Monday, 5 October 2026

ಬದುಕೆನಗೆ
ದಿನಕ್ಕೊಂದು ಪಾಠ ಕಲಿಸಿತು..
ಒಂದು ದಿನ ನಗುವುದನ್ನು ಕಲಿಸಿದರೆ 
ಮರುದಿನ ಹಲ್ಲು ಕಚ್ಚಿ 
ನೋವು ನುಂಗುವುದನ್ನು  ಕಲಿಸಿತು.

ಕೆಲವು ಕನಸುಗಳು ಭಗ್ನವಾದವು...
ಕೆಲ ನನ್ನವರೇ ಋಗ್ಣವಾದರು...
ಆದರೂ ಉಸಿರು ಉಳಿದಿತ್ತು...
ಮುಂದಿನ ಬದುಕು ಅದ್ಹೇಗೋ ಚಲಸಿತ್ತು...
ಬದುಕೆಂಬುದು ಸರಳವಲ್ಲ..
ಆದರೂ ಅದೆಲ್ಲೂ ನಿಲ್ಲುವುದಿಲ್ಲ...

ನಡೆಯುತ್ತದೆ-
ಕೆಲವೊಮ್ಮೆ ನಮ್ಮವರಿಗಾಗಿ,
ಮತ್ತೊಮ್ಮೆ ನಮ್ಮದೇ ಕನಸುಗಳಿಗಾಗಿ..
ಬಹುಶಃ ಒಂದೇ ಒಂದು ನಂಬಿಕೆಯಿಂದ...
ನಾಳಿನ ಸೂರ್ಯ
ಇಂದಿಗಿಂತ ತಂಪಾಗಿರಬಹುದು-
ಎಂದೆಂಬ ಒಂದೇ ಭರವಸೆಯಿಂದ....

No comments:

Post a Comment

ಬದುಕೆನಗೆ ದಿನಕ್ಕೊಂದು ಪಾಠ ಕಲಿಸಿತು.. ಒಂದು ದಿನ  ನಗುವುದನ್ನು  ಕಲಿಸಿದರೆ  ಮರುದಿನ ಹಲ್ಲು ಕಚ್ಚಿ  ನೋವು  ನುಂಗುವುದನ್ನು   ಕಲಿಸಿತು. ಕೆಲವು ಕನಸುಗಳು  ಭಗ್ನವಾದವು...