ಒಂದು ಗಳಿಗೆ ಯೋಚಿಸಿದರೆ...
ಬದುಕು ನಮಗಾಗಿ ಏನೋ ಸದಾ ಸಿದ್ಧತೆ ನಡೆಸುತ್ತಿರುತ್ತದೆ ಎಂಬ ಭಾವ ಬರುತ್ತದೆ.ನಮ್ಮ ಹೋರಾಟ/ದುಃಖ/ತಯಾರಿ/ಆರ್ಥಿಕ ಸಂಕಷ್ಟ/ಬೇನೆಗಳು-ಏನೆಲ್ಲವೂ- ಇವೆಲ್ಲ ನಮಗೇ ಏಕೆ?ಎಂಬುದೂ ನಮ್ಮ ಪ್ರಶ್ನೆಯಾಗಿರುತ್ತದೆ. ನಿಜವಾಗಿ ಬದುಕು ನಮ್ಮನ್ನು ಕೆಲವೊಂದು ವಿಷಯಗಳಿಗೆ ತರಬೇತಿ ಕೊಡುತ್ತದೆಯಾ ಅಂತಲೂ ಅನಿಸದಿರದು.ಒಮ್ಮೆಲೇ ಏನಾದರೂ ಸಿಕ್ಕರೆ ಅದನ್ನು ಸಂಭಾಳಿಸಲಾಗುವುದಿಲ್ಲ. ತಡವಾಗಿ ಸಿಕ್ಕರೆ - ಮತ್ತೆ ಕಳೆದುಕೊಂಡು- ಬಿಟ್ಟರೆ ಎಂಬ ಭಾವದ ಭಯ...
ಸಧ್ಯದ ಬದುಕಿನಲ್ಲಿ ಎಲ್ಲವೂ ಧಿಡೀರ್...Instant- ಆಗಿ ಸಿಗುತ್ತದೆ...
ಹೆಸರು/ ಹಣ/ ಕೀರ್ತಿ/ ಅಧಿಕಾರ- ಅಷ್ಟೇ ಏಕೆ- ಸಾವು ಕೂಡ. ಯಾವುದೂ ಆಕಸ್ಮಿಕವಲ್ಲ, ಅದು ಕೇವಲ'ಸಮಯ'-
ಸಮಯ ಅನುಕೂಲವಾಗಿ ಬರದಿದ್ದರೆ ನಮ್ಮ ತಯಾರಿ ಎಷ್ಟೇ ಇದ್ದರೂ ಅವಕಾಶದ ಬಾಗಿಲು ತೆರೆಯಲಾರದು.
ಆ ಸಮಯದಲ್ಲಿ ಬದುಕು ನಮ್ಮನ್ನು
ಗಟ್ಟಿಯಾಗಿ/ ಒಂಟಿಯಾಗಿ/ ಸಬಲರಾಗಿ/ ಬಂದದ್ದನ್ನು ಎದುರಿಸುವುದನ್ನು ಸದಾ
ಕಲಿಸುತ್ತಿರುತ್ತದೆ.ಅಲ್ಲಿಯವರೆಗೆ ಹಣ/ ಗೆಳೆತನ/ ಸಹಾಯ/ ಅವಕಾಶ/ಬುದ್ಧಿ
ಯಾವುದರ ಬಲವೂ ಸಿಗದಂತೆ
ಮಾಡಿ ಪರೀಕ್ಷಿಸುತ್ತದೆ.ಅದೇ ಕಾರಣಕ್ಕೆ ಒಮ್ಮೊಮ್ಮೆ ಎಲ್ಲವೂ ಇದ್ದೂ ಏನೂ ಇಲ್ಲದಂತೆಯೂ/ ಏನೂ ಇಲ್ಲದೆಯೂ ಎಲ್ಲ ದಕ್ಕಿದಂತೆಯೂ ನಾವು ಭ್ರಮೆಯಲ್ಲಿ ನಡೆದುಕೊಳ್ಳುತ್ತೇವೆ.ಆಗ ನಮಗೆ
ಸಹನೆ/ವಿವೇಕ/ಶಕ್ತಿ ಇವೆಲ್ಲವುಗಳ
ಕೊರತೆ ಬಾಧಿಸುತ್ತದೆ.ಅದರಿಂದಲೇ ಸಂಬಂಧಗಳು ತಾಳುವುದಿಲ್ಲ.ಸಂಬಂಧಕ್ಕೆ ಬೇಕಾದ್ದು ಆ ಸಮಯ ಇರುವುದೂ ಇಲ್ಲ.
ಆದ್ದರಿಂದಲೇ ಬದುಕು ನಮ್ಮನ್ನು
ಕಾಯಿಸುತ್ತದೆ...ಕಾಯುವುದು ಕೆಟ್ಟದಲ್ಲ- ಬದುಕಿಗೆ ಅಣಿಯಾಗುವ ತಯಾರಿ+ ಸಿದ್ಧತೆ...
No comments:
Post a Comment