Saturday, 13 June 2026

ತಾಲೂಕೂ ಅಲ್ಲದ ಪುಟ್ಟ ಹಳ್ಳಿಯಲ್ಲಿ ಹುಟ್ಟಿ/ನಾವು ಸಣ್ಣವರಿದ್ದಾಗಲೇ ಎಳೆದೊಯ್ದು ಒಂದು ಕೋಣೆಯಲ್ಲಿ ಕೂಡಿಸಿ, ಪಾಟಿ- ಬಳಪ ಕೊಟ್ಟು ಶಾಲೆಗೆ
ಸೇರಿಸಿ/ಪಾಸು- ನಪಾಸು ಅಂತ ಬಾಯಲ್ಲಿ ಹೇಳಿ ಏಳನೇ ಇಯತ್ತೆ ಪಾರಾದದ್ದು ನಾವು...ಹೈಸ್ಕೂಲ್ ಇರಲಿಲ್ಲ,ಮತ್ತೆರಡು ವರ್ಷ ಹೋದವು...
ಸಿಕ್ಕ ಮಕ್ಕಳನ್ನು ಕರೆದೊಯ್ದು ಕೂಡಿಸಿ
ಹೈಸ್ಕೂಲ್ ಬೋರ್ಡ್ ಬರೆದು ಶುರು ಆಯಿತು.ಎಂಟನೇ ವರ್ಗದಲ್ಲಿ A to Z
ತಪ್ಪದೇ orderನಲ್ಲಿ ಬರೆದವರು ರ್ಯಾಂಕ್/ಜಾಣರು.SSC ಮುಗಿದ ಮೇಲೆ ಕಾಲೇಜು ಇಲ್ಲ.ಮತ್ತೆ ಒಂದು ವರ್ಷ ಓಣಿಗಳನ್ನು ಸುತ್ತಿದ್ದಾಯ್ತು..ಅಣ್ಣ 
MSc ಓದಿ ನೌಕರಿ ಸಿಕ್ಕಾಗ ನನ್ನ 19 ನೇ ವಯಸ್ಸಿನಲ್ಲಿ college ಪ್ರಾರಂಭವಾಗಿ
ಒಂದು ವರ್ಷವೂ ಫೇಲ್ ಆಗದ ಕಾರಣಕ್ಕೆ ೨೪ ನೇ ವರ್ಷಕ್ಕೆ degree
ಸಿಕ್ಕದ್ದು...ಬಹಳ ದಿನಗಳವರೆಗೆ ಇದನ್ನೇ ಹೇಳುತ್ತ ಮೆರೆಯುತ್ತಿದ್ದ ನನ್ನ ದೊಡ್ಡಸ್ತಿಕೆ ಗೆ ಏಟು ಬಿದ್ದದ್ದು ನನ್ನ ಮಕ್ಕಳು ಶಾಲೆಗೆ
ಹೋಗತೊಡಗಿದಾಗ...ಅವರ ಅಭ್ಯಾಸದ ಪುಸ್ತಕಗಳು/ರಾತ್ರಿಯಿಡೀ ಓದು/ತೀರದ
ಪರೀಕ್ಷೆಗಳು ಇವು ಅವರಿಗಿಂತ ನಮ್ಮನ್ನೇ
ದಣಿಸಿದ್ದವು...ಈಗ ಅವರು ತಮ್ಮ ಮಕ್ಕಳಿಂದ/ಮಕ್ಕಳಿಗಾಗಿ ಇನ್ನೂ ಹೆಚ್ಚು 
ಒದ್ದಾಡುತ್ತಿದ್ದಾರೆ...ಓದು- ಪರೀಕ್ಷೆ- ನೌಕರಿ- status_ಮುಗಿಯದ ಗೊಂದಲ.

      ‌       Thank God... ನಮ್ಮನೆಯಲ್ಲಿ
ಆರರಲ್ಲಿ ಮೂವರದು ಮುಗಿದು ನೌಕರಿ ಯಲ್ಲಿದ್ದಾರೆ... ಮೂವರದು ನಡು ಹಾದಿಯಲ್ಲಿದೆ... 

        ‌ ‌ 


No comments:

Post a Comment

ತಾಲೂಕೂ ಅಲ್ಲದ ಪುಟ್ಟ ಹಳ್ಳಿಯಲ್ಲಿ ಹುಟ್ಟಿ/ನಾವು ಸಣ್ಣವರಿದ್ದಾಗಲೇ ಎಳೆದೊಯ್ದು ಒಂದು ಕೋಣೆಯಲ್ಲಿ ಕೂಡಿಸಿ, ಪಾಟಿ- ಬಳಪ ಕೊಟ್ಟು ಶಾಲೆಗೆ ಸೇರಿಸಿ/ಪಾಸು- ನಪಾಸು ಅಂತ ಬಾಯ...