Saturday, 11 April 2026

        ಬಹಳ ದಿನಗಳ ನಂತರವೊಂದು
ಚಂದನೆಯ- ನಿರಾಳದ- ಆರಾಮವಾದ
ದಿನ ಕಳೆಯಿತು...ಬಹಳ ದಿನಗಳಿಂದ ಒಂದು ದಿನ ಎಲ್ಲಾದರೂ ಹೋಗೋಣ-
ಎಂದು ವಿಚಾರ ನಡೆಸಿದ್ದೆವು ಶಾಲಿನಿ/ ನಾನು...ಮೀರಾಳ ಮನೆಗೆ ಭೇಟಿ ಕೊಟ್ಟು ಅವರನ್ನೂ ಕರೆದುಕೊಂಡು ಶಾರದಾ ನರೇಂದ್ರ ಅವರ ಮನೆಗೆ ಹೋಗಿ ಬರೋಣ ಎಂಬುದು ಶಾಲಿನಿಯ ವಿಚಾರ .ನಾನೂ 'ಹೂಂ' ಅಂದೆ...ನನಗೂ ಹೊರ ಬೀಳದೇ ಬಹಳ ದಿನಗಳಾದದ್ದೂ ಒಂದು
ಕಾರಣವಿತ್ತು ಎನ್ನಿ.ಯಾವುದೇ ಅಡಚಣಿ ಯಿಲ್ಲದೇ ,ಆರಾಮವಾಗಿ, ಅಂದುಕೊಂಡ ದ್ದನ್ನೆಲ್ಲ ಮುಗಿಸಿ ಮನೆಗೆ ತಲುಪಿದಾಗ
ಸಾಯಂಕಾಲ ಆರು ಗಂಟೆ...ನಮ್ಮ outing ಗಳನ್ನು ನೆನಪುಗಳಾಗಿ ದಾಖಲಿ ಸಲು ತೆಗೆದ ಕೆಲ ಚಿತ್ರಗಳು ನನ್ನ ಸಂಗ್ರಹ
ಸೇರಿದವು...
               ನಾನು ಸಾಹಿತ್ಯ ಓದಲು ಪ್ರಾರಂಭಿಸಿದಾಗ ನನ್ನನ್ನು ತೀವ್ರವಾಗಿ
ಪ್ರಭಾವಿಸಿದವರು ದೊಡ್ಡೇರಿ ವೆಂಕಟಗಿರಿ
ರಾವ್...ಅವರ ಸಂಪ್ರದಾನ/ ದೃಷ್ಟಿದಾನ /ಅವದಾನ- ಇಂಥ ಕಾದಂಬರಿಗಳು ನನ್ನ ಓದಿನ priorities ಆಗಿದ್ದವು.ಅವರ ಮಗಳು ಅನುರಾಧಾ ಬಿ ರಾವ್/ಸೊಸೆ
ಶಾರದಾ ನರೇಂದ್ರ ಇವರ ಸ್ನೇಹವಾದ ಮೇಲೆ ಹಳೆಯ ನೆನಪುಗಳು ಮತ್ತೆ ಗರಿಗೆದರಿವೆ...
   ‌‌‌            ಶಾರದಾ ಹಾಗೂ ಅವರ ಪತಿಯ ಉಪಚಾರ/ ಅವರ ಭವ್ಯ ವಿಶೇಷ ನಕ್ಷೆಯ ಮನೆ/ರುಚಿಕರವಾದ
ಉಪಹಾರ/ಹಾರ್ದಿಕ ಮಾತುಕತೆಗಳು
ಇಂದಿನ ದಿನವನ್ನು ಅವಿಸ್ಮರಣೀಯವಾಗಿ ಸಿದವು...
 ‌‌‌           ನಮಗೆ ರುಚಿಕರವಾದ ಉತ್ತರ ಕರ್ನಾಟಕದ ಊಟ ಮಾಡಿಸಿ/ಮನೆ ತೋರಿಸಿ/ನಾವು ಮನೆಗೆ ಮರಳುವ ವರೆಗೆ ನಮ್ಮ ಜೊತೆಗೇ ಸಾಥ್ ಕೊಟ್ಟ ಗೆಳತಿ ಮೀರಾ ಅವರನ್ನು ಮರೆಯಲಾ ದೀತೆ?



               

No comments:

Post a Comment

        ಬಹಳ ದಿನಗಳ ನಂತರವೊಂದು ಚಂದನೆಯ- ನಿರಾಳದ- ಆರಾಮವಾದ ದಿನ ಕಳೆಯಿತು...ಬಹಳ ದಿನಗಳಿಂದ ಒಂದು ದಿನ ಎಲ್ಲಾದರೂ ಹೋಗೋಣ- ಎಂದು ವಿಚಾರ ನಡೆಸಿದ್ದೆವು ಶಾಲಿನಿ/ ನಾನು....