ಇಂದಿಗೆ ನೂರು ವರ್ಷಗಳ ನಂತರ
ನಾವು ಯಾರೂ ಬದುಕಿರುವುದಿಲ್ಲ.
ನಾವು ಒದ್ದಾಡಿ ಕಟ್ಟಿದ ಮನೆಗಳಲ್ಲಿ ಯಾರೋ ಅಪರಿಚಿತರು
ವಾಸಿಸುತ್ತಿರಬಹುದು.ಈಗ ನಮ್ಮದಾಗಿರುವ/ ನಾವು ಜೀವಕ್ಕಿಂತಲೂ ಹೆಚ್ಚಿನದೆಂದು ಅಂದುಕೊಂಡ ಎಲ್ಲವೂ ಯಾರದೋ ಕೈಸೇರಿರಬಹುದು.
ನಮ್ಮ ಆಢ್ಯದ ದುಬಾರಿ ಕಾರು ಯಾವುದೋ ಹಳೆಯ ಗೋಡೌನ ಮೂಲೆಯೊಂದರಲ್ಲಿ ಬಿಕರಿಗಿರಬಹುದು.ನಮ್ಮ ಪೀಳಿಗೆಗೆ ನಮ್ಮ ಹೆಸರುಗಳೂ ಗೊತ್ತಿರಲಿಕ್ಕಿಲ್ಲ.ಗೋಡೆಯ ಮೇಲೆ ಒಂದು ಕಾಲಕ್ಕೆ ನೇತಾಡುತ್ತಿದ್ದ ನಮ್ಮ ಫೋಟೋ ಕೂಡ ಯಾವ ಕಸದ ಮೂಲೆಯ ಭಾಗವಾಗಿದೆಯೋ!!!
ಒಂದು ಕ್ಷಣ ಯೋಚಿಸಿದರೂ
ಇದುವರೆಗೆ ನಾವು ಬೆನ್ನು ಬಿದ್ದು ಗಳಿಸಿದ ಎಲ್ಲದರದೂ ಖಾಲಿತನದ ಅರಿವಾಗುತ್ತದೆ.
ಒಮ್ಮೆ ನೋಡಿ- ಯೋಚಿಸಿ- ಇನ್ನು ಐದು ವರ್ಷಗಳಿಗೇನೆ
ಉಪಯೋಗ ಬರದ ವಸ್ತುಗಳ ಬಗ್ಗೆ ಂಓಹ ಕಳೆದುಕೊಳ್ಳಿ- ನಿಮಗಿಂತಲೂ ಹೆಚ್ಚು ಅಗತ್ಯವಿದ್ದವರಿಗೆ
ಕೊಟ್ಟು ನೋಡಿ...
No comments:
Post a Comment