Sunday, 7 June 2026

ಬಾಲ್ಯದ ಒಂದು
ಕಾಲವಿತ್ತು- ಸಂತೋಷದ 
ಬಹು ಭಾರೀ 
ಭಂಡಾರವೇ ಇತ್ತು-

ಚಂದಿರನ ಪಡೆವ
ಬಯಕೆಯಿತ್ತು-ಮನಸ್ಸಿಗೆ,
ಬಣ್ಣದ ಚಿಟ್ಟೆಗಳ
ಹುಚ್ಚು ಹಂಬಲವಿತ್ತು-

ಬೆಳಗಿನ ಸುದ್ದಿಗಳ
ಸದ್ದಿರಲಿಲ್ಲ-
ಸಂಜೆಯ ಠಿಕಾಣಾದ
ಅರಿವಿರಲಿಲ್ಲ-

ಶಾಲೆಯಿಂದ 
ದಣಿದು ಬಂದರೂ
ಆಟದ ಬಯಲು
ಕರೆಯುತ್ತಿತ್ತು-

ಮಳೆಯ ನೀರಿನಲ್ಲಿ
ಕಾಗದದ ದೋಣಿಯಿತ್ತು-
ಎಷ್ಟು ಆಡಿ ದಣಿದರೂ
ಮರುದಿನದ ಬೋಣಿಯಿತ್ತು!!!

ಆಡಿ ಬಂದಮೇಲೆ
ಅಜ್ಜಿಯ ಕಥೆಯಿತ್ತು-
ಕಥೆಗಳಲ್ಲಿ-ನಿದ್ದೆಗೊಯ್ತುವ
ಸುಖದ ಮೋಡಿ- ಇತ್ತು-

ಪ್ರತಿ ರುತುವಿಗೂ
ತನ್ನದೇ ಸೊಬಗಿತ್ತು-
ಅಳಲೊಂದು ಕಾರಣ-
ನಗಲೊಂದು ನೆಪ ಬೇಕಿರಲಿಲ್ಲ!!!

ನಾವೇಕೆ ದೊಡ್ಡವರಾದೆವು??!!
ಆ ಬಾಲ್ಯದ ದಿನಗಳೇ ಚಂದಾಗಿದ್ದವು!!?

No comments:

Post a Comment

ಬಾಲ್ಯದ ಒಂದು ಕಾಲವಿತ್ತು- ಸಂತೋಷದ  ಬಹು ಭಾರೀ  ಭಂಡಾರವೇ ಇತ್ತು- ಚಂದಿರನ ಪಡೆವ ಬಯಕೆಯಿತ್ತು-ಮನಸ್ಸಿಗೆ, ಬಣ್ಣದ ಚಿಟ್ಟೆಗಳ ಹುಚ್ಚು ಹಂಬಲವಿತ್ತು- ಬೆಳಗಿನ ಸುದ್ದಿಗಳ ಸ...