* ನಾ ಸಾಮಾನು ಬರೀಲಿಕ್ಕೆ ಹತ್ತೇನಿ,
ನಿನಗೂ ಏನರ ಬೇಕಿತ್ತೇನು?
* ಅಜ್ಜಿ ಸಂಜೀಕೆ ಏನೂ ಮಾಡಬ್ಯಾಡ-
ನಾ ಏನರ ಮಾಡ್ತೇನಿ...
*ನನ್ನ ತಲಿಗೆ ಎಣ್ಣೆ ಮಸಾಜು ಮಾಡಜ್ಜಿ...
*ನಾನು foot ball match ಗೆ ಹೋಗ್ತೇನಿ...ತಡಾ ಆಗಬಹುದು...
ಇವು ನನ್ನ/ನನ್ನ ಕೊನೆಯ ಮೊಮ್ಮಗನ ದಿನಚರಿಯ ಅವಿಭಾಜ್ಯ ಅಂಗ.ಅಮ್ಮ/ಅಪ್ಪ officeನಲ್ಲಿ...ಅಣ್ಣ
ಮದ್ರಾಸ್ನಲ್ಲಿ...ತಾನೆಲ್ಲಾದರೂ ಹೋದರೆ/
ನಾನು ಒಬ್ಬಳೇ ಮನೆಯಲ್ಲಿದ್ದರೆ ನನ್ನನ್ನು
ನೋಡಿಕೊಳ್ಳುವ ಪರಿ...ನನಗದು ಸಧ್ಯಕ್ಕೆ
ಅಷ್ಟಾಗಿ ಅವಶ್ಯಕತೆ ಇರದಿದ್ದರೂ ಅವನ
ಆ ಸ್ಪಂದನೆ ನನಲ್ಲಿ ತುಂಬುವ ಬಲ ಎಷ್ಟೆಂದು ಹೇಳಲಿ!?ಅದು ಕೊಡುವ ಸಮಾಧಾನವನ್ನು ಹೇಗೆ ತೂಗಲಿ!?
ನನಗೆ ಒಬ್ಬಳೇ ಇರುವ ರೂಢಿ
ಇದೆ...ಅತಿ ಆಗದಿದ್ದರೆ ಯಾರೂ ಬೇಕೆಂದೂ ಇಲ್ಲ.ಆದರೆ ಇತ್ತೀಚಿಗೆ ಈ ಮೊಮ್ಮಕ್ಕಳು ಅದು ಹೇಗೋ ಒಂದು
ವೃತ್ತ ಎಳೆದು ಬಿಟ್ಟಿವೆ- ಹಿತವಾದ ಬಂಧನದ್ದು...ಸದಾ ಬೇಕೆನಿಸುವಂಥದ್ದು.-
No comments:
Post a Comment