ನಿನ್ನೆ ಸಾಯಂಕಾಲ ಒಂದು
ವೀಡಿಯೋ call ಬಂತು...ಎತ್ತಿದೆ...ನನ್ನ
ಒಂದನೇ ಇಯತ್ತೆಯಿಂದ ಹತ್ತನೇ ಇಯತ್ತೆವರೆಗೆ ಸಹಪಾಠಿಗಳಾದ ನಲು- ಶಾರದಾ- ಚಂಪಾ- ಸುನಿತಾ ಒಟ್ಟಾಗಿ
ಕಾಣಿಸಿಕೊಂಡರು...ಚೀರುವುದೊಂದೇ
ಬಾಕಿ..." ನಿನ್ನ ನೆನಪು ತುಂಬಾ ಆಯಿತು-
ಅದಕ್ಕೇ call ಮಾಡಿದೆವು"- ಅಂದರು...
ಐದು- ಹತ್ತು ನಿಮಿಷಗಳ ಮಾತುಗಳು
ದಾಹ ಹೆಚ್ಚಿಸುತ್ತವೆ...ಇನ್ನೂ ಬಹಳ ಮಾತನಾಡುವುದಿತ್ತು- ಆಗುವುದಿಲ್ಲ ಎಂಬುದು ಗೊತ್ತಿದ್ದ ಮಾತೇ... ಬೇಸರ ವಾಗಲಿಲ್ಲ - ಎಕೆಂದರೆ ಅಷ್ಟರಲ್ಲಿ ನಾನವರ ಜೊತೆ ಚಿಕ್ಕವಳಾಗಿ ರಟ್ಟೀಹಳ್ಳಿ ಯ ಗಲ್ಲಿ ಗಲ್ಲಿಗಳ ತುಂಬೆಲ್ಲ ಮನಸಾರೆ ಸುತ್ತಾಡತೊಡಗಿದ್ದೆ...
ಬರೆಯುವುದನ್ನು ಕಡಿಮೆ ಮಾಡಿದ್ದೇನೆ- ಓದಲು ಕಣ್ಣುಗಳು ಸಹಕರಿಸುವುದಿಲ್ಲ- ರಾಜಕೀಯದಲ್ಲಿ ಆಸಕ್ತಿಯಿಲ್ಲ-ಹೊರಗೆ ಹೋಗಲು ಒಬ್ಬರು ಬೇಕು-ಸಧ್ಯ Fb ಯಲ್ಲಿ ಮೊದಲಿನ ದಮ್ ಇಲ್ಲ- ಸಹಜವಾಗಿ open ಮಾಡಿದರೂ ರಾಜಕಾರಣದ ರಂಪಾಟ/
ಅತ್ಯಾಚಾರ- ಅನಾಚಾರದ ಸುದ್ದಿಗಳು/
ಪ್ರಚಾರಗಿಟ್ಟಿಸುವ ಜಾಹಿರಾತುಗಳು-ಇಂಥವೇ ಬೇಡದ ನಿರಂತರ ಬಡಿಸುವಿಕೆ..
ಇಂಥ ಹೊತ್ತಿನಲ್ಲಿ ಎಂದೋ ಕೂಡಾಡಿ, ಉಂಡು, ಜಗಳವಾಡಿ,ಚೀರಾಡಿ ನಲಿದಾಡಿದ- ಸುಂದರ ಯಾನ ನೆನಪಿಸುವ ಎಂಬತ್ತರ ಆಸುಪಾಸಿನ ನಾಲ್ಕು ಗೆಳತಿಯರ ಭೇಟಿ- ಮನಸ್ಸಿಗೆ
ಕೊಡುವ ಹಿತಕ್ಕೆ ಸರಿಸಮಾನವಾದುದು
ಉಂಟೆ? ನಿಜ- ಅದು Online ಭೇಟಿ- ಕೆಲವೇ ನಿಮಿಷಗಳದು- ಸಮಯದ ಮಿತಿಯಿದೆ- ಗೊತ್ತು...ಆ ಮಿತಿ ಮನಸ್ಸಿನ ಓಟಕ್ಕಿಲ್ಲವಲ್ಲ!!!
No comments:
Post a Comment