Sunday, 23 August 2026

ನಮ್ಮ ಪ್ರವಾಸವೂ
ಒಂದು ದಿನ ಮುಗಿಯುತ್ತದೆ..
ಹುಟ್ಟಿದ ಊರೂ ಹಿಂದುಳಿಯುತ್ತದೆ...
ಎಲ್ಲಿ ಮೊದಲ ಉಸಿರು
ತೆಗೆದುಕೊಂಡಿದ್ದೆವೋ
ಆ ಮನೆಯೂ ನೆನಪೂ ಅಳಿಯುತ್ತದೆ...

ಯಾವ ಅಂಗಳದಲ್ಲಿ 
ಹಲವು ಬಾರಿ ಓಡಿ,ಎಡವಿ, 
ಬಿದ್ದು,ಎದ್ದು ಒದ್ದಾಡಿದ್ದೆವೋ
ಆ ಅಂಗಳದ ನೆನಪೂ ಮಸುಕಾಗುತ್ತದೆ...
ಯಾವ ಗಲ್ಲಿಗಳಲ್ಲಿ, ಓಣಿಗಳಲ್ಲಿ ನಗುತ್ತ, 
ಕೆಲೆಯುತ್ತ ಆನಂದ ಸೂರೆಗೊಂಡಿದ್ದೆವೋ
ಅದೂ  ಶಾಶ್ವತವಾಗಿ ದೊರಕಲಾರದು...

ನನ್ನವರೆಲ್ಲರ ಸುಖ- ದುಃಖದ 
ಗಳಿಗೆಗಳೂ ಮರೆತು ಹೋಗಬಹುದು...
ಕೊನೆಯದಾಗಿ ಇಂಥ ಅನುಭವ, ಅನುಭಾವಗಳನ್ನು ಕಟ್ಟಿಕೊಟ್ಟ ಈ ನೆನಪುಗಳ ದೊಡ್ಡ ಭಂಡಾರವೊಂದೇ
ಉಳಿದುಕೊಳ್ಳುತ್ತದೆ,
ಬದುಕೂ ಮುಕ್ತವಾಗುವ ವರೆಗೆ...

ಅಷ್ಟೇ...

No comments:

Post a Comment

ನಮ್ಮ ಪ್ರವಾಸವೂ ಒಂದು ದಿನ ಮುಗಿಯುತ್ತದೆ.. ಹುಟ್ಟಿದ ಊರೂ ಹಿಂದುಳಿಯುತ್ತದೆ... ಎಲ್ಲಿ ಮೊದಲ ಉಸಿರು ತೆಗೆದುಕೊಂಡಿದ್ದೆವೋ ಆ ಮನೆಯೂ ನೆನಪೂ ಅಳಿಯುತ್ತದೆ.. . ಯಾವ ಅಂಗಳದ...