Wednesday, 26 August 2026

ಬಿನತಿ...

ಮೊಬೈಲ್, ಬೇಸರ, ಸುತ್ತಲಿನ ಜಗತ್ತು
ಮರೆತು ಕೆಲ ವರ್ಷಗಳ ಹಿಂದೆ ನನ್ನೊಡನೆ ಬಾ- 
ಕೇವಲ ಒಮ್ಮೆ ಮಾತ್ರ...

ನೆನಪಿಸಿಕೋ 
ಗೆಳೆಯ- ಗೆಳತಿಯರೇ ..
ಅಂಚೆಯವರಾಗುತ್ತಿದ್ದ ಆ ಕಾಲ..

ಕೈಯಲ್ಲಿಯ ಶುಭಾಶಯ ಕಾರ್ಡ ಯಾವುದೇ ಕಂಪನಿಯದಾಗಿರದೇ ಕೈಯಲ್ಲಿ ಬರೆದುದಾಗಿದ್ದುದ...
ಬದಿಯ ಟೇಪ್ ರೆಕಾರ್ಡರ್ನಲ್ಲಿ
ಮುದ್ರಿತ ಹಾಡುಗಳಲ್ಲ,
ನಮ್ಮ ಹೃದಯದ 'ಹಾಲ್-' ಕೇಳುತ್ತಿದ್ದುದ...

ಹುಟ್ಟುಹಬ್ಬದ ದಿನ ಯುನಿಫಾರ್ಮ ಹಾಕದೇ ನಮ್ಮವೇ ಹೊಸ ಬಟ್ಟೆ ಹಾಕುತ್ತಿದ್ದುದರ ಸಂತಸ...
ಮನೆಯಿಂದ ಬರಿ ಕಾಡಿಗೆಹಚ್ಚಿ ನಡೆದು ದಾರಿಯುದ್ದಕ್ಕೂ ತಯಾರಾಗುತ್ತಿದ್ದ ಸೊಗಸ...

ಒಬ್ಬಳೇ ನಡೆಯುತ್ತಿದ್ದರೆ
ಮುಖ ಇಳಿದುಹೋಗುತ್ತಿತ್ತು,..
ಗೆಳತಿ ಬದಿಯಿದ್ದರೆ
ಮನೆವರೆಗೂ ಖುಶಿ ಬರುತ್ತಿತ್ತು...

ಎರಡು ಬಾರಿ ಗಂಟೆ ಬಾರಿಸಿದರೂ
ಯಾರದೆಂದು ತಿಳಿದುಬಿಡುತ್ತಿತ್ತು..
ಫೋನಿನ ತಂತಿಗಳನ್ನಲ್ಲ ,
ಮನದ ತಂತುಗಳೇ ಜೋಡಿಸಿದಂತಿತ್ತು...

ಮಳೆ ಸುರಿದು ಬಯಲಾದಾಗ 
ಮನೆಯ ಛತ್ತು ಏರುತ್ತಿದ್ದೆವು... 
ಈಗ ಆ ಮಳೆ/- ಛತ್ತು ಎರಡೂ ಇಲ್ಲ...

ಬರಿ ಹಗಲು ರಾತ್ರಿಯಾಗಿ,
ರಾತ್ರಿ ಹಗಲಾಗಿ ಸರಿದು ಹೋಗುತ್ತಿವೆ...

No comments:

Post a Comment

ಬಿನತಿ... ಮೊಬೈಲ್, ಬೇಸರ, ಸುತ್ತಲಿನ  ಜಗತ್ತು ಮರೆತು  ಕೆಲ ವರ್ಷಗಳ ಹಿಂದೆ ನನ್ನೊಡನೆ  ಬಾ-  ಕೇವಲ ಒಮ್ಮೆ ಮಾತ್ರ... ನೆನಪಿಸಿಕೋ  ಗೆಳೆಯ- ಗೆಳತಿಯರೇ .. ಅಂಚೆಯವರಾಗುತ...