Tuesday, 4 August 2026

ಹೊಸ ಪಥ ಸಂಚಲನ...

           ನನ್ನದೀಗ ಬದುಕಿನಲ್ಲಿಯ ಮೂರನೇ ಅಧ್ಯಾಯ...ಮಗಳಾಗಿ/ ಅಮ್ಮನಾಗಿ ಮುಗಿದ ಮೇಲೆ ಇದೀಗ
ಅಜ್ಜಿಯಾಗಿ ನಡೆಯುತ್ತಿದ್ದೇನೆ.ಹಟ ಮಾಡಿ ಕೆಲಸ ಮಾಡುವುದಿಲ್ಲ- ಮೊಮ್ಮಕ್ಕ ಳಿಗೆ ಅನವಶ್ಯಕ ಸಲಹೆಗಳಿಲ್ಲ.ಬೇಕಾದಾಗ ನನ್ನಿಂದಾಗುವ ಒಂದಿಷ್ಟು ಕೆಲಸಗಳನ್ನು
ಮಾಡುತ್ತ ವೇಳೆ ಕಳೆಯುತ್ತೇನೆ.ಆಗುವಲ್ಲಿ
ಮಾತ್ರ ಇತರರೊಂದಿಗೆ ಹೊರಹೋಗು ತ್ತೇನೆ /ಅವಶ್ಯಕತೆಯಿದ್ದಲ್ಲಿ ಹಿಂಬಾಲಿಸು ತ್ತೇನೆ...ಸಂಕ್ಷಿಪ್ತವಾಗಿ ನನಗೂ/ನನ್ನ ಜೊತೆ ಗಿದ್ದವರಿಗೂ ವಿನಾಕಾರಣ ಅನಾನುಕೂಲ ವಾಗುವುದನ್ನು ತಪ್ಪಿಸಲು ನೋಡುತ್ತೇನೆ.

  ‌‌‌‌          ಉಳಿದಂತೆ ದಿನಕ್ಕೊಂದು ಪುಟ್ಟ
Post ಹಾಕುತ್ತೇನೆ-ವಿಷಯದ ಬಗ್ಗೆ ಹೆಚ್ಚು ವಿಚಾರ ಮಾಡುವುದಿಲ್ಲ..ದಿನದ ಘಟನೆ ಗಳನ್ನೇ ದಿನಚರಿಯ ಭಾಗದಂತೆ ಕಾಣಿಸು ತ್ತೇನೆ...ಮುಖ್ಯ ಕಾರಣ ವೇಳೆಯ
ಸದುಪಯೋಗ/ಬರೆಯುವುದರ ರೂಢಿ/
ತಲೆ+ ಕೈಗಳಿಗೆ ಚಟುವಟಿಕೆ...ಅಲ್ಜೈಮರ್
/ಡಿಮೆನ್ಶಿಯಾದಂಥ ಹಿರಿಯ ನಾಗರಿಕರ
ಸಮಸ್ಯೆಗಳನ್ನು ಕೈಲಾದಷ್ಟು ದೂರವಿರಿಸ ಲು ಸಣ್ಣದೊಂದು ಯುಕ್ತಿ- ಅಷ್ಟೇ...ಥಂಡಿ
ಯ ಕಾರಣದಿಂದ ಹೆಚ್ಚು walking ಮಾಡುವುದಿಲ್ಲ...ಕಾಲುಗಳಿಗೆ ತಡೆಯು ವಷ್ಟು ಒಂದೆರಡು ಸುತ್ತು.. ದೂರದರ್ಶನ ಯಾವಾಗಲೋ ದೂರವಾಗಿದೆ...ಆಗಾಗ
ಒಂದಿಷ್ಟು U-tube ನ ಬಳಕೆ...ಆಗಾಗ
ಒಂದೋ- ಎರಡೋ ಫೋನಗಳು- 

ಅಷ್ಟೇ...

          

         ‌ ‌





No comments:

Post a Comment

ಹೊಸ ಪಥ ಸಂಚಲನ...            ನನ್ನದೀಗ ಬದುಕಿನಲ್ಲಿಯ ಮೂರನೇ ಅಧ್ಯಾಯ...ಮಗಳಾಗಿ/ ಅಮ್ಮನಾಗಿ ಮುಗಿದ ಮೇಲೆ ಇದೀಗ ಅಜ್ಜಿಯಾಗಿ ನಡೆಯುತ್ತಿದ್ದೇನೆ.ಹಟ ಮಾಡಿ ಕೆಲಸ ಮಾಡುವು...