೈಮೀರಿ ಕೆಲಸ ಮಾಡುತ್ತ ಸಾಧ್ಯವಾದಷ್ಟೂ ಹಸಿರುಮಯವಾಗಿರುವಂತೆ ನೋಡಿಕೊಳ್ಳುತ್ತಿದ್ದಳು.ಅದು ನಮ್ಮ ವಾಹಿನಿಯಲ್ಲೂ ಹರಿದಿದೆ... ಕೌಲಗಿ ಯವರ ಮನೆಗೆ ಸೊಸೆಯಾಗಿ ಬಂದಮೇಲೂ ನಮ್ಮ kitchen garden
ಭರ್ಜರಿಯಾಗೇ ಇತ್ತು.ಮಗಳ ಮನೆಗೆ/
ಬೆಂಗಳೂರಿಗೆ ಬಂದ ಮೇಲಂತೂ ಎಲ್ಲ
ಸ್ವತಂತ್ರ ಮನೆಗಳಲ್ಲಿ ಹಿತ್ತಲು/ಮುಂದೆ
ಎಲ್ಲೆಡೆ ಆದಷ್ಟೂ ಹಸಿರುಮಯವಾಗೇ
ಇರುತ್ತಿತ್ತು...
ನನ್ನ ಮೊದಲ ಮಗಳಿಗೆ ಊಟ
ಇಲ್ಲದಿದ್ದರೆ ನಡೆಯುತ್ತದೆ.ಹೂ ಇಲ್ಲದೇ
ಆಗುವುದಿಲ್ಲ.ಸಧ್ಯದ ಮೈಸೂರು ಮನೆಯಲ್ಲಿ ಅವಳು ಮನೆಯೊಳಗಿರು ವುದು ಕಡಿಮೆಯೇ!!!ಸದಾ ಹೊರಗೆ
Garden ನಲ್ಲಿಯೇ ವಾಸ...
ಅಳಿಯ bank service ನಿಂದ ನಿವೃತ್ತಿ ಹೊಂದಿದ ತಿಂಗಳಲ್ಲೇ ಮೂರು ಎಕರೆ ಮಾವಿನ ತೋಟ ಖರೀದಿಸಿಯಾಗಿತ್ತು.ಈಗ ಅಲ್ಲಿಯದೇ ಅವರ ಮೊದಲ ಮನೆ...ಅವಳ ಮದುವೆಯ ವೇಳೆ ನಾನು ನಮ್ಮ ಭತ್ತದ ಗದ್ದೆ ಮಾರಿದ್ದೆ...ಹೊಲ ಮಾರಿದ ಕೆಲಸಕ್ಕೆ
ಪ್ರಾಯಶ್ಚಿತ್ತವಾಗಿದೆ...
ಈಗ ಅವರ ಇಬ್ಬರೂ ಮಕ್ಕಳೂ
ದೊಡ್ಡವರಾಗಿದ್ದಾರೆ...ಇದು ಮೂರನೇ ಮಗು...ಚನ್ನಾಗಿ ಸಾಕಲಿ-ಮಗು ಚನ್ನಾಗಿ
ಬೆಳೆಯಲಿ...ಎಲ್ಲರನ್ನೂ ಖುಶಿಪಡಿಸಲಿ...
ಅದನ್ನು ನೋಡಲೆಂದೇ ನಾಲ್ಕು ದಿನ ಮೈಸೂರಿಗೆ ಬಂದಿದ್ದೆ...
ನೋಡಿದೆ...ಖುಶಿಗೊಂಡೆ...ಗೆದ್ದೆ...
No comments:
Post a Comment