Sunday, 9 August 2026

  ಯಾರಾದರೂ ನವ್ಮ ಕೈಯಲ್ಲಿ ಭಾರದ ವಸ್ತುವೊಂದನ್ನು ಕೊಟ್ಟರೆ ಸ್ವಲ್ಪ ಸಮಯ ದ ನಂತರ ಅದನ್ನು ಕೆಳಗೆ ಇರಿಸುತ್ತೇವೆ. ಆದರೆ ಮನಸ್ಸಿನ ಭಾರವನ್ನು ಅಷ್ಟು ಸುಲಭವಾಗಿ ಇಳಿಸಲಾಗುವುದಿಲ್ಲ...ಸದಾ ಹೊತ್ತುಕೊಂಡೇ ನಡೆಯಬೇಕು...
ಯಾವಾಗಲೋ ಘಟಿಸಿದ ಒಂದು ಘಟನೆ /ಇನ್ನೊಬ್ಬರ ಅಭಿಪ್ರಾಯಗಳು/
ಯಾವುದಕ್ಕೋ ಸಿಗದ ಉತ್ತರ/ಭವಿಷ್ಯದ ಎಂಥದೋ ಒಂದು ಚಿಂತೆ- ಹೀಗೆ ಏನೇನನ್ನೋ...ಯಾರಿಗೂ ಅದು ಕಾಣದಿದ್ದರೂ ನಮ್ಮನ್ನೇ ಒಳಗೊಳಗೇ ಸತಾಯಿಸುತ್ತಿರುತ್ತವೆ...

      ಎಂದೋ ಅಕಸ್ಮಾತ್ ಮಾಡಿದ ಒಂದು ತಪ್ಪು- ಹಾಗೆ ಹೇಳಬಾರದಿತ್ತು/ ಮಾಡಬಾರದಿತ್ತು- ಇಂಥ ಮಾತುಗಳು 
ಭೂತವನ್ನೇನೂ ಬದಲಿಸುವುದಿಲ್ಲ,ಆದರೆ ಖಂಡಿತ ನಮ್ಮ ವರ್ತಮಾನವನ್ನು 
ಹದಗೆಡಿಸುತ್ತದೆ.ಅಂದು ಪರಿಸ್ಥಿತಿ ಹಾಗಿತ್ತು- ಹಾಗೆ ಆಯಿತು,ತಪ್ಪೆನಿಸಿತಾ- ಒಂದು ಬಾರಿ sorry ಹೇಳಿ ಮುನ್ನಡೆದು ಬಿಡಬೇಕು- ಅಷ್ಟೇ...ಆ ಘಟನೆ ಬದುಕಿನ ಒಂದು ಪುಟವಷ್ಟೇ -ನಮ್ಮ ಬದುಕಿನ
ಪೂರ್ಣ ಪುಸ್ತಕ ಖಂಡಿತ ಅಲ್ಲ-

               ನಮ್ಮಬಗ್ಗೆ ಬೇರೆಯವರ ಅಭಿಪ್ರಾಯ ಇನ್ನೊಂದು ಸಮಸ್ಯೆ... ಒಬ್ಬೊಬ್ಬರು ಒಂದೊಂದು ಮಾತನಾಡಿ ದರೆ ನಾವು ಹಾಗೆ ಕ್ಷಣಕ್ಕೆ/ದಿನಕ್ಕೆ ಬದಲಾಗಲು ಸಾಧ್ಯವೇ?ಅದು ನಮ್ಮ ವ್ಯಕ್ತಿತ್ವವಲ್ಲ- ನಮ್ಮ ಬಗ್ಗೆ ಅವರದೇ ಗ್ರಹಿಕೆ ಅಷ್ಟೇ...ಅದಕ್ಕೆ ಅಷ್ಟೇ ಮಾನ್ಯತೆ...

         ಕೆಲವೊಮ್ಮೆ ನಮಗೆಂದೂ ದೊರಕದ ಕೆಲವು ಉತ್ತರಗಳು ಇರುತ್ತವೆ. ಪ್ರತಿಯೊಂದು ಮುಚ್ಚಿದ ಬಾಗಿಲಿನ ಕಥೆ ನಮಗೆ ಗೊತ್ತಿರಬೇಕೆ?ಕಾರಣವಿಲ್ಲ- ಅದು ನೆಮ್ಮದಿಯ ದಾರಿಯೂ ಅಲ್ಲ...ಅಷ್ಟು
ತಿಳಿದರೆ ಸಾಕು...ಅದೇ ಸುಖ...

           ಎಂದೂ ಘಟಿಸದ/ಘಟಿಸಲೂ ಇರಬಹುದಾದ ಯಾವುದೋ ಸಂಗತಿಯ ಬಗ್ಗೆ ಚಿಂತೆ...ಅದನ್ನು ಮಾಡುವುದು ಸಹಜ, ಆದರೆ ಅದನ್ನೇ ತಲೆತುಂಬ ತುಂಬಿಕೊಂಡು ವರ್ತಮಾನವನ್ನು ಹದ ಗೆಡಿಸಿಕೊಳ್ಳುವುದು ಖಂಡಿತ ತಪ್ಪು. ಅದನ್ನು ಅಲ್ಲಿಯೇ ಬಿಟ್ಟು ಮುಂದೆ ನಡೆದರೆ ಒಂದು ದಿನ ಅದಕ್ಕಿಂತಲೂ
ಹೆಚ್ಚಿನ ಜವಾಬ್ದಾರಿ ಹೊರುವುದನ್ನು ಒಮ್ಮೆ ಬದುಕೇ ಖಂಡಿತ ಕಲಿಸುತ್ತದೆ... 

              ಬೇಡದ ಸಂಬಂಧಗಳನ್ನು 
ಒದ್ದಾಡಿಕೊಂಡು ಸಂಭಾಳಿಸುವುದು... ಅದು ಎರಡೂ ಕಡೆಯಿಂದ ಉಳಿಯಬೇ ಕು-ಸಹಜ ಎಂಬಂತೆ...ಒಬ್ಬರೇ ಗುದ್ದಾಡಿ
ಪ್ರಯೋಜನವಿಲ್ಲ...ನೆನಪಿರಲಿ...

       ಕಾರಣ ನಮ್ಮ ಕೆಲವು ತಪ್ಪುಗಳನ್ನು
ಸ್ವಲ್ಪ ಕಾಲ ಹಾಗೆಯೇ ಬಿಟ್ಟು/ಕೆಲವರ ಸಲ್ಲದ ಅಭಿಪ್ರಾಯಗಳಿಗೆ ಅಂಟಿಕೊಂಡು ಒದ್ದಾಡದೇ/ಯಾವುದೋ ಒಂದು ಸಂಗತಿ ಗೊತ್ತಿಲ್ಲ ಎಂಬುದನ್ನೇ ವ್ಯಸನ ವಾಗಿಸದೇ/ ಬೇಡದ ಸಂಬಂಧಗಳನ್ನು ಕಾಯ್ದು ಕೊಳ್ಳಲು ವ್ಯರ್ಥ ಹೋರಾಟ ನಡೆಸದೇ/ಬದುಕುವದೂ- ಒಂದು ಸತ್ಕರ್ಮವೇ...

ಅಷ್ಟೇ...

No comments:

Post a Comment

  ಯಾರಾದರೂ ನವ್ಮ ಕೈಯಲ್ಲಿ ಭಾರದ ವಸ್ತುವೊಂದನ್ನು ಕೊಟ್ಟರೆ ಸ್ವಲ್ಪ ಸಮಯ ದ ನಂತರ ಅದನ್ನು ಕೆಳಗೆ ಇರಿಸುತ್ತೇವೆ. ಆದರೆ ಮನಸ್ಸಿನ ಭಾರವನ್ನು ಅಷ್ಟು ಸುಲಭವಾಗಿ ಇಳಿಸಲಾಗುವ...