Friday, 22 May 2026

          ಇಂದಿಗೆ ಐದು ವರ್ಷಗಳ ಹಿಂದೆ ನನ್ನ ಎರಡನೇ ಮೊಮ್ಮಗ ನಿಕ್ಷೇಪನನ್ನು ಮದ್ರಾಸ್ IIT ಗೆ ಬಿಟ್ಟು ಬಂದಿದ್ದೆವು. ಮೊದಲ ಸಲ ಹುಡುಗನನ್ನು ಬಿಟ್ಟು ಬರುವಾಗಿನ ಚಿಂತೆ/ಕಾತರ/ಕಾಳಜಿ
ಎಲ್ಲವನ್ನೂ ಅನುಭವಿಸುವದರ ಜೊತೆಜೊತೆಗೆ ಅವನು ಮುಂದೆ ಮಾಡುವ ಸಾಧನೆಗೆ ಮೆಚ್ಚುಗೆಯೂ ಇತ್ತು.ಐದು ವರ್ಷಗಳನ್ನು ಅನಾಯಾಸ ವಾಗಿ ಕಳೆದು/ಬೇಕೆಂದಾಗ ಮದ್ರಾಸ ದಿಂದ ಬೆಂಗಳೂರಿಗೆ ಅಡ್ಡಾಡಿ/ತಾನು 
ಇದ್ದಂತೆ ನಮ್ಮೆಲ್ಲರನ್ನೂ free of tension- ಇಟ್ಟು/MTech ಪೂರ್ಣ ಮಾಡಿಕೊಂಡು/ B C G ಯಲ್ಲಿ job 
Confirm ಮಾಡಿಕೊಂಡು ಇಂದು 
ಬೆಳಿಗ್ಗೆ ಬೆಂಗಳೂರಿಗೆ ವಾಪಸ್ಸು ಆಗಿದ್ದಾನೆ.
           ಒಂದು ಪ್ರಮುಖ ಘಟ್ಟ ಕೊನೆಗೊಂಡು 'ಉದ್ಯೋಗ ಪರ್ವ'- ಇನ್ನು ಶುರು.ಅದರ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡು ತನ್ನ ಇನ್ನುಳಿದ ಗುರಿ+ ಸಾಧನೆಗಳ ಕಡೆಗೆ
ಮುಖ ಮಾಡಲಿ...ಅವನ ಅಭೀಪ್ಸೆಗಳಿಗೆ
ನಮ್ಮ ಹಿರಿಯರ ಆಶೀರ್ವಾದ/ದೇವರ 
ಅನುಗ್ರಹಗಳು ಬೆಂಗಾವಲಿಗಿರಲಿ...
             
 ‌

No comments:

Post a Comment

          ಇಂದಿಗೆ ಐದು ವರ್ಷಗಳ ಹಿಂದೆ ನನ್ನ ಎರಡನೇ ಮೊಮ್ಮಗ ನಿಕ್ಷೇಪನನ್ನು ಮದ್ರಾಸ್ IIT ಗೆ ಬಿಟ್ಟು ಬಂದಿದ್ದೆವು. ಮೊದಲ ಸಲ ಹುಡುಗನನ್ನು ಬಿಟ್ಟು ಬರುವಾಗಿನ ಚಿಂತೆ/...