Saturday, 4 April 2026

       ಇವಳು ನಮ್ಮ ಚೈತ್ರ ಗೌರಿ...55 ವರ್ಷಗಳಿಂದ( ೧೯೭೦)- ನನ್ನ ಮದುವೆ ಯ ನಂತರ ನಮ್ಮಿಂದ ಪೂಜೆ ಪಡೆಯುತ್ತಿ ದ್ದಾಳೆ.ಈಗ ನಾಲ್ಕು ವರ್ಷಗಳಿಂದ NRI...
ಒಬ್ಬಳೇ ಸೊಸೆ.ಹಬ್ಬ ಮಾಡುವ/ಸಂಭ್ರಮಿಸುವ/ಗೆಳತಿಯರನ್ನು ಕೂಡಿಸಿ
ಒಂದು event ಆಗಿಸುವ ಪರಿಪಾಠ ಇಲ್ಲೂ ಇತ್ತು/ಈಗ ಅಲ್ಲಿಯೂ ಪ್ರತಿವರ್ಷ
ನಡೆಯುತ್ತಿದೆ.ಚೈತ್ರ ಗೌರಿ ಬಲು friendly
ಹೆಚ್ಚು ಮಡಿ ಬೇಕಿಲ್ಲ/ಕೋಸಂಬರಿ+ ಪಾಯಸ ಇಷ್ಟಾದರೆ ಸುಪ್ರೀತಳು.ತಿಂಗಳ
ಕಾಲ- ಗೌರಿ ತದಿಗೆಯಿಂದ ಅಕ್ಷಯ ತೃತೀಯ ದ ವರೆಗೆ ಒಂದು ತಿಂಗಳು ಪೂರ್ತಿ ಮನೆಯವಳಾಗಿ ಇದ್ದು,ಪಾನಕ +
ಸವತೆಕಾಯಿ ಕೋಸಂಬರಿಯಿಂದ ಮನಸ್ಸು/ದೇಹಗಳಿಗೆ ತಂಪು ಕೊಡುತ್ತಾ
ಇರುತ್ತಾಳೆ.
              ಈ ಸಲವೂ ಮೊನ್ನೆ ತದಿಗೆಯ
ದಿನ ಮನೆಯನ್ನಲಂಕರಿಸಿದ್ದಾಳೆ...ಗೆಳತಿ ಯರು ಬರುತ್ತಾರೆ...ಈ ಸಲವಂತೂ ಹೊಸ ಮನೆಯಲ್ಲಿ ಮೊದಲ ಪೂಜೆ.
ಸಹಜವಾಗಿಯೇ ಹೆಚ್ಚಿನ ಸಂತಸ.ಆಸ್ಥೆ...
                ಇದು ನಿರಂತರ ನಡೆಯಲಿ- ನಡೆಯುತ್ತದೆ...

       ಇವಳು ನಮ್ಮ ಚೈತ್ರ ಗೌರಿ...55 ವರ್ಷಗಳಿಂದ( ೧೯೭೦)- ನನ್ನ ಮದುವೆ ಯ ನಂತರ ನಮ್ಮಿಂದ ಪೂಜೆ ಪಡೆಯುತ್ತಿ ದ್ದಾಳೆ.ಈಗ ನಾಲ್ಕು ವರ್ಷಗಳಿಂದ NRI... ಒಬ್ಬಳೇ ಸೊಸೆ.ಹಬ...