Sunday, 23 August 2026

  ಇರುವುದೆಲ್ಲವ ಬಿಟ್ಟು...
   
      ಹತ್ತು- ಹನ್ನೆರಡು ಮಕ್ಕಳೊಡನೆ ಬೆಳೆದು/ಹಿಂದಿನ ದಿನದ ಅನ್ನದ ಚಿತ್ರಾನ್ನ+ ಮೊಸರನ್ನದ ಕೈತುತ್ತು ತಿಂದು/ ಊರ ಬಯಲಲ್ಲಿ ಆಡಿ /ಮನೆಗಿದ್ದ ಒಂದೇ ಒಂದು ಪಡಸಾಲೆಯಲ್ಲಿ ಅಜ್ಜಿಯ ಜೊತೆಗೆ ಹರಿಹಾಸಿಗೆ'(ಒಂದೇ)ಯಲ್ಲಿ
'ಮಲಗೆದ್ದು ಕಳೆದ ದಿನಗಳದು ತುಂಬಾ ನೆನಪಾಗುತ್ತಿದೆ...ಕನಸನ್ನೂ ಕಾಣಲಾಗದ
ಕಣ್ಣುಗಳಿಗೆ ಯಾವ ದೂರದೃಷ್ಟಿಯದೂ
ಹದ್ದು ಇರಲಿಲ್ಲ...' ನಿನ್ನೆ ಕಳೆಯಿತು- ನಾಳೆ
ಇನ್ನೂ ಹುಟ್ಟಿಲ್ಲ'-ಎಂಬಂತೆ ನಿರಾಳತೆಯ ಲ್ಲಿ ಅಂದಿಗಂದಿಗೆ ಬದುಕಿ ಬಂದ ನಮ್ಮ ತಲೆಮಾರಿನ ಮಹತಿ ಇಂದು ತಿಳಿಯುತ್ತಿದೆ
     ‌‌‌‌           ಇಂದು ನನಗೊಬ್ಬಳಿಗೇನೇ
ಒಂದು ರೂಮು/ಒಂದು ಮಂಚ/ಒಂದು bathroom...ಬಾಗಿಲು ಬಡಿದೇ ಒಳಗೆ
ಬರಬೇಕು ಯಾರಾದರೂ...ಏನು/ಏಕೆ/
ಯಾವಾಗ/ಹೇಗೆ ಏನಾದರೂ ಮಾಡುತ್ತೇನೆ- ಯಾರೂ ಪ್ರಶ್ನಿಸುವುದಿಲ್ಲ.
ಮನಸ್ಸಿದ್ದರೆ ಯಾರೊಂದಿಗಾದರೂ ಮಾತು ಇಲ್ಲವೇ- ಅದೂ ನಡೆದೀತು..
              ಒಬ್ಬೊಬ್ಬರದು ಒಂದೊಂದು
ಪ್ರಪಂಚ- ಎಲ್ಲರಿಗೂ ಅವರದೇ ಮರ್ಜಿ..
ಎಲ್ಲರೂ ಒಂದೆಡೆ ಸೇರಿ ಒಂದು ಗಂಟೆ
ಕಳೆದರೆ ಅದೇ ವಿಶೇಷ- ಎನ್ನುವ ಹಂತ ತಲುಪಿದ್ದೂ ಎಲ್ಲೆಡೆ ಧಾವಂತ- ಗಡಿಬಿಡಿ
-ಟೆನ್ಶನ್!!! ಏಕೆ?? ಬದುಕೆಂಬುದೇ ಹೀಗೇನೋ!!!

ಗೊತ್ತಿಲ್ಲ...

No comments:

Post a Comment

  ಇರುವುದೆಲ್ಲವ ಬಿಟ್ಟು...           ಹತ್ತು- ಹನ್ನೆರಡು ಮಕ್ಕಳೊಡನೆ ಬೆಳೆದು/ ಹಿಂದಿನ ದಿನದ ಅನ್ನದ ಚಿತ್ರಾನ್ನ+ ಮೊಸರನ್ನದ  ಕೈತುತ್ತು ತಿಂದು/ ಊರ ಬಯಲಲ್ಲಿ ಆಡಿ / ...