ಯಾಕೋ ನೆನಪಾದವು...
ಒಬ್ಬಳೇ ಇದ್ದಾಗ ಬಾ"- ಎಂದು,
ಇಲ್ಲಿಯೇಕೆ ಬಂದೆ-" ಕೇಳಿದೆ...
ಅದು ಹೇಳಿತು-
"ಈ ಮಹಾಗುಂಪಿನಲ್ಲೂ
ನೀನೆನಗೆ 'ಒಬ್ಬಳೇ'- ಕಂಡೆ...
*ಅಳುವ ಕಡಲೊಳು
ತೇಲಿ ಬರುತಲಿದೆ-
ನಗೆಯ ಹಾಯಿ ದೋಣಿ...
*"ನಗುವಾಗ ಎಲ್ಲ ನಂಟರು...
ಅಳುವಾಗ ಯಾರೂ ಇಲ್ಲ..."
*"ನಕ್ಯಾಕ ಮರಸತೀ ದುಃಖ
ತುಟಿಕಚ್ಚಿ ಹಿಡಿಯದಿರು ಬಿಕ್ಕ..."
*"ಅಳಬ್ಯಾಡ ತಂಗಿ ಅಳಬ್ಯಾಡ...
ನಿನ್ನ ಕಳುಹಬಂದವರೇನೂ
ಉಳುಹುಕೊಂಬುವರಿಲ್ಲ...
No comments:
Post a Comment