ಒಳ್ಳೆಯ ಜನರನ್ನು ಬಹಳಷ್ಟು ಜನ, ಬಹಳ ಸಲ ಬಳಸಿಕೊಳ್ಳುತ್ತಾರೆ... ಉಪಯೋಗಿಸಿಕೊಳ್ಳುತ್ತಾರೆ..ಅದು ಅವರಿಗೆ ತಿಳಿಯುತ್ತದೆ. ಆದರೂ ಅವರ ಸುಸ್ವಭಾವದಿಂದಾಗಿ ಅದನ್ನು ತಡೆಯಲಾ ಗುವುದಿಲ್ಲ.ಏಕೆಂದರೆ ಹಾಗೆ ಮಾಡಿದರೆ
ಕೇಳಿದವರಿಗೆ ಬೇಸರವಾಗುತ್ತದೆ.ನೋವಾ ಗುತ್ತದೆ.ಆ ಕಾರಣಕ್ಕೆ ಎಲ್ಲರಿಗೂ ಒದಗು ತ್ತಾರೆ.ಬಳಸಿಕೊಂಡವರು ಅವರ ಹಣ/ ಹೆಸರು/ ಸಮಯ/ ತಾಕತ್ತು ಎಲ್ಲವನ್ನೂ
ಬಳಸಿಕೊಂಡು,ತಮ್ಮ ಕಾರ್ಯ ಮುಗಿದ ತಕ್ಷಣ ಮಾಯವಾಗುತ್ತಾರೆ.ಯಾರಿಗಾದ ರೂ ಸಹಾಯ ಮಾಡುವುದು ಕೆಟ್ಟದಲ್ಲ, ಆದರೆ ಪ್ರತಿಸಲ/ಪ್ರತಿಯೊಬ್ಬರಿಗೂ/
ಪ್ರತಿಯೊಂದಕ್ಕೂ ಒದಗುವುದು ಖಂಡಿತ ಒಳ್ಳೆಯದಲ್ಲ...ಅಲ್ಲದೇ ನಿಮಗೆ ಸಹಾಯ ಬೇಕೆಂದಾಗ ಇತರರು ಸಿಗಲಿಕ್ಕಿಲ್ಲ.ನೀವು
ಏಕಾಕಿಯಾಗುವ ಸಾಧ್ಯತೆಯನ್ನೂ
ನಿರಾಕರಿಸುವಂತಿಲ್ಲ...ಆ ಕಾರಣಕ್ಕೆ ಸದಾ ಸರ್ವದಾ ಎಲ್ಲರಿಗೂ ಹೇಗೆ ಬೇಕೋ ಹಾಗೆ ಒದ್ದಾಡಿಕೊಂಡು ಒದಗುವ ಮೊದಲೊಮ್ಮೆ ಯೋಚಿಸಿ ನೋಡಿ ನಂತರ ಮುಂದುವರೆಯಿರಿ...ಅಷ್ಟೇ...
No comments:
Post a Comment