Sunday, 11 October 2026

ಇಂದು ನವರಾತ್ರಿ...ಹತ್ತು ದಿನಗಳ‌ ಘಟ್ಟ.
ಮೊದಲಾದರೆ ಇನ್ನೂ ಹತ್ತು ದಿನಗಳ ಮೊದಲೇ ತಯಾರಿ...ಅಡುಗೆಮನೆ- ದೇವರ ಮನೆಯ ಆಮೂಲಾಗ್ರ ಸ್ವಚ್ಛತೆ/
ಸುಣ್ಣ- ಬಣ್ಣ/ಹತ್ತು ದಿನಗಳಿಗಾಗುವಷ್ಟು
ಮೀಸಲು ಪುಡಿ- ಹುಡಿ...ನವರಾತ್ರಿಯ
ಪ್ರಥಮ‌ ದಿನ ಘಟಸ್ಥಾಪನೆ- ಮೂರು ದಿನ  ಕಡ್ಡಾಯವಾಗಿ ಹೋಳಿಗೆಯೂಟ...
ದಿನಕ್ಕೊಂದು ಬಳಗಕ್ಕೆ ವಿಶೇಷ ಔತಣ...
ಘಟ್ಟದ ಎರಡು ನಿರಂತರ ದೀವಿಗೆಗಳು- ಪೂಜೆಯ ವೇಳೆಗೆ ಮಂಟಪದ ಮೆಟ್ಟಿಲು ಗಳಿಗೆ ದೀಪದ ಸಾಲುಗಳು...ಸಿಹಿ- ಉಪ್ಪು ಖಾರದ ನಾನಾ ವ್ಯಂಜನಗಳು...ಸಂಜೆ
ವೇಂಕಟೇಶನ‌ ಜಾತ್ರೆಗೆ ಭೇಟಿ. ಪ್ರತಿ ದಿನಕ್ಕೊಂದು ವೆಂಕಟೇಶನಿಗೆ ಅವತಾರ ಗಳು- ಮಕ್ಕಳಿಗೆ ಜಾತ್ರೆಯ ಖರೀದಿಯ
ಜೋರು....ಅಮ್ಮ- ಅಪ್ಪಂದಿರಿಗೆ ಮರುದಿನದ ಮನೆವಾಳ್ತೆಯ ಚಿಂತೆ...ಗುಡಿಗೆಂದು ಹೊರಬಿದ್ದ ಬಂಧುಬಾಂಧವರ ಆಕಸ್ಮಿಕ ಭೇಟಿ- ಹರಟೆ...
             ಅಬ್ಬಾ!!! ಎಷ್ಟೊಂದು ಕಳೆದು ಕೊಂಡಿದ್ದೇವೆ ಈಗ!!ಮಕ್ಕಳು ಮೊಮ್ಮಕ್ಕ ಳ ಈಗಿನ ಕಾಲದ ಅವಸರದ ಬದುಕಿನ
ಸುಳಿಯಲ್ಲಿ...ಆದರೂ ನೆನಪುಗಳಿಗೆ
ಬರವಿಲ್ಲ...ಬೆಂಗಳೂರಿನ ಗ್ಯಾಲರಿಯಲ್ಲಿ
ಕುಳಿತು Switch on ಆದರೆ ಧಾರವಾಡ ದ ಹೊಸ ಯಲ್ಲಾಪುರದ ಶುಕ್ರವಾರ ಪೇಟೆಯ/ಹಾಗೂ ಗಾಂಧಿಚೌಕಿನ ವೆಂಕಟೇಶ ದೇವರ ಗುಡಿಯ ಸಮಗ್ರ 
ಚಿತ್ರಣದ ರೀಲುಗಳ ಮಹಾ ಮೆರವಣಿಗೆ...



No comments:

Post a Comment

ಇಂದು ನವರಾತ್ರಿ...ಹತ್ತು ದಿನಗಳ‌ ಘಟ್ಟ. ಮೊದಲಾದರೆ ಇನ್ನೂ ಹತ್ತು ದಿನಗಳ ಮೊದಲೇ ತಯಾರಿ...ಅಡುಗೆಮನೆ- ದೇವರ ಮನೆಯ ಆಮೂಲಾಗ್ರ ಸ್ವಚ್ಛತೆ/ ಸುಣ್ಣ- ಬಣ್ಣ/ಹತ್ತು ದಿನಗಳಿಗ...