ಹೊತ್ತಿ ಕರಕಲಾಗುವ ಚಪಾತಿ/ತಡವಾದರೆ ಕಣ್ಮುಂದೆಯೇ ಸರಿದು ಮರೆಯಾಗುವ ಒಂದೇ ಒಂದು ಕೆಂಪು ಬಸ್ಸು- ಎಲ್ಲವನ್ನೂ ಮರೆತು ಪಕ್ಕಕ್ಕೆ ಸರಿಸಿ
ಇಪ್ಪತ್ತೆರಡು ವರ್ಷಗಳು.( 58 ಕ್ಕೆ ನಿವೃತ್ತಿ).
" ನಿಮ್ಮಿಂದ ಇನ್ನು ಕೆಲಸವಾಗುವುದಿಲ್ಲ.
ಮನೆಯಲ್ಲಿ ಹಾಯಾಗಿರಿ" - ಎಂದು ಶಾಲು/ಮಾಲೆ ಹಾಕಿ ಒಮ್ಮೆ ಕಳಿಸಿದರೆ ಆಯಿತು ನಾವು ಏನಿದ್ದರೂ ಮಾಜಿ... ಏನಿದ್ದರೂ ಮನೆಯಲ್ಲಿ ಆದಾಗ, ಆದಷ್ಟು, ಆದ ಹಾಗೆ ಏನಾದರೂ ಕೈಯಾಡಿಸಿದರೂ ಅದು ಆಟಕ್ಕುಂಟು... ಲೆಕ್ಕಕ್ಕಿಲ್ಲ... ಅಂತಾರಲ್ಲ ಹಾಗೇನೇ... ಹಾಗಿದ್ದಾಗ ನಮಗೂ ಅನುಕೂಲವಾಗುವಂತೆ ಒಬ್ಬಿಬ್ಬರು ಕೆಲಸದವರ ಪ್ರವೇಶವಾಗುವು ದೂ ಉಂಟು...
ಹಾಗೆ ಬಂದವರಿಗೂ ಹೊಂದಿ ಕೊಂಡು, ನಮ್ಮದೂ ಮರ್ಯಾದೆಯನ್ನೂ
ಕಾಯ್ದುಕೊಂಡು ಇರುವದೊಂದು ಅನಿವಾರ್ಯವಾದ ಕಲೆ...ಅದರಲ್ಲಿ ನಾನು ತಕ್ಕಮಟ್ಟಿಗೆ ಯಶಸ್ವಿ...
No comments:
Post a Comment