Sunday, 30 August 2026

       ಕೆಲವರು ನಮ್ಮ ಜಗತ್ತಿನಿಂದ ದೂರ ಹೊರಟುಹೋಗುತ್ತಾರೆ- ಮತ್ತೆಂದೂ ಬರದಂತೆ...ಅವರು ಜೊತೆಗೆ ಇರುವುದಿಲ್ಲ - ಅವರ ದನಿ ಕೇಳುವುದಿಲ್ಲ- ಆದರೆ ಅವರ ನೆನಪು!!!?? ಹೃದಯದಾವುದೋ ಮೂಲೆಯಲ್ಲಿ ತಮ್ಮನ್ನೇ ಸ್ಥಾಪಿಸಿಕೊಂಡು, ನಮ್ಮ ಬದುಕು ನಮ್ಮನ್ನು ಕಾಡಿದಾಗ ಎಲ್ಲಿಂದಲೋ ದಾಳಿ ಇಡುತ್ತವೆ.ರಾತ್ರಿ ಯಲ್ಲಿ ಇಡೀ ಜಗವೇ ಗಾಢವಾಗಿ ಮಲಗಿದ್ದಾಗ ನಮ್ಮನ್ನು ಎಚ್ಚರಿಸುತ್ತವೆ.
ಅವು ನಿದ್ದೆಗಿಂತಲೂ ಶಕ್ತಿಶಾಲಿ,  ಬದುಕಿನ ಆರಾಮಿಗಿಂತಲೂ ಪ್ರಭಾವಶಾಲಿ...
ನೀನು ಒಂದು ದಿನ ಬರೀ ನೆನಪಾಗಿ ಉಳಿಯುತ್ತೀ ಎಂದೂ ಅನ್ನಿಸಿರಲಿಲ್ಲ.
ಆದರೆ ಬದುಕು ನಮ್ಮ ಆಲೋಚನೆ ಯಂತೆ ನಡೆಯುವುದಿಲ್ಲ-ಅದಕ್ಕೆ ತನ್ನದೇ ಮರ್ಜಿಯೊಂದು ಇರುತ್ತದೆ...ನಾನು ಅಂದುಕೊಂಡೆ-ಎಲ್ಲವೂ ಸರಿಹೋಗುತ್ತದೆ - ಮೊದಲಿನಂತೆ ಸರಾಗವಾಗುತ್ತದೆ-ಎಂದು.ಹಾಗಾಗಲೇ ಇಲ್ಲ-ಕೆಲವು ಹಳೆಯ ನೆನಪುಗಳು ಹೊಸ ನೋವಿಗಿಂತ ಹೆಚ್ಚು ಗಾಢವಾಗಿರುತ್ತವೆ- ಹೆಚ್ಚು ನೋವು ಕೊಡುತ್ತವೆ...ಹೃದಯಕ್ಕೆ ಹತ್ತಿರವಾದವ ರನ್ನು ಮರೆಯಲಾಗುವುದೇ ಇಲ್ಲ. ಈಗಲೂ ಒಮ್ಮೊಮ್ಮೆ ನೀನು ಬಳಿ ಇದ್ದಂತೆ/ ನಿನ್ನ ಉಸಿರು ಕೇಳಿದಂತೆ/ ನನ್ನನ್ನು ಕರೆದಂತೆ ಭಾಸವಾಗುತ್ತದೆ.
ಅದು ನಿಜವಲ್ಲ - ನನ್ನ ಭ್ರಮೆ ಮಾತ್ರ ಎಂದು ತಿಳಿದಿದ್ದರೂ ಬಿಡಲಾಗುತ್ತಿಲ್ಲ- ಎಂಬುದು ಅರ್ಥವಾಗುತ್ತದೆ. ಒಮ್ಮೆಲೇ ಮೂಕಳಾಗುತ್ತೇನೆ,ಏಕಾಂಗಿಯಾಗುತ್ತೇನೆ. ಯೋಚಿಸುತ್ತೇನೆ,ಬಹುಶಃ ಇನ್ನೂ ಇರುವುದು ನಿನ್ನ ಭಾಗ್ಯದಲ್ಲೇ ಬರೆದಿರಲಿಕ್ಕಿಲ್ಲ- ಎಂದು..ಅಥವಾ ನನ್ನ ಹಣೆಯಲ್ಲಿ ಬರೆದಿರಲಿಲ್ಲ ಎಂದು....

          ಇಂದು ನನಗೆ ತಿಳಿದಿದೆ- ಬದುಕಿನ ಬಹು ದೊಡ್ಡ ಭಾಗ್ಯ- ಹಣವಲ್ಲ-ಮನಕ್ಕೊ
ಪ್ಪಿದ- ಒಳ್ಳೆಯ- ಸಹೃದಯದ ಒಬ್ಬ ವ್ಯಕ್ತಿಯ ಉಪಸ್ಥಿತಿ...

No comments:

Post a Comment

       ಕೆಲವರು ನಮ್ಮ ಜಗತ್ತಿನಿಂದ ದೂರ ಹೊರಟುಹೋಗುತ್ತಾರೆ- ಮತ್ತೆಂದೂ ಬರದಂತೆ...ಅವರು ಜೊತೆಗೆ ಇರುವುದಿಲ್ಲ - ಅವರ ದನಿ ಕೇಳುವುದಿಲ್ಲ-  ಆದರೆ ಅವರ ನೆನಪು!!!?? ಹೃದಯ...