ಒಬ್ಬಬ್ಬರು ಒಂದೊಂದು ಕಲೆಯಲ್ಲಿ ಪರಿಣಿತರು.ನಾನು ಮಾಡುವುದೇನೂ
ಬಹಳವಿಲ್ಲ ಎಂದು ಗೊತ್ತಿದ್ದು ಯಾರು/ ಏನು ಕೇಳುತ್ತಾರೋ ಅವರಿಗೆ ಬೇಕಾದ ನೆರವು ನೀಡಿದರೆ ಸಾಕು- ಎಲ್ಲವನ್ನೂ
ಮಾಡಲು ವಿವಿಧ ವಯಸ್ಸಿನ ' ಪಡೆ'-
ಸಿದ್ಧವಿತ್ತು...ಮದುವೆಯೂ ತುಂಬ ಸಂಭ್ರಮದಿಂದ ನೆರವೇರಿದ್ದೂ ಆಯ್ತು...
ಮಗಳನ್ನು ಅತ್ತೆ ಮನೆಗೆ ಕಳಿಸಲು ಹೋಗುವಾಗ ಆಶೀರ್ವಾದ ರೂಪದಲ್ಲಿ
ಒಂದು ಕವನ ಬರೆದಿದ್ದೆ.ಅದು ಆಗಾಗ
Fb ಯಲ್ಲಿ ಕಾಣಿಸಿಕೊಳ್ಳುತ್ತದೆ...ಇಂದೇ
ಮದುವೆಯಾದ ಹಾಗೆ ಎಲ್ಲವೂ ಕಣ್ಣಮುಂದೆ ಸರಿದುಹೋಗುತ್ತದೆ...
ಈ ಮಾತಿಗೆ ಮೂವತ್ತರ ಹರೆಯ...ಮಗಳ ಮಕ್ಕಳು ಮದುವೆಗೆ ಬಂದಿದ್ದಾರೆ.ಆದರೂ ಈ ಹಾಡಿನ ತಾಜಾತನ ಮೈ - ಮನವನ್ನು ಅರಳಿಸುತ್ತಲೇ ಇರುತ್ತದೆ...
ನೆನಪುಗಳ 'ಧೂಮ್ರ ವಲಯ'
No comments:
Post a Comment